Jaishankar Japan Visit : ಸ್ವಾತಂತ್ರ್ಯದ ಬಳಿಕ ನಮ್ಮ ಮೇಲೆ ದಾಳಿ ನಡೆಯಿತು, ಆಗ ಜಗತ್ತಿನ ತತ್ವಗಳು ಎಲ್ಲಿದ್ದವು ?

ರಷ್ಯಾ-ಉಕ್ರೇನ್ ಯುದ್ಧದ ಕುರಿತು ಭಾರತದ ನಿಲುವಿನ ಬಗ್ಗೆ ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವ ಡಾ. ಜೈಶಂಕರ ಇವರ ಉತ್ತರ !

ಟೋಕಿಯೊ (ಜಪಾನ) – ಭಾರತದ ವಿದೇಶಾಂಗ ಸಚಿವ ಡಾ. ಜೈಶಂಕರ ಇವರು ಜಪಾನ ಪ್ರವಾಸದಲ್ಲಿದ್ದಾರೆ. ಅಲ್ಲಿ ಅವರಿಗೆ ಜಪಾನಿನ ಪತ್ರಕರ್ತರೊಬ್ಬರು, ‘ನೀವು ಸಾರ್ವಭೌಮತ್ವದ ಗೌರವದ ಬಗ್ಗೆ ಮಾತನಾಡುತ್ತೀರಿ; ಆದರೆ ಉಕ್ರೇನ್ ಮೇಲೆ ರಷ್ಯಾ ನಡೆಸಿದ ಆಕ್ರಮಣದ ಬಗ್ಗೆ ಭಾರತ ಎಂದಿಗೂ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಇದು ದ್ವಂದ್ವ ನೀತಿಯಲ್ಲವೇ?’ ಎಂದು ಕೇಳಿದರು. ಇದಕ್ಕೆ ಡಾ. ಜೈಶಂಕರ ಇವರು ಉತ್ತರಿಸುತ್ತಾ, ‘ಸ್ವಾತಂತ್ರ್ಯ ಸಿಕ್ಕಿದ ಬಳಿಕ ತಕ್ಷಣವೇ ಭಾರತದ ಮೇಲೆ ದಾಳಿಗಳು ನಡೆದವು. ನಮ್ಮ ಗಡಿಗಳು ಹಲವು ಬಾರಿ ಬದಲಾಗಿವೆ; ಆದರೆ ಯಾರೂ ತತ್ವಗಳು ಅಥವಾ ಸಿದ್ಧಾಂತಗಳನ್ನು ಹೇಳುತ್ತಾ ನಮ್ಮೊಂದಿಗೆ ಬರಲಿಲ್ಲ. ಇಂದಿಗೂ, ಭಾರತದ ಕೆಲವು ಭಾಗಗಳು ಇತರ ದೇಶಗಳು ತಮ್ಮ ವಶದಲ್ಲಿ ಇಟ್ಟುಕೊಂಡಿವೆ; ಆದರೆ ಇದಕ್ಕೆ ಯಾವ ಸಿದ್ಧಾಂತಗಳೂ ಇಲ್ಲ ಮತ್ತು ಅವರು ಭಾರತಕ್ಕೆ ಬೆಂಬಲಿಸುವ ವಿಷಯದಲ್ಲಿ ಮಾತನಾಡುವುದಿಲ್ಲ’ ಎಂದು ಹೇಳಿದರು.

ಜೈಶಂಕರ ಮಾತನ್ನು ಮುಂದುವರಿಸಿ,

1. ಜಗತ್ತನ್ನು ಅರ್ಥಮಾಡಿಕೊಳ್ಳುವುದು ಬಹಳ ಕಠಿಣವಿದೆ. ಇಲ್ಲಿ ಅನೇಕ ನಂಬಿಕೆಗಳು ಮತ್ತು ಸಿದ್ಧಾಂತಗಳಿವೆ. ಜಾಗತಿಕ ರಾಜಕಾರಣದಲ್ಲಿ ಅನೇಕ ಬಾರಿ ದೇಶಗಳು ತನ್ನ ಅನುಕೂಲಕ್ಕೆ ಅನುಗುಣವಾಗಿ ತತ್ವಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲದೇ ಅದನ್ನು ಇತರ ದೇಶಗಳ ಮೇಲೆ ತಮ್ಮ ತತ್ವಗಳ ಪಾಲನೆ ಮಾಡಲು ಒತ್ತಡ ಹೇರುತ್ತಾರೆ.

2. ಇಂದು ಭಾರತಕ್ಕೆ, ಸಾರ್ವಭೌಮತ್ವದಂತಹ ಮೌಲ್ಯಗಳ ರಕ್ಷಣೆ ಮಾಡಬೇಕು ಎಂದು ಹೇಳುತ್ತಾರೆ. ಆದರೆ 80 ವರ್ಷಗಳ ಮೊದಲು ಈ ಮೌಲ್ಯಗಳು ಎಲ್ಲಿಯೂ ಕಾಣಿಸುತ್ತಿರಲಿಲ್ಲ.

ವಿಶ್ವಸಂಸ್ಥೆಯಲ್ಲಿ ಸುಧಾರಣೆಯಾಗಬೇಕು ! 

1. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ವಿಷಯದ ಬಗ್ಗೆ ಜೈಶಂಕರ ಇವರು ಮಾತನಾಡಿ, ಇಂದು ಹೆಚ್ಚಿನ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬದಲಾವಣೆಯಾಗಬೇಕು ಎಂದು ಅನಿಸುತ್ತಿದೆ. ವಿಶ್ವಸಂಸ್ಥೆ ಸ್ಥಾಪನೆಯಾದಾಗ ಅದರಲ್ಲಿ ಸುಮಾರು 50 ದೇಶಗಳಿದ್ದವು. ಆದರೆ ಇಂದು 200 ದೇಶಗಳು ವಿಶ್ವಸಂಸ್ಥೆಯ ಸದಸ್ಯರಾಗಿದ್ದಾರೆ. ಯಾವಾಗ ಸಂಸ್ಥೆಯ ಸದಸ್ಯರ ಸಂಖ್ಯೆ 4 ಪಟ್ಟುಗಳಿಂದ ಹೆಚ್ಚಳವಾಗುತ್ತದೆಯೋ, ಆಗ ಅದರ ಮುಖಂಡ ಮತ್ತು ಕಾರ್ಯಪದ್ಧತಿ ಮೊದಲಿನಂತೆ ಇರಲು ಸಾಧ್ಯವಾಗುವುದಿಲ್ಲ.

ಜೈಶಂಕರ ಇವರು ಚೀನಾದ ಹೆಸರನ್ನು ಹೇಳದೇ, ಯಾವ ದೇಶಗಳಿಗೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬದಲಾವಣೆ ಬೇಡವಾಗಿದೆಯೋ, ಅವರು ಅದೇ ವ್ಯವಸ್ಥೆಯನ್ನು ಮುಂದುವರಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು.

2. ಭಾರತ ಮತ್ತು ಜಪಾನ ದೇಶಗಳಿಗೆ ಮಂಡಳಿಯಲ್ಲಿ ಸ್ಥಾನ ದೊರಕುವ ಆವಶ್ಯಕತೆಯಿದೆ. ಜಗತ್ತಿನ ಅತ್ಯಧಿಕ ಜನಸಂಖ್ಯೆ ಹೊಂದಿರುವ ದೇಶ ಮತ್ತು ಕೆಲವು ಪ್ರಮುಖ ಪೂರೈಕೆದಾರ ದೇಶಗಳನ್ನು ವಿಶ್ವಸಂಸ್ಥೆಯಿಂದ ಹೊರಗಿಡುವುದು ಈ ಮಂಡಳಿಗೆ ಒಳ್ಳೆಯದಲ್ಲ. ಆದುದರಿಂದ ಈ ಎರಡೂ ದೇಶಗಳಿಗೆ ಬೇಗನೆ ಮಂಡಳಿಯಲ್ಲಿ ಸ್ಥಾನ ನೀಡಬೇಕು ಎನ್ನುವುದು ನಮ್ಮ ಇಚ್ಛೆಯಾಗಿದೆ.

3. ಇಲ್ಲಿ ಒಂದೇ ಒಂದು ಆಫ್ರಿಕನ ದೇಶ ಸದಸ್ಯರಾಗಿಲ್ಲ. ಒಂದೇ ಒಂದು ದಕ್ಷಿಣ ಅಮೇರಿಕಾ ಖಂಡದ ದೇಶ ಸದಸ್ಯರಾಗಿಲ್ಲ. ಆಫ್ರಿಕಾ ಖಂಡದಲ್ಲಿ 50ಕ್ಕೂ ಹೆಚ್ಚು ದೇಶಗಳಿವೆ; ಆದರೆ ಒಂದೇ ಒಂದು ದೇಶ ಸದಸ್ಯರಾಗಿಲ್ಲ.

4. ಇಂದು ಜಗತ್ತಿನಾದ್ಯಂತ ಅನೇಕ ಮಹತ್ವದ ಪ್ರಶ್ನೆಗಳಿವೆ; ಆದರೆ ಇದರಲ್ಲಿ ವಿಶ್ವಸಂಸ್ಥೆ ಯಾವುದೇ ನಿಲುವನ್ನು ತೆಗೆದುಕೊಳ್ಳುತ್ತಿಲ್ಲ.

5. ಭದ್ರತಾ ಮಂಡಳಿಯಲ್ಲಿ ಬದಲಾವಣೆಯಾಗುವುದು, ಇದು ನಮಗೆ ತಿಳಿದಿದೆ. ಆದರೆ ಅದು ಯಾವಾಗ ಆಗುವುದು ? ಎಷ್ಟು ಸಮಯ ತಗಲುವುದು ? ಮತ್ತು ಅದರ ಸ್ವರೂಪ ಹೇಗಿರಲಿದೆ ? ಎನ್ನುವುದು ನೈಜ ಪ್ರಶ್ನೆಗಳಾಗಿವೆ.

(ಸೌಜನ್ಯ : Republic World)