ಟೆರಹಾನ (ಇರಾನ) – ಭಾರತದ ಪಶ್ಚಿಮ ಸಮುದ್ರ ದಡ ಮತ್ತು ಮಹಾಸಾಗರ ಪ್ರದೇಶಗಳ ಉಪಯೋಗವನ್ನು ಪಾಕಿಸ್ತಾನ ಮತ್ತು ಇರಾನ್‌ನಲ್ಲಿರುವ ಭಯೋತ್ಪಾದಕ ಗುಂಪುಗಳು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡಲು ಬಳಸುತ್ತಿವೆ. ಇದಕ್ಕಾಗಿ ಉಪಯೋಗಿಸಿರುವ ಪದ್ಧತಿಯು ಸಂಪೂರ್ಣವಾಗಿ ಚಲನಚಿತ್ರಗಳಲ್ಲಿ ತೋರಿಸಿರುವಂತಿದೆ. ಒಟ್ಟಾರೆ ಅವರು ಸಿಕ್ಕಿಬಿದ್ದರೂ ಅವರ ನಾಯಕನನ್ನು ಗುರುತಿಸಲಾಗುವುದಿಲ್ಲ. ಕಳ್ಳಸಾಗಣಿಕೆ ಮಾಡುವ ನೌಕೆಯ ಮುಖ್ಯ ಸೂತ್ರಧಾರನನ್ನು ಗುರುತಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಈ ನೌಕೆಯಿಂದ ಬಂಧಿಸಲಾಗಿರುವ ಜನರಿಗೆ ನೌಕೆಯಲ್ಲಿರುವ ಸರಕು ಯಾರದ್ದು ಅಥವಾ ಅವರಿಗೆ ಹಣವನ್ನು ನೀಡುವ ಜನರು ಯಾರು ಎನ್ನುವ ಮಾಹಿತಿಯಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಂಧನ ಮತ್ತು ವಿಚಾರಣೆಯಿಂದ ಹೆಚ್ಚಿನ ಯಾವುದೇ ಸುಳಿವೂ ಸಿಗುವುದಿಲ್ಲ.
1. ಭಾರತೀಯ ಭದ್ರತಾ ಇಲಾಖೆಗಳು ಅರಬ್ಬೀ ಸಮುದ್ರದಲ್ಲಿ ಗುಜರಾತಿನ ಸಮುದ್ರದ ಬಳಿ ಒಂದು ನೌಕೆಯನ್ನು ವಶಕ್ಕೆ ಪಡೆದರು ಮತ್ತು ಐವರು ಪಾಕಿಸ್ತಾನಿ ಶಂಕಿತರನ್ನು ಬಂಧಿಸಿತು. ಅವರಿಂದ ಮೂರು ಸಾವಿರಕ್ಕೂ ಹೆಚ್ಚಿನ ಕೆಜಿಯ ಮಾದಕ ಪದಾರ್ಥವನ್ನು ವಶಪಡಿಸಿಕೊಂಡಿದೆ. ಅರಬ್ಬೀ ಸಮುದ್ರದಲ್ಲಿ ಈ ರೀತಿಯ ಪ್ರತಿಯೊಂದು ದೋಣಿಯನ್ನು ನಿಲ್ಲಿಸಿ ಶೋಧನೆ ಮಾಡುವುದು ಅಸಾಧ್ಯವಾಗಿದೆ. ಭಾರತದ ಪಶ್ಚಿಮ ದಡವು ಉತ್ತರಕ್ಕೆ ಸೂರತ (ಗುಜರಾತ) ನಿಂದ ದಕ್ಷಿಣಕ್ಕೆ ಕನ್ಯಾಕುಮಾರಿ (ತಮಿಳುನಾಡು) ಇಲ್ಲಿಯವರೆಗೆ ಅಂದರೆ ಸರಿಸುಮಾರು 1 ಸಾವಿರ 500 ಕಿಮೀ ವರೆಗೆ ಹರಡಿದೆ. ಕಳ್ಳಸಾಗಣೆದಾರರು ಪಾಕಿಸ್ತಾನ ಮತ್ತು ಇರಾನ್ ಸಮುದ್ರ ದಡದಿಂದ ಭಾರತಕ್ಕೆ ಸರಕುಗಳನ್ನು ತಲುಪಿಸುವ ಕೆಲಸ ಮಾಡುತ್ತಾರೆ.
2. ಕಳ್ಳಸಾಗಾಣಿಕೆಗಾಗಿ ಬಳಸುವ ನೌಕೆಗಳು ಸಾಮಾನ್ಯವಾಗಿ 50-70 ಅಡಿ ಉದ್ದ, 15-20 ಅಡಿ ಅಗಲ ಮತ್ತು 10-12 ಅಡಿ ಎತ್ತರವಿರುತ್ತವೆ. ಅವುಗಳ ತೂಕ 1 ಸಾವಿರದ 500 ಟನ್ ಮತ್ತು ಅದರಲ್ಲಿ 15-20 ಜನರು ಇರಬಹುದು. ಈ ಭಯೋತ್ಪಾದಕ ಗುಂಪುಗಳು ಇರಾನ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಮತ್ತು ಮಾದಕ ಪದಾರ್ಥಗಳನ್ನು ಖರೀದಿಸುತ್ತವೆ. ಅರಬ್ಬಿ ಸಮುದ್ರದಲ್ಲಿ ಮತ್ತು ಹಿಂದೂ ಮಹಾಸಾಗರದ ಗಡಿಯಲ್ಲಿರುವ ದೇಶಗಳಿಗೆ ಪೂರೈಸುತ್ತವೆ.
3. `ಸಂಡೆ ಗಾರ್ಡಿಯನ’ ವರದಿಯಲ್ಲಿ, 1993 ರ ಮುಂಬಯಿ ಬಾಂಬ್ ಸ್ಫೋಟದಲ್ಲಿ ಉಪಯೋಗಿಸಿದ ಮದ್ದುಗುಂಡುಗಳು ಮತ್ತು 3 ಸಾವಿರ ಕಿಲೋಗಳಷ್ಟು ‘ಆರ್‌ಡಿಎಕ್ಸ್’ ಅನ್ನು ಪಾಕಿಸ್ತಾನದಿಂದ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಶ್ರೀವರ್ಧನ ತಾಲೂಕಿನ ಶೇಖಾಡಿ ಮತ್ತು ದಿಘಿ ಪರ್ವತ ಮಾರ್ಗದಿಂದ ಮುಂಬಯಿಯಗೆ ತರಲಾಗಿತ್ತು ಎಂದು ಹೇಳಿತ್ತು.
4. ಇರಾನಿನ ಚಾಬಹಾರ ಬಂದರು ಪ್ರದೇಶದಲ್ಲಿ ಹಲವು ಶಸ್ತ್ರಸಜ್ಜಿತ ಗುಂಪುಗಳು ಕಾರ್ಯನಿರ್ವಹಿಸುತ್ತಿದ್ದು, ಪಾಕಿಸ್ತಾನದ ಸಹಕಾರದೊಂದಿಗೆ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿವೆ. ಇಂತಹುದೇ ಒಂದು ಗುಂಪು ಜೈಶುಲ-ಅದಲ್ ಇವನು ಭಾರತೀಯ ನಾಗರಿಕ ಕುಲಭೂಷಣ ಜಾಧವರನ್ನು ಅಪಹರಿಸಿರುವ ಸಂಶಯವಿದೆ. ಜಾಧವರು ಮಾರ್ಚ 2016ರಲ್ಲಿ ಚಾಬಹಾರದಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ವಶಕ್ಕೆ ನೀಡಲಾಗಿತ್ತು.
5. ಈ ವರ್ಷ ಜನವರಿ 11 ರಂದು ಅಮೇರಿಕಾ ನೌಕಾದಳವು ಅರಬ್ಬಿ ಸಮುದ್ರದಲ್ಲಿ ಸೊಮಾಲಿಯಾದ ಬಂದರು ಪ್ರದೇಶದಲ್ಲಿ ಒಂದು ಸಣ್ಣ ನೌಕೆಯನ್ನು ತಡೆದಿದ್ದರು. ಈ ದೋಣಿಯಲ್ಲಿ ಅಮೇರಿಕಾ ಸೈನಿಕರಿಗೆ ಇರಾನ್‌ನನಲ್ಲಿ ನಿರ್ಮಿಸಿರುವ ಶಸ್ತ್ರಾಸ್ತ್ರಗಳು ಸಿಕ್ಕಿತು. ಈ ಕಾರ್ಯಾಚರಣೆಯಲ್ಲಿ ದೋಣಿಯಿಂದ 14 ಜನರನ್ನು ಬಂಧಿಸಲಾಯಿತು. ಇವರೆಲ್ಲರ ಬಳಿಯೂ ಪಾಕಿಸ್ತಾನದ ಪರಿಚಯಪತ್ರವಿತ್ತು. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಅವರು ಪಾಕಿಸ್ತಾನದಿಂದ ಬಂದಿರುವುದಾಗಿ ಒಪ್ಪಿಕೊಂಡರು. ಆದರೆ ಬಳಿಕ ಅವರು, ತಾವು ಇರಾನಿನ ಚಾಹಬಾರ ಬಂದರಿನಿಂದ ಬಂದಿರುವಾಗಿ ಹೇಳಿದ್ದರು. ಅಮೇರಿಕೆ ತನಿಖಾ ದಳದ ಹೇಳಿಕೆಯನುಸಾರ ದೋಣಿಯಿಂದ ಸಿಕ್ಕಿರುವ ಕ್ಷಿಪಣಿಗಳ ಭಾಗಗಳು ಹುತಿ ಬಂಡುಕೋರರಿಗಾಗಿ ಇತ್ತು ಮತ್ತು ಅದನ್ನು ಇರಾನಿನ ‘ರಿವ್ಹೊಲ್ಯುಶನರಿ ಗಾರ್ಡ ಕಾರ್ಪ್ಸ’ ಕಳುಹಿಸಿತ್ತು.