ಚೀನಾದ ಜೊತೆಗಿನ ರಕ್ಷಣಾ ಒಪ್ಪಂದದಿಂದ ಮಾಲ್ಡಿವ್ಸ್‌ಗೆ ದೊಡ್ಡ ನಷ್ಟ ! – ಪಾಕಿಸ್ತಾನಿ ತಜ್ಞರು

ಮಾಲೆ (ಮಾಲ್ಡಿವ್ಸ್‌) – ಮಾಲ್ಡಿವ್ಸ್‌ನ ಹೊಸ ಚೀನಾ ಬೆಂಬಲಿಗ ರಾಷ್ಟ್ರಾಧ್ಯಕ್ಷ ಮಹಮ್ಮದ್ ಮುಯಿಜ್ಜೂ ಇವರು ಚೀನಾದ ಜೊತೆ ರಕ್ಷಣಾ ಒಪ್ಪಂದ ಮಾಡಿದ್ದಾರೆ. ಚೀನಾದ ಜೊತೆಗೆ ಮಾಡಿರುವ ಒಪ್ಪಂದದಿಂದ ಮಾಲ್ಡಿವ್ಸ್‌ಗೆ ದೊಡ್ಡ ಪ್ರಮಾಣದಲ್ಲಿ ಹಾನಿ ಆಗುವುದು, ಎಂದು ಪಾಕಿಸ್ತಾನಿ ರಕ್ಷಣಾ ತಜ್ಞ ಡಾ. ಕಮರ ಚಿಮಾ ಇವರು ಅವರ ಒಂದು ‘ಬ್ಲಾಗ್’ನಲ್ಲಿ ಈ ವಿಷಯದ ಕುರಿತು ಅಭಿಪ್ರಾಯ ಮಂಡಿಸಿದ್ದಾರೆ. ಡಾ. ಚಿಮಾ ಇವರು ಮಾಲ್ಡಿವ್ಸ್‌ ಅದರ ಹತ್ತಿರದ ದೇಶದ ಎಂದರೆ ಭಾರತದ ವಿಶ್ವಾಸ ಕಡಿಮೆಗೊಳಿಸುತ್ತಿದೆ ಎಂದು ಹೇಳಿದರು.

ಡಾ. ಕಮರ ಚಿಮಾ ಇವರು ಮಾತು ಮುಂದುವರಿಸುತ್ತಾ, ಮುಯಿಜ್ಜೂ ಇವರು ಭಾರತ ವಿರೋಧಿ ಮುಖವಾಡ ಮೊದಲು ಬೆಳಕಿಗೆ ಬರಲಿಲ್ಲ. ರಾಷ್ಟ್ರಪತಿ ಆದ ನಂತರ ಮುಯಿಜ್ಜೂ ಸತತ ಭಾರತ ವಿರೋಧಿ ನಿಲುವು ತಾಳುತ್ತಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಮುಯಿಜ್ಜುವರು ಮೊಟ್ಟ ಮೊದಲು ಇಲ್ಲಿ ಸಹಾಯ ಮತ್ತು ಪ್ರಶಿಕ್ಷಣಕ್ಕಾಗಿ ಉಪಸ್ಥಿತ ಇರುವ ಭಾರತೀಯ ಸೈನಿಕರನ್ನು ಹಿಂತಿರುಗಿ ಕಳಿಸುವುದರ ಕುರಿತು ಹೇಳಿಕೆ ನೀಡಿದ್ದರು. ಅವರು, ವಿದೇಶಿ ಸೈನಿಕರನ್ನು ದೇಶದಲ್ಲಿ ಇರಿಸಿಕೊಂಡು ಮಾಲ್ಡಿವ್ಸ್‌ಗೆ ಯಾವುದೇ ಛಾವಣಿಯ ರೂಪ ನೀಡುವುದಿಲ್ಲ; ಆದರೆ ಈಗ ಚೀನಾದ ಜೊತೆಗೆ ನಡೆದಿರುವ ರಕ್ಷಣಾ ಒಪ್ಪಂದದ ನಂತರ ಮುಯಿಜ್ಜೂ ಇವರು ಚೀನಾದ ಸೂಚನೆಯೇ ಪಾಲಿಸುತ್ತಿರುವುದು ಸ್ಪಷ್ಟ ಪಡಿಸಿದ್ದಾರೆ.

ಭಾರತವನ್ನು ಈಕಟ್ಟಿಗೆ ಸಿಗಿಸುವ ಚೀನಾದ ಷಡ್ಯಂತ್ರ !

ಪಾಕಿಸ್ತಾನಿ ರಕ್ಷಣಾ ತಜ್ಞರು ಮಾತು ಮುಂದುವರಿಸಿ, ಚೀನಾಗೆ ಮಾಲ್ಡಿವ್ಸ್‌ನಲ್ಲಿ ಪ್ರವೇಶ ದೊರೆತರೆ, ಅದು ಅಲ್ಲಿ ಕುಳಿತು ಭಾರತದ ಮಾಹಿತಿ ಸಂಗ್ರಹಿಸಬಹುದು, ಇನ್ನೊಂದು ಕಡೆ ಅರಬಿ ಸಮುದ್ರದಲ್ಲಿ ಪಾಕಿಸ್ತಾನ ಇದೆ, ಅದರ ಜೊತೆಗೆ ಚೀನಾದ ಒಳ್ಳೆಯ ಸಂಬಂಧ ಇದೆ, ಅದರ ಜೊತೆಗೆ ಹಿಂದೂ ಮಹಾಸಾಗರದಲ್ಲಿ ಕೂಡ ಅದರ ಉಪಸ್ಥಿತಿ ಇದ್ದರೆ, ಯಾವುದರಿಂದ ಅದು ‘ವೆಸ್ಟರ್ನ್ ಬ್ಲಾಕ್’ ಮೇಲೆ ಕೂಡ (ಮೋಜಂಬಿಕ, ಸೆಯಚೆಲ್ಸ್, ಮಾಡಗಾಸ್ಕರ್, ಸೋಮಾಲಿಯಾ ದಕ್ಷಿಣ ಆಫ್ರಿಕಾ ಮುಂತಾದ ದೇಶಗಳ ಮೇಲೆ ಕೂಡ) ನಿಗಾ ಇಡಲು ಸಕ್ಷಮಗೊಳ್ಳುವುದು.

ಭಾರತದ ಜೊತೆಗೆ ಬಿಗುವಿನ ವಾತಾವರಣದ ನಂತರ ಮಾಲ್ಡಿವ್ಸ್ ನ ಪ್ರವಾಸೋದ್ಯಮಕ್ಕೆ ಪೆಟ್ಟು !

ಡಾ. ಚೀಮಾ ಇವರು, ಮಾಲ್ಡಿವ್ಸ್‌ನ ಅರ್ಥ ವ್ಯವಸ್ಥೆಯಲ್ಲಿ ಪ್ರವಾಸೋದ್ಯಮದ ಪಾಲು ಮೂರನೇ ಒಂದರಷ್ಟು ಇದೆ. ಇದರಲ್ಲಿ ರಷ್ಯಯನ್ ಮತ್ತು ಭಾರತೀಯ ಪ್ರವಾಸಿಗರ ಸಂಖ್ಯೆ ಹೆಚ್ಚು ಇದೆ. ಭಾರತದ ಜೊತೆಗಿನ ಒತ್ತಡದ ನಂತರ ಇಲ್ಲಿಯ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿದೆ. ಆದರೆ ಈಗ ಚೀನಾ ತನ್ನ ಪ್ರವಾಸೋದ್ಯಮ ಮಾಲ್ಡಿವ್ಸ್‌ ಕಳುಹಿಸಿ ತಾನು ಮಾಲ್ಡಿವ್ಸ್‌ನ ಜೊತೆಗೆ ಇದ್ದೇನೆ ಎಂದು ತೋರಿಸುವ ಪ್ರಯತ್ನ ಮಾಡಿತು. ಅದರ ಜೊತೆಗೆ ಭಾರತವು ಈಗ ಲಕ್ಷದ್ವೀಪವನ್ನು ಪ್ರವಾಸೋದ್ಯಮ ಕೇಂದ್ರ ಎಂದು ಸಿದ್ಧಗೊಳಿಸುವ ಯೋಜನೆ ರೂಪಿಸಿದೆ.

ಮಾಲ್ಡಿವ್ಸ್ ಚೀನಾದ ಬಲೆಗೆ !

ಮುಯಜ್ಜೂ ಇವರಿಗೆ, ಚೀನಾ ಮತ್ತು ಭಾರತ ಇದರಲ್ಲಿ ಒತ್ತಡದ ವಾತಾವರಣ ಇದೆ, ಇಂತಹ ಪರಿಸ್ಥಿತಿಯಲ್ಲಿ ಅದು ಭಾರತ ವಿರೋಧಿ ನಿಲುವು ಪಡೆದು ಚೀನಾದಿಂದ ತನ್ನ ದೇಶಕ್ಕಾಗಿ ನಿಧಿ ಪಡೆಯಬಹುದು; ಆದರೆ ಅದಕ್ಕೆ ಚೀನಾದ ಕಪಟ ಷಡ್ಯಂತ್ರ ಮತ್ತು ಸಾಲದ ಸುಳಿಗೆ ಸಿಗಿಸುವ ಪಂಜರದಲ್ಲಿ ಸಿಲುಕಿದ ನಂತರ ಅದು ತನ್ನ ಹಿಡಿದ ಹೇಗೆ ಬಿಗಿಯುತ್ತದೆ ಇದು ತಿಳಿದಿಲ್ಲ. ಶ್ರೀಲಂಕಾದ ಉದಾಹರಣೆ ಮುಯಿಜ್ಜೂ ಮುಂದೆ ಇದೆ, ಅಲ್ಲಿ ಪ್ರಾರಂಭದ ಸಮಯದಲ್ಲಿ ಚೀನಾ ಶ್ರೀಲಂಕಾದ ಬಹಳ ಹತ್ತಿರವಾಗಿತ್ತು; ಆದರೆ ಯಾವಾಗ ಅಲ್ಲಿಯ ಅರ್ಥವ್ಯವಸ್ಥೆ ಡೋಲಾಯಮಾನವಾಯಿತು ಆಗ ಚಿನ್ನ ಅಲ್ಲ, ನೆರೆಯ ಭಾರತವೆ ಸಹಾಯಕ್ಕೆ ಬಂದಿತು, ಎಂದು ಡಾ. ಚಿಮಾ ಹೇಳಿದರು.