ಭಾರತದ ವಿರುದ್ಧ ಪಾಕಿಸ್ತಾನಿ ಜನರ ದ್ವೇಷ
(ಕಾಫಿರ ಎಂದರೆ ಇಸ್ಲಾಂ ವಿರೋಧಿ)
ಇಸ್ಲಾಮಾಬಾದ (ಪಾಕಿಸ್ತಾನ) – ಶಹಾಬಾಜ ಶರೀಫ್ ಇವರು ಪಾಕಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಅವರನ್ನು ಅಭಿನಂದಿಸಿದ್ದರು. ಇದರ ಬಗ್ಗೆ ಪಾಕಿಸ್ತಾನಿ ಜನರ ಜೊತೆಗೆ ಅಲ್ಲಿಯ ಕೆಲವು ಪತ್ರಕರ್ತರು ಚರ್ಚಿಸಿದಾಗ ಅವರ ಮನಸ್ಸಿನಲ್ಲಿ ಭಾರತ ದ್ವೇಷ ಕುದಿಯುತ್ತಿರುವುದು ಹೊರ ಬಿದ್ದಿದೆ.
ನವಾಜ್ ಸರಕಾರ ಬರದಿರಲು ಪ್ರಧಾನಮಂತ್ರಿ ಮೋದಿ ಕಾರಣ !
ಆಫತಾಬ್ ಅಹಮ್ಮದ್ ಎಂಬ ವ್ಯಕ್ತಿಯು ಚರ್ಚೆಯಲ್ಲಿ, ಭಾರತ ಇದು ಪಾಕಿಸ್ತಾನದ ವಿರುದ್ಧ ಕೆಲಸ ಮಾಡುತ್ತದೆ. ನವಾಜ್ ಶರೀಫ್ ಇವರ ಸರಕಾರ ಹಿಂದೆ ಬಹಳಷ್ಟು ಒಳ್ಳೆಯ ಕೆಲಸ ಮಾಡಿದ್ದು; ಆದರೆ ಅವರ ಮಗಳ ವಿವಾಹದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಮೋದಿ ಅವರ ಅನಿರೀಕ್ಷಿತ ಆಗಮನ ಆಘಾತಕಾರಿ ಆಗಿತ್ತು. ಶರೀಫರೂ ಕೂಡ ಜನರಿಗೆ ಸರಿಯಾಗಿ ತಿಳಿಸಿ ಹೇಳಲು ಸಾಧ್ಯವಾಗಿರಲಿಲ್ಲ. ಜನರು ಇದನ್ನು ದೇಶವಿರೋಧಿ ಷಡ್ಯಂತ್ರ ಎಂದು ತಿಳಿದಿದ್ದಾರೆ. ನವಾಜ್ ಸರಕಾರ ಬಾರದಿರಲು ಪ್ರಧಾನ ಮಂತ್ರಿ ಮೋದಿ ಇವರೇ ಹೊಣೆ ಎಂದು ಹೇಳಿದರು.
ಈಗ ಅಧಿಕಾರದಲ್ಲಿರುವ ಪಕ್ಷ ಭಾರತದ ಹತ್ತಿರ ಯಾವಾಗಲೂ ಭಿಕ್ಷೆ ಬೇಡುತ್ತಿದೆ !
ರಮಿಶ ಎಂಬ ವ್ಯಕ್ತಿಯು, ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್) ಸರಕಾರ ಅಮೆರಿಕಾ ಅಥವಾ ಭಾರತದ ಹತ್ತಿರ ಯಾವಾಗಲೂ ಭಿಕ್ಷೆ ಬೇಡುತ್ತದೆ ಎಂದು ಹೇಳಿದರು. ಇಮ್ರಾನ್ ಖಾನ್ ಇವರು ಪಾಕಿಸ್ತಾನ ಮತ್ತು ಕಾಶ್ಮೀರದ ಪರವಾಗಿ ಇದ್ದರು; ಆದರೆ ಈಗ ಅಧಿಕಾರದಲ್ಲಿರುವವರಿಂದ ನಮಗೆ ಯಾವುದೇ ಆಸೆ ಇಲ್ಲ.
ಈಗಿನ ಸರಕಾರ ದೇಶವನ್ನು ಮಾರಿಬಿಡುತ್ತಾರೆ !
ಇನ್ನೊಓರ್ವ ವ್ಯಕ್ತಿ, ಈ ಸಮಯದಲ್ಲಿ ಈ ಜನರ ಸರಕಾರ (ಶಾಹಬಾಜ್ ಸರಕಾರ) ದೇಶ ಮಾರಲು ಒಪ್ಪಂದ ಮಾಡುವರು ಮತ್ತು ಅಧಿಕಾರದಲ್ಲಿರುವವರು ದೇಶ ಮಾರಿ ಓಡಿ ಹೋಗುವರು ! ಎಂದು ಹೇಳಿದ.
ನಮಗೆ ಭಾರತದ ಜೊತೆಗೆ ವ್ಯಾಪಾರ ಬೇಕಿಲ್ಲ !
ಮಹಮ್ಮದ್ ಸಫಾದರ್ ಎಂಬ ವ್ಯಕ್ತಿಯು, ಶತ್ರು ದೇಶದಿಂದ ಯಾವುದೇ ಒಳ್ಳೆಯ ಸಮಾಚಾರ ಬರಲು ಸಾಧ್ಯವಿಲ್ಲ. ಪ್ರತಿಯೊಂದು ದೇಶದ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಪ್ರಧಾನಮಂತ್ರಿ ಬೇಕು. ಭಾರತದ ಜೊತೆಗಿನ ವ್ಯಾಪಾರದಲ್ಲಿ ಪಾಕಿಸ್ತಾನಕ್ಕೆ ಯಾವುದೇ ಲಾಭವಿಲ್ಲ. ಸಂಪೂರ್ಣ ಜಗತ್ತು ಭಾರತದ ಜೊತೆಗೆ ವ್ಯಾಪಾರ ಮಾಡುತ್ತಿರುತ್ತಾರೆ, ಅದು ಅವರ ಹುಚ್ಚುತನ. ನಾವು ‘ಕಾಫಿರರ ಮುಂದೆ ಬಾಗುವುದಿಲ್ಲ. ನಮಗೆ ಭಾರತದ ಜೊತೆಗೆ ವ್ಯಾಪಾರ ಬೇಕಿಲ್ಲ.’ ಎಂದು ಹೇಳಿದರು.
ಸಂಪಾದಕೀಯ ನಿಲುವುಆರ್ಥಿಕ ದಿವಾಳಿ ಎದ್ದಿರುವ ದೇಶದಲ್ಲಿನ ಜನರು ನೀಡಿರುವ ಇಂತಹ ಹೇಳಿಕೆಯ ಬಗ್ಗೆ ಯಾರು ಗಮನ ನೀಡುವರು ? ಇತರ ದೇಶಗಳ ಹತ್ತಿರ ಭಿಕ್ಷೆ ಬೇಡುವ ಪಾಕಿಸ್ತಾನದ ಜನರು ಮೊದಲು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಬೇಕು ಮತ್ತು ನಂತರ ಭಾರತಕ್ಕೆ ಗದರಿಸಬೇಕು ! |