ಗಾಜಾದಲ್ಲಿಯ ಹಿಂಸಾಚಾರ ಸ್ವೀಕಾರಾರ್ಹವಲ್ಲ ! – ಭಾರತ

ನ್ಯೂಯಾರ್ಕ್ – ಭಾರತವು ಇಸ್ರೇಲ್‌ಗೆ ಗಾಜಾದಲ್ಲಿ ಉದ್ವಿಗ್ನತೆಯನ್ನು ತಗ್ಗಿಸಲು ಮತ್ತು ಹಿಂಸಾಚಾರವನ್ನು ನಿಲ್ಲಿಸುವಂತೆ ಒತ್ತಾಯಿಸಿದೆ. ಭಾರತದ ಖಾಯಂ ಪ್ರತಿನಿಧಿ ರುಚಿರ ಕಂಬೋಜ ಇವರು ಮಾರ್ಚ್ ೪ ರಂದು ವಿಶ್ವ ಸಂಸ್ತೆಯ ಮಹಾಸಭೆಯಲ್ಲಿ, ಭಾರತವು ಯಾವಾಗಲೂ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತದೆ. ಹಿಂಸಾಚಾರದಿಂದ ಆಗುವ ಸಾವನ್ನು ತಡೆಯುವುದು ಅವಶ್ಯಕ ಎಂದು ಅವರು ಹೇಳಿದರು. ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಅಂತರಾಷ್ಟ್ರೀಯ ಕಾನೂನನ್ನು ಗೌರವಿಸಬೇಕು. ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಇದುವರೆಗೂ ೩೦ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಭಾರತವು ಪ್ಯಾಲೆಸ್ಟೇನ್ ಜನರಿಗೆ ಮಾನವೀಯತೆಯ ದೃಷ್ಟಿಕೋನದಿಂದ ಸಹಾಯ ಮಾಡಿದೆ ಮತ್ತು ಮುಂದೆಯೂ ಮಾಡುವುದು.

೧. ಮಹಾಸಭೆಯ ಅಧ್ಯಕ್ಷ ಡೇನಿಸ್ ಫ್ರಾನ್ಸಿಸ್ ತಕ್ಷಣದ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆಗೆ ಕರೆ ನೀಡಿದರು. ‘ಈ ಯುದ್ಧದಿಂದ ಆಗುವ ಪ್ರತಿ ಸಾವು ನಮ್ಮ ಸಾಮೂಹಿಕ ವಿವೇಕತನದ ಮೇಲೆ ಕಳಂಕ‘ ಎಂದು ಅವರು ಹೇಳಿದರು.

೨. ಅಮೇರಿಕಾದ ಉಪ ಖಾಯಂ ಪ್ರತಿನಿಧಿ ರಾಬರ್ಟ್ ವುಡ್ ಇವರು, ಕನಿಷ್ಟ ಎಂಟುವಾರಗಳ ತಕ್ಷಣದ ಕದನ ವಿರಾಮ ಆಗಬೇಕು ಎಂದು ಹೇಳಿದರು.

೩. ಅಮೇರಿಕಾದ ಉಪರಾಷ್ಟ್ರಪತಿ ಕಮಲಾ ಹ್ಯಾರಿಸ್ ಇವರು ತಕ್ಷಣದ ಕದನವಿರಾಮಕ್ಕೆ ಕರೆ ನೀಡಿದರು.

೪. ಇಸ್ರೇಲ್‌ನ ಖಾಯಂ ಪ್ರತಿನಿಧಿ ಗಿಲಾಡ್ ಎಡ್ರಾನ್ ವಿಶ್ವಸಂಸ್ಥೆಗೆ ಹಮಾಸ್‌ನ ಮಿತ್ರ ಎಂದು ಕರೆದರು. ಇಸ್ರೇಲ್ ಮೇಲೆ ಭಯೋತ್ಪಾದಕ ದಾಳಿ ನಡೆಸುತ್ತಿರುವ ಹಮಾಸ್‌ಅನ್ನು ವಿಶ್ವ ಸಂಸ್ಥೆಯು ಹಮಾಸ್‌ಅನ್ನು ಖಂಡಿಸಿಲ್ಲ ಎಂದು ಅವರು ಹೇಳಿದ್ದಾರೆ.