ಉಚ್ಚನ್ಯಾಯಾಲಯದ ತೀರ್ಪು
ಮುಂಬಯಿ – ನಕ್ಸಲ ಮತ್ತು ದೇಶವಿರೋಧಿ ಚಟುವಟಿಕೆಗಳ ಪ್ರಕರಣದಡಿಯಲ್ಲಿ ಬಂಧನದಲ್ಲಿರುವ ನಗರ ನಕ್ಸಲವಾದಿ, ಹಾಗೆಯೇ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಿ.ಎನ್. ಸಾಯಿಬಾಬಾ ಇವನನ್ನು ಮುಂಬಯಿ ಉಚ್ಚ ನ್ಯಾಯಾಲಯದ ನಾಗಪೂರ ಪೀಠವು ದೋಷ ಮುಕ್ತಗೊಳಿಸಿ ಬಿಡುಗಡೆ ಮಾಡಿದೆ. ಸಾಯಿಬಾಬಾನೊಂದಿಗೆ ಇತರೆ 5 ಜನರನ್ನು ಬಿಡುಗಡೆ ಮಾಡಲು ನ್ಯಾಯಾಲಯವು ನೀಡಿದೆ. ಸೆಪ್ಟೆಂಬರ್ 2023 ರಲ್ಲಿ ಈ ಪ್ರಕರಣದ ವಿಚಾರಣೆ ಪೂರ್ಣಗೊಂಡಿತ್ತು. ನ್ಯಾಯಾಲಯವು ಈ ತೀರ್ಪನ್ನು ಕಾಯ್ದಿರಿಸಿತ್ತು. ಮಹೇಶ ಕರಿಮನ ತಿರಕಿ, ಹೇಮ ಕೇಶವದತ್ತಾ ಮಿಶ್ರಾ, ಪ್ರಶಾಂತ ರಾಹಿ ನಾರಾಯಣ ಸಾಂಗಲಿಕರ, ವಿಜಯ ನಾನ ತಿರಕಿ ಮತ್ತು ಪಾಂಡೂ ಪೋರಾ ನರೋಟೆ ಇವರು ಇತರೆ ನಗರ ನಕ್ಸವಾದಿಗಳಾಗಿದ್ದಾರೆ. ಇವರಲ್ಲಿ ನರೋಟೆ ಈಗಾಗಲೇ ಮರಣ ಹೊಂದಿದ್ದಾನೆ.
(ಸೌಜನ್ಯ – NDTV)
ಮುಂಬಯಿ ಉಚ್ಚ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ರಾಜ್ಯ ಸರಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದೆ; ಆದರೆ ಉಚ್ಚ ನ್ಯಾಯಾಲಯದ ತೀರ್ಪನ್ನು ತಡೆಹಿಡಿಯುವಂತೆ ರಾಜ್ಯ ಸರಕಾರ ಕೋರಿಲ್ಲ. ಮುಂದಿನ ತೀರ್ಪಿನ ವರೆಗೆ ಈ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ; ರಾಜ್ಯ ಸರ್ಕಾರ ಕೇವಲ ಹೈಕೋರ್ಟ್ ತೀರ್ಪನ್ನು ಮುಂದೂಡುವಂತೆ ಒತ್ತಾಯಿಸಿಲ್ಲ. ಮುಂದಿನ ನಿರ್ಣಯದ ವರೆಗೆ ಇವರೆಲ್ಲರೂ ಪ್ರತಿಯೊಬ್ಬರೂ 50 ಸಾವಿರ ರೂಪಾಯಿಗಳ ಲಿಖಿತಮುಚ್ಚಳಿಕೆಯ ಮೇರೆಗೆ ಜಾಮೀನು ನೀಡಲಾಗಿದೆ. ನ್ಯಾಯಮೂರ್ತಿ ವಿನಯ ಜೋಶಿ ಮತ್ತು ನ್ಯಾಯಮೂರ್ತಿ ವಾಲ್ಮೀಕಿ ಎಸ್.ಎ. ಮೆನೆಝೆಸ ಇವರ ಪೀಠದ ಎದುರಿಗೆ ವಿಚಾರಣೆ ಮುಕ್ತಾಯಗೊಂಡಿತು.
ಯಾವ ಪ್ರಕರಣ?
2017 ರಲ್ಲಿ, ಸಾಯಿಬಾಬಾ ಮತ್ತು ಇತರ ಐದು ಜನರನ್ನು ಗಡಚಿರೋಲಿ ಸತ್ರ ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಿತ್ತು. ಸಾಯಿಬಾಬಾ ಮತ್ತು ಇತರ ಆರೋಪಿಗಳಿಗೆ ನಕ್ಸಲವಾದಿ ಚಟುವಟಿಕೆಗಳೊಂದಿಗೆ ಸಂಬಂಧವಿರುವುದು, ಹಾಗೆಯೇ ಅದರಿಂದ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿಯಲ್ಲಿ ಅವರನ್ನು ದೋಷಿಗಳೆಂದು ನಿರ್ಧರಿಸಲಾಗಿತ್ತು. ಇವರೆಲ್ಲರ ಬಳಿ ನಕ್ಸಲ ಚಟುವಟಿಕೆಗಳಿಗೆ ಪ್ರಚೋದನೆ ನೀಡುವ ಸಾಹಿತ್ಯ ಸಿಕ್ಕಿದೆಯೆಂದು ಸತ್ರ ನ್ಯಾಯಾಲಯವು ಒಪ್ಪಿಕೊಂಡಿತ್ತು. ಅಕ್ಟೋಬರ್ 2022 ರಲ್ಲಿ, ಮುಂಬಯಿ ಉಚ್ಚ ನ್ಯಾಯಾಲಯವು ಸಾಯಿಬಾಬಾರನ್ನು ದೋಷಮುಕ್ತಗೊಳಿಸಿತ್ತು; ಆದರೆ ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ವಜಾಗೊಳಿಸಿ ಮರು ವಿಚಾರಣೆಗೆ ಆದೇಶಿಸಿತ್ತು.
Imprisoned urban naxalite Professor Saibaba acquitted !
Nagpur bench of Bombay High Court delivers verdict pic.twitter.com/I2d22iRMwA
— Sanatan Prabhat (@SanatanPrabhat) March 5, 2024