Pakistan Hindu Teacher Acquitted : ಧರ್ಮನಿಂದನೆಯ ಪ್ರಕರಣದಲ್ಲಿ ಹಿಂದೂ ಶಿಕ್ಷಕನ ನಿರಪರಾಧಿ ಎಂದು ಬಿಡುಗಡೆ !

  • ಪಾಕಿಸ್ತಾನದಲ್ಲಿರುವ ಸಿಂಧ ಪ್ರಾಂತ್ಯದಲ್ಲಿನ ಸಖ್ಖರ ನ್ಯಾಯಾಲಯದ ತೀರ್ಪು !

  • ಪೊಲೀಸರ ಬೇಜವಾಬ್ದಾರ ಕಾರ್ಯಾಚರಣೆಯ ಮೇಲೆ ಆಕ್ಷೇಪವೆತ್ತಿದ ಉಚ್ಚ ನ್ಯಾಯಾಲಯ !

  • ಸ್ಥಳೀಯ ನ್ಯಾಯಾಲಯವು ನೀಡಿತ್ತು ಜೀವಾವಧಿ ಶಿಕ್ಷೆ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿನ ಸಖ್ಖರ ಉಚ್ಚ ನ್ಯಾಯಾಲಯವು ಓರ್ವ ಹಿಂದೂ ಶಿಕ್ಷಕನ ಮೇಲೆ ಹೊರಿಸಲಾಗಿದ್ದ ಈಶ ನಿಂದೆಯ ಪ್ರಕರಣದಲ್ಲಿ ಆತನನ್ನು ನಿರಪರಾಧಿ ಎಂದು ಮುಕ್ತಗೊಳಿಸಿತು. ಇದು ೨೦೧೯ರ ಪ್ರಕರಣವಾಗಿದೆ. ನೂತನ ಲಾಲ ಎಂಬ ಹಿಂದೂ ಶಿಕ್ಷಕನು ಶಾಲೆಯಲ್ಲಿ ಒಂದು ವಿಷಯ ತೆಗೆದುಕೊಳ್ಳುವಾಗ ಮಹಮ್ಮದ ಪೈಗಂಬರರ ಬಗ್ಗೆ ಕೆಟ್ಟ ಶಬ್ದಗಳನ್ನು ಹೇಳಿದ್ದರು ಎಂದು ಅವರ ಓರ್ವ ಮುಸಲ್ಮಾನ ವಿದ್ಯಾರ್ಥಿಯು ದೂರು ನೀಡಿದ್ದನು. ಇದರಿಂದಾಗಿ ಲಾಲ ರವರನ್ನು ಬಂಧಿಸಲಾಗಿದ್ದು ಸ್ಥಳೀಯ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಇದರ ಬಗ್ಗೆ ಉಚ್ಚ ನ್ಯಾಯಾಲಯವು, ಪೊಲೀಸರು ಈ ವಿಷಯದಲ್ಲಿ ಯಾವುದೇ ಯೋಗ್ಯವಾದ ತನಿಖೆಯನ್ನು ಮಾಡಿ ಗಡಿಬಿಡಿಯಲ್ಲಿ ಕಾರ್ಯಾಚರಣೆಯನ್ನು ಮಾಡಿದ್ದು ತನ್ನ ಜವಾಬ್ದಾರಿಯನ್ನು ಮರೆತಿದೆ.

ಉಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ , ನೂತನ ಲಾಲ ರವರು ಎಂದಿಗೂ ಯಾವುದೇ ಸಮಾಜಘಾತಕ ಕೃತ್ಯಗಳಲ್ಲಿ ಕಂಡುಬಂದಿಲ್ಲ. ಅವರ ವಿರುದ್ಧ ಧಾರ್ಮಿಕ ದ್ವೇಷ ಹರಡುವ ಅಥವಾ ಯಾರ ವಿರುದ್ಧವೂ ಅಪಮಾನಾತ್ಮಕವಾಗಿ ಮಾತನಾಡಿರುವುದರ ಪುರಾವೆಗಳಿಲ್ಲ. ಪೊಲೀಸರು ನೋಂದಾಯಿಸಿದ ಅಪರಾಧದಲ್ಲಿ ಕಥಿತ ಅಪಮಾನಾಸ್ಪದ ಶಬ್ದ ಯಾವುದು ಎಂಬುದರ ಉಲ್ಲೇಖವೂ ಇಲ್ಲ. ಇದರಿಂದಾಗಿ ಪೊಲೀಸರ ಕಾರ್ಯಾಚರಣೆಯಲ್ಲಿ ಘೋರ ನಿಷ್ಕಾಳಜಿ ಕಂಡು ಬರುತ್ತದೆ, ಎಂದು ಹೇಳಿದೆ.

ಇದು ಪಾಕಿಸ್ತಾನದಲ್ಲಿನ ಹಿಂದೂಗಳ ದಿನಗಳು !

ನೂತನ ಲಾಲ ರವರ ಮಗಳು ಪ್ರಸಾರ ಮಾಧ್ಯಮಗಳಲ್ಲಿ ಮಾತನಾಡುತ್ತ, ನ್ಯಾಯಾಲಯದ ತೀರ್ಪಿನಿಂದಾಗಿ ನಮಗೆ ಸ್ವಲ್ಪ ಸಮಾಧಾನ ದೊರೆತಿದೆ. ಆದರೆ ಇಲ್ಲಿಯ ವರೆಗೂ ತಂದೆಯವರ ಬಿಡುಗಡೆಯಾಗಿಲ್ಲ. ಆದುದರಿಂದಾಗಿ `ಮುಂದೆ ಏನಾಗುವುದು ?’ ಎಂಬುದರ ಚಿಂತೆ ಉಂಟಾಗಿದೆ. ನನ್ನ ತಂದೆಯವರು ೩೦ ವರ್ಷಗಳ ವರೆಗೆ ಸರಕಾರಿ ನೌಕರಿ ಮಾಡಿದ್ದರು. ನಮ್ಮ ಕುಟುಂಬದ ಮೇಲೆ ಎಂದಿಗೂ ಯಾವುದೇ ಖಟ್ಲೆಯನ್ನು ನಡೆಸಲಾಗಿರಲಿಲ್ಲ. ನಾವು ೩ ಸಹೋದರಿಯರು, ಒಬ್ಬ ಸಹೋದರ ಹಾಗೂ ಅಮ್ಮ ಇದ್ದೇವೆ. ಕಳೆದ ೫ ವರ್ಷಗಳಿಂದ ನಾವು ಆರ್ಥಿಕ ತೊಂದರೆಗಳನ್ನು ಸಹಿಸುತ್ತಿದ್ದೇವೆ. ನನ್ನ ೬೦ ವರ್ಷದ ತಂದೆಯವರನ್ನು ೫ ವರ್ಷಗಳ ಹಿಂದೆ ಜೈಲಿಗೆ ಹಾಕಲಾಗಿತ್ತು. ನಮಗೆ ನಮ್ಮನ್ನು ಕೊಲ್ಲುವುದಾಗಿ ಬೆದರಿಕೆಗಳು ಬರುತ್ತಿದ್ದವು. ತಂದೆಯವರ ವೇತನ ತಡೆಯಲಾಯಿತು. ಹಣಗಳಿಸಲು ಬೇರೆ ಸಾಧನಗಳೂ ಇರಲಿಲ್ಲ, ಎಂದು ಹೇಳಿದರು !

ಏನಿದು ಪ್ರಕರಣ ?

೨೦೧೯ರಲ್ಲಿ ನೂತನ ಲಾಲ ರವರ ವಿದ್ಯಾರ್ಥಿಯು ತರಗತಿಯಲ್ಲಿ ನಡೆದ ಈಶನಿಂದೆಯ ಕಥಿತ ಸಂಗತಿಯನ್ನು ತನ್ನ ತಂದೆಗೆ ಹೇಳಿದನು. ಆಗ ಈ ವಿಷಯವನ್ನು ಫೇಸ್ಬುಕ್ ಮೂಲಕ ಹರಡಲಾಯಿತು. ಈ ಘಟನೆಯ ನಂತರ ಸ್ಥಳೀಯ ಪೇಟೆಯಲ್ಲಿ ಬಂದ್ ಪಾಲಿಸಲಾಯಿತು. ಒಂದು ಗುಂಪು ಶಾಲೆಯ ಕಟ್ಟಡದ ಮೇಲೆ ಆಕ್ರಮಣ ಮಾಡಿ ಅಲ್ಲಿ ಧಂಸ ಮಾಡಿತು. ಕೆಲವು ಮತಾಂಧ ಮುಸಲ್ಮಾನರು ನೂತನ ಲಾಲ ರವರ ಮನೆಯ ಮೇಲೆ ಹಾಗೆಯೆ ಸ್ಥಳೀಯ ದೇವಸ್ಥಾನದ ಮೇಲೂ ಆಕ್ರಮಣ ಮಾಡಿ ಅಲ್ಲಿ ಧ್ವಂಸ ಮಾಡಿತು. ಪರಿಸ್ಥಿತಿಯು ಉದ್ವಿಘ್ನಗೊಂಡ ನಂತರ ಜಿಲ್ಲಾಡಳಿತವು ಕಾಯ್ದಿರಿಸಿದ ಪೊಲೀಸ ದಳವನ್ನು ನೇಮಿಸಿತು.

 

ಸಂಪಾದಕೀಯ ನಿಲುವು

ಪಾಕಿಸ್ತಾನದ ಜನತೆ ಹಾಗೂ ವ್ಯವಸ್ಥೆಯಲ್ಲಿ ಹುದುಗಿರುವ ಹಿಂದೂದ್ವೇಷವನ್ನು ಒಂದು ಉದಾಹರಣೆಯ ಮೂಲಕ ಕಾಣಬಹುದು. ಭಗವಂತನ ಕೃಪೆಯಿಂದಾಗಿ ಉಚ್ಚ ನ್ಯಾಯಾಲಯವು ತತ್ತ್ವನಿಷ್ಠೆಯಿಂದ ಹಿಂದೂಗಳ ಪಕ್ಷದಲ್ಲಿ ತೀರ್ಪು ನೀಡಿತು. ಹೀಗಿದ್ದರೂ ನಾಳೆ ಈ ಹಿಂದೂ ಪ್ರಾಧ್ಯಾಪಕನು ಜೈಲಿನಿಂದ ಹೊರಬಂದ ನಂತರ ಸುರಕ್ಷಿತ ಜೀವನವನ್ನು ನಡೆಸಬಹುದೇ ಎಂಬ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ !