ಡಾ. ದಾಭೋಲ್ಕರ ಇವರ ಹತ್ಯೆಯಾಗುವ ಮೊದಲು ಅವರು ಹಿಂದಿನ ರಾತ್ರಿ ಮತ್ತು ಬೆಳಿಗ್ಗೆ ಎಲ್ಲಿದ್ದರು? ಎನ್ನುವುದನ್ನು ಸರಕಾರಿ ಪರ ವಾದಿಗಳು ಸಾಬೀತುಪಡಿಸಲು ಸಾಧ್ಯವಾಗಿಲ್ಲ- ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ

ಡಾ. ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಅಂತಿಮ ಯುಕ್ತಿವಾದ

ಪುಣೆ – ಅಂಧಶ್ರದ್ಧಾ ನಿರ್ಮೂಲನ ಸಂಸ್ಥೆಯ ಡಾ. ನರೇಂದ್ರ ದಾಭೋಲ್ಕರ ಅವರ ಸಾವಿನ ಸಮಯ ಯಾವುದು? ಡಾ. ದಾಭೋಲ್ಕರ್ ಅವರು ಹಿಂದಿನ ರಾತ್ರಿ ಯಾವ ಕಟ್ಟಡದಲ್ಲಿ ಉಳಿದುಕೊಂಡಿದ್ದರು, ಸರಕಾರದ ಹೇಳಿಕೆಯಂತೆ ಅವರು ಉಳಿದುಕೊಂಡಿದ್ದ ಆ ಕಟ್ಟಡದಲ್ಲಿ ದೊಡ್ಡ ರಾಜಕೀಯ ಪಕ್ಷದ ಜನಪ್ರತಿನಿಧಿಗಳು ಇರುವಾಗ ಒಬ್ಬನೇ ಒಬ್ಬ ಪ್ರತ್ಯಕ್ಷದರ್ಶಿಯ ಹೇಳಿಕೆಯನ್ನು ದಾಖಲಿಸಲಾಗಿಲ್ಲ. ಹಾಗೆಯೇ ಡಾ. ದಾಭೋಲಕರ ಈ ಪ್ರಕರಣದ ಹಿಂದಿನ ರಾತ್ರಿ ಅಲ್ಲಿಗೆ ಬಂದಿದ್ದರೇ ಅಥವಾ ಬೆಳಿಗ್ಗೆ ಅವರು ನಿರ್ದಿಷ್ಟವಾಗಿ ಯಾವ ಸ್ಥಳದಲ್ಲಿದ್ದರು? ಎಂದು ಹೇಳುವ ಒಂದೇ ಒಂದು ಸಾಕ್ಷಿ ಸರಕಾರದ ಪಕ್ಷದ ವತಿಯಿಂದ ಹಾಜರು ಪಡಿಸಲಾಗಿಲ್ಲ. ಆದುದರಿಂದ ಡಾ. ದಾಭೋಲಕರ ಇವರ ಹತ್ಯೆಯಾಗುವ ಮೊದಲು ಅವರು ಹಿಂದಿನ ರಾತ್ರಿ ಮತ್ತು ಬೆಳಿಗ್ಗೆ ಎಲ್ಲಿದ್ದರು? ಎಂದು ಸರಕಾರದ ಕಡೆಯಿಂದ ಹೇಳಲು ಸಾಧ್ಯವಾಗುತ್ತಿಲ್ಲ, ಎಂದು ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ ಇವರು ಮಾರ್ಚ್ 1 ರಂದು ಪ್ರತಿವಾದಿಸಿದರು.

ಡಾ.ದಾಭೋಲ್ಕರ್ ಹತ್ಯೆಯ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪಿ.ಪಿ. ಜಾಧವ ಇವರ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕೇಂದ್ರೀಯ ತನಿಖಾ ಇಲಾಖೆಯಿಂದ (ಸಿಬಿಐ ವತಿಯಿಂದ) ವಿಶೇಷ ಸರಕಾರಿ ನ್ಯಾಯವಾದಿ ಪ್ರಕಾಶ ಸೂರ್ಯವಂಶಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಪ್ರಕರಣದ ಇತರ ಶಂಕಿತರ ಪರವಾಗಿ, ಮುಂಬಯಿ ಉಚ್ಚ ನ್ಯಾಯಾಲಯವು ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ ಮಾರ್ಚ್ 2 ರಂದು ವಾದಿಸಲಿದ್ದಾರೆ. ಶವ ಪರೀಕ್ಷೆ ನಡೆಸಿದ ಡಾ. ಅಜಯ ತಾವರೆ ಅವರ ಸಾಕ್ಷಿ ಹೇಳಿಕೆಯ ಸುಳ್ಳನ್ನು ಬಯಲಿಗೆಳೆದ ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ ಇವರು ಮಂಡಿಸಿರುವ ಅಂಶಗಳು.

ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ ಇವರ ವಿಶೇಷ ಪರಿಚಯ

ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ

ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ ಇವರು `ನ್ಯಾಯವಾದಿ ಪರಿಷತ್ತು’ನ ಕೊಂಕಣ ಪ್ರಾಂತ್ಯದ ಉಪಾಧ್ಯಕ್ಷರು, `ದರ್ದ ಸೆ ಹಮ ದರ್ದ ತಕ್’ ಈ ಸಾಮಾಜಿಕ ಸಂಘಟನೆಯ ಮಹಾರಾಷ್ಟ್ರ ಪ್ರದೇಶಾಧ್ಯಕ್ಷರೂ ಆಗಿದ್ದಾರೆ. ಇದರೊಂದಿಗೆ ಅವರು `ಬೆಸ್ಟ ಬೆಕರಿ’ `ಮಾಲೆಗಾಂವ ಸ್ಫೋಟ ಪ್ರಕರಣ’ ಗಳೊಂದಿಗೆ ಇನ್ನಿತರ ಕೆಲವು ಪ್ರಕರಣಗಳಲ್ಲಿ ಹಿಂದುತ್ವನಿಷ್ಠರ ಪರವಾಗಿ ಹೋರಾಡುತ್ತಿದ್ದಾರೆ.

 

ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ ಇವರು ಡಾ.ಹಮೀದ ದಾಭೋಲ್ಕರ ಇವರ ಉತ್ತರದಲ್ಲಿರುವ ವಿರೋಧಾಭಾಸವನ್ನು ನ್ಯಾಯಾಲಯದ ಎದುರಿಗೆ ಮಂಡಿಸಿದರು.

1. ಡಾ. ಹಮೀದ್ ದಾಭೋಲ್ಕರ ಇವರು ತಮ್ಮ ಸಾಕ್ಷಿಯಲ್ಲಿ `ಡಾ ನರೇಂದ್ರ ದಾಭೋಲಕರ ಇವರು ಭಯೋತ್ಪಾದಕ ನಿಗ್ರಹ ದಳದವರ ಬಳಿ ಸನಾತನ ಸಂಸ್ಥೆಯ ವಿರುದ್ಧ ದೂರು ದಾಖಲಿಸಿದ್ದರು’ ಎಂದು ಹೇಳಿದರು. ಪ್ರತ್ಯಕ್ಷದಲ್ಲಿ ಅವರು ಕೇಂದ್ರೀಯ ತನಿಖಾ ಇಲಾಖೆ, ಪುಣೆ ಪೊಲೀಸರು, ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ.) ಭಯೋತ್ಪಾದಕಾ ವಿರೋಧಿ ದಳದ ಬಳಿ ಹಾಜರುಪಡಿಸಿರುವ ದೂರಿನಲ್ಲಿಯೂ ಒಂದೇ ಒಂದು ನಕಲುಪ್ರತಿಯನ್ನು ಹಾಜರುಪಡಿಸಲು ಸಾಧ್ಯವಾಗಿರುವುದಿಲ್ಲ. ಇದರೊಂದಿಗೆ ಇಂತಹ ಯಾವುದೇ ದೂರನ್ನು ಯಾವುದೇ ತನಿಖಾ ದಳಕ್ಕೆ ಹಾಜರು ಪಡಿಸಲು ಸಾಧ್ಯವಾಗಿರುವುದಿಲ್ಲ. ಹಾಗೆಯೇ ಯಾವುದೇ ತನಿಖಾ ದಳಕ್ಕೆ ಕಳುಹಿಸಿರುವ ಒಂದೇ ಒಂದು `ಇ-ಮೇಲ’ ಡಾ. ಹಮೀದ ಇವರು ನ್ಯಾಯಾಲಯದಲ್ಲಿ ಹಾಜರಲು ಪಡಿಸಲು ಸಾಧ್ಯವಾಗಿರುವುದಿಲ್ಲ.

2. ಅಂಧಶ್ರದ್ಧೆ ನಿರ್ಮೂಲನ ಸಮಿತಿಯಲ್ಲಿ ತೆಗೆದುಕೊಳ್ಳಲಾಗಿರುವ ನಿರ್ಣಯವು ` ಸರ್ವಾನುಮತದಿಂದ ತೆಗೆದುಕೊಳ್ಳಲಾಗುತ್ತಿತ್ತೇ ಅಥವಾ ಇಲ್ಲವೇ? ಎನ್ನುವುದನ್ನು ನಾನು ಹೇಳಲು ಸಾಧ್ಯವಿಲ್ಲ ಎಂದು ಡಾ. ಹಮೀದ ಇವರು ಹೇಳಿದರು. ಇದರಿಂದಲೇ ಸಮಿತಿಯಲ್ಲಿ ನಡೆಯುತ್ತಿದ್ದ ಕೋಟ್ಯಾವಧಿ ರೂಪಾಯಿಗಳ ವ್ಯವಹಾರದ ಕಾರಣದಿಂದ ಹತ್ಯೆಯಾಗಿದೆಯೇ? ಈ ದೃಷ್ಟಿಯಿಂದ ಇದುವರೆಗೂ ತನಿಖೆ ನಡೆದೇ ಇಲ್ಲ.

ಶವಪರೀಕ್ಷೆ ಮಾಡಿದ ಡಾ. ಅಜಯ್ ತಾವರೆ ಅವರ ಸಾಕ್ಷ್ಯದ ತಪ್ಪನ್ನು ಬಹಿರಂಗಪಡಿಸುವ ವಕೀಲ ಪ್ರಕಾಶ್ ಸಾಲ್ಸಿಂಗಿಕರ್ ಅವರು ಮಂಡಿಸಿದ ಸೂತ್ರಗಳು !

1. ಶವಪರೀಕ್ಷೆ ನಡೆಸುವಾಗ ಡಾ.ಅಜಯ ತಾವರೆ ಇವರು ಕೈಗೆ ಕೈಗವಸು ಹಾಕಿರಲಿಲ್ಲ, ಮುಖಕ್ಕೆ ಮಾಸ್ಕ್ (ಮಾಸ್ಕ್) ಹಾಕಿರಲಿಲ್ಲ, ಹಾಗೆಯೇ ಅವರ ತಂಡದಲ್ಲಿದ್ದ ಯಾವುದೇ ವೈದ್ಯರು ಏನನ್ನೂ ಬರೆದುಕೊಳ್ಳುತ್ತಿರಲಿಲ್ಲ. ಶವಪರೀಕ್ಷೆ ಮಾಡುವಾಗ ಯಾವುದೇ ಯಂತ್ರವನ್ನು ಉಪಯೋಗಿಸಿರುವುದಿಲ್ಲ.

2. ಶವ ಪರೀಕ್ಷೆ ಮಾಡುವಾಗ ‘ಆಸ್ಪತ್ರೆ ಕೈಪಿಡಿ’ (ಮಾಹಿತಿ ಪುಸ್ತಕ), ‘ವೈದ್ಯಕೀಯ ಕೈಪಿಡಿ’ (ವೈದ್ಯಕೀಯ ಮಾಹಿತಿ ಪುಸ್ತಕ), ಹಾಗೆಯೇ ಮರಣೋತ್ತರ ಪರೀಕ್ಷೆ ನಡೆಸಲು ಮೋದಿ-ರೆಡ್ಡಿ-ಪಾರಿಖ ಸಮಿತಿ ರೂಪಿಸಿರುವ ನಿಯಮಗಳ ಯಾವುದೇ ಪಾಲನೆ ಮಾಡಿರುವುದಿಲ್ಲ.

3. ಶವ ಪರೀಕ್ಷೆ ನಡೆಸುವಾಗ ಅವರು ಮಧ್ಯ ಮಧ್ಯದಲ್ಲಿ ನಿಲ್ಲಿಸುತ್ತಿದ್ದರು. ಇದರಿಂದ ತನಿಖಾ ದಳಕ್ಕೆ ಏನು ಬೇಕಾಗಿತ್ತೋ, ಅದನ್ನು ಹಾಕುವುದಕ್ಕಾಗಿಯೇ ಅದನ್ನು ನಿಲ್ಲಿಸಲಾಗುತ್ತಿತ್ತೇ? ಎನ್ನುವ ಬಲವಾದ ಸಂಶಯವಿದೆ.

4. ಶವಪರೀಕ್ಷೆಯ ಸಮಯದಲ್ಲಿ, ಅವರು ಬಂದೂಕಿನ ಗುಂಡುಗಳ ಆಕಾರವನ್ನು ಅಳೆಯಲಿಲ್ಲ.

5. ಶವಪರೀಕ್ಷೆ ನಡೆಸಿದ ವೈದ್ಯರು, ನಾನು ‘ಡಾ.ದಾಭೋಲ್ಕರರ ಮೃತ ದೇಹವನ್ನು ಮುಟ್ಟಿದ್ದೇನೆಯೋ ಅಥವಾ ಇಲ್ಲವೋ?’ ಎನ್ನುವುದು ನನಗೆ ನೆನಪಿಲ್ಲ’,ಎಂದು ಹೇಳುತ್ತಾರೆ. ಹಾಗೆಯೇ` ನಾನು ಗುಂಡುಗಳನ್ನು ಶರೀರದಿಂದ ತೆಗೆದೆನೇ?’ ಎನ್ನುವದೂ ನನಗೆ ನೆನಪಿಲ್ಲ’ ಎಂದು ಹೇಳುತ್ತಾರೆ. ಈ ಸಂದರ್ಭದಲ್ಲಿ `ವಿಸೇರಾ’ ಈ (ಒಳಅಂಗಗಳನ್ನು) ಪರೀಕ್ಷಿಸಲಾಗಿಲ್ಲ. ಇದರಿಂದ ಶವಪರೀಕ್ಷೆ ಮಾಡುವ ಡಾಕ್ಟರರ ವರದಿಯ ಮೇಲೆ ವಿಶ್ವಾಸ ಇಡಬಹುದೇ? ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.

ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ ಇವರು ಮಂಡಿಸಿರುವ ವಿಶೇಷ ಅಂಶಗಳು

1. ತನಿಖಾಧಿಕಾರಿಯು ಯಾವುದೇ ‘ಬ್ಯಾಲಿಸ್ಟಿಕ್’ ವರದಿಯನ್ನು ಅಥವಾ ‘ಡಾ. ದಾಭೋಲ್ಕರ್ ಅವರಿಗೆ ತಗುಲಿರುವ ಗುಂಡು ಮತ್ತು ನ್ಯಾಯಾಲಯದಲ್ಲಿ ಹಾಜರು ಪಡಿಸಿರುವ ಗುಂಡು ಒಂದೇ ಆಗಿತ್ತು’ ಎನ್ನುವ ಯಾವುದೇ ಪುರಾವೆಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿರುವುದಿಲ್ಲ.

2. ಈ ಪ್ರಕರಣದ ಅನೇಕ ಪ್ರಮುಖ ಸಾಕ್ಷಿಗಳನ್ನು ತನಿಖಾ ಸಂಸ್ಥೆ ತಪಾಸಣೆ ಮಾಡಿಲ್ಲ.

3. ಡಾ.ದಾಭೋಲ್ಕರ ಅವರ ಬಳಿಯ ಮೊಬೈಲನ ಪತ್ತೆಯಾದ ವಿದೇಶಿ ‘ಸಿಮ್ ಕಾರ್ಡ್’ ಬಗ್ಗೆ ಹೆಚ್ಚಿನ ತನಿಖೆ ನಡೆದಿಲ್ಲ . ಹಾಗೆಯೇ ಡಾ.ದಾಭೋಲ್ಕರ್ ಅವರ ಹತ್ಯೆಯ ಹಿಂದಿನ ದಿನ, ಮತ್ತು ಬೆಳಿಗ್ಗೆ ಅವರು ಎಲ್ಲಿದ್ದರು? ಇದರ ಮೊಬೈಲ `ಸಿಡಿಆರ್’ ವರದಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿರುವುದಿಲ್ಲ.

4. ಡಾ. ದಾಭೋಲ್ಕರ್ ಅವರನ್ನು ಯಾವ ಡಾಕ್ಟರರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎನ್ನುವುದು ಇಂದಿನವರೆಗೆ ಸರಕಾರಿ ಪಕ್ಷಗಳು ತಿಳಿಸಿಲ್ಲ.


ತನಿಖಾ ಇಲಾಖೆಗಳು ನಡೆದಿರುವ ತನಿಖೆಯು ಸಂಶಯಿಸಲ್ಪಟ್ಟವರು ಮತ್ತು ಸನಾತನ ಸಂಸ್ಥೆಯನ್ನು ಉದ್ದೇಶಪೂರ್ವಕವಾಗಿ ಸಿಲುಕಿಸುವ ಉದ್ದೇಶದಿಂದ ಮಾಡಲಾಗಿದೆ. ಈ ಹತ್ಯೆ ಅಂಧಶ್ರದ್ಧೆ ನಿರ್ಮೂಲನ ಸಮಿತಿಗೆ ಸಿಗುವ ಹಣದ ಆರ್ಥಿಕ ವ್ಯವಹಾರದಿಂದ ನಡೆದಿದೆಯೇ? ಡಾ. ದಾಭೋಲಕರ ಇವರನ್ನು ಭೂತಕಾಲದಲ್ಲಿ ಯಾರು ಬೆದರಿಕೆ ಹಾಕಿದ್ದರೋ, ಅವರಿಂದ ಹತ್ಯೆ ನಡೆದಿದೆಯೇ? ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ನಕ್ಸಲವಾದಿಗಳೊಂದಿಗೆ ಸಂಬಂಧವಿತ್ತು ಎನ್ನುವ ಸುದ್ದಿ ಬಂದಿತ್ತು ಮತ್ತು ಈ ಕಾರಣದಿಂದ ಹತ್ಯೆಯಾಗಿದೆಯೇ? ಇದರೊಂದಿಗೆ ಇತರೆ ಯಾವುದೇ ದೃಷ್ಟಿಯಿಂದ ತನಿಖೆ ನಡೆದಿಲ್ಲ. ಇದರಿಂದ ಸರಕಾರಿ ಪರ ವಾದಿಗಳು ಹತ್ಯೆಯ ` ಉದ್ದೇಶ’ ಎಂದು ಯಾವುದನ್ನು ಹೇಳುತ್ತಿದ್ದಾರೆಯೋ, ಅದು ಸಾಬೀತಾಗುವುದಿಲ್ಲ.

‘ಡಾ. ಹಮೀದ್ ದಾಭೋಲ್ಕರ್ ಇವರು ‘ಡಾ. ನರೇಂದ್ರ ದಾಭೋಲ್ಕರ್ ಅವರನ್ನು ಮತ್ತೊಬ್ಬ ಗಾಂಧಿಯನ್ನಾಗಿ ಮಾಡೋಣ’ ಎಂದು ಬೆದರಿಕೆ ಹಾಕಿದ್ದರು.ಎಂದು ಹೇಳಿದರು. ಪ್ರತ್ಯಕ್ಷದಲ್ಲಿ ಇಂತಹ ಬೆದರಿಕೆ ಅವರಿಗೆ ಯಾವಾಗ ಮತ್ತು ಎಲ್ಲಿ ಹಾಕಿದ್ದರು? ಈ ಸಂದರ್ಭದಲ್ಲಿ ಅವರು ಯಾವುದೇ ರೀತಿಯ ಪುರಾವೆಗಳನ್ನು ಒದಗಿಸಿರುವುದಿಲ್ಲ. ಇದರಿಂದ ಕೇವಲ ಖ್ಯಾತಿಗಾಗಿ ಅವರು ಈ ಹೇಳಿಕೆ ನೀಡಿದ್ದರು. ಎಂದು ನ್ಯಾಯವಾದಿ ಸಾಳಸಿಂಗೀಕರ ಇವರು ನ್ಯಾಯಾಲಯದಲ್ಲಿ ಹೇಳಿದರು.