|
ನವದೆಹಲಿ – ‘ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಮತ್ತು ಡಿಜಿಟಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ’ (‘ಎನ್.ಬಿ.ಡಿ.ಎಸ್.ಎ.’) ಸಂಘವು ‘ನ್ಯೂಸ್ 18 ಇಂಡಿಯಾ’ ಮತ್ತು ‘ಟೈಮ್ಸ್ ನೌ ನವಭಾರತ’ ಈ ಹಿಂದಿ ಸುದ್ದಿವಾಹಿನಿಗಳು ಶ್ರದ್ಧಾ ವಾಲಕರ ಪ್ರಕರಣವನ್ನು ‘ಲವ್ ಜಿಹಾದ್’ ಎಂದು ಕರೆದು, ದ್ವೇಷವನ್ನು ನಿರ್ಮಾಣ ಮಾಡಿರುವ ಹೆಸರಿನಡಿಯಲ್ಲಿ ಕ್ರಮ ಜರುಗಿಸಿದೆ. ಈ ವಾಹಿನಿಗಳಿಗೆ ಅನುಕ್ರಮವಾಗಿ 50 ಸಾವಿರ ಮತ್ತು 1 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದೆ. ಹಾಗೆಯೇ ಈ ಸಂದರ್ಭದ ವಿಡಿಯೋಗಳನ್ನು ಎಲ್ಲ ಸ್ಥಳಗಳಿಂದ 7 ದಿನಗಳಲ್ಲಿ ತೆಗೆದುಹಾಕುವಂತೆ ಆದೇಶಿಸಿದೆ. ಶ್ರದ್ಧಾ ವಾಲಕರ ‘ಲೀವ್ ಇನ್ ರಿಲೇಶನ್‌ಶಿಪ್’ನಲ್ಲಿ ಅಫ್ತಾಬ ಹೆಸರಿನ ಮುಸ್ಲಿಂ ಯುವಕನೊಂದಿಗೆ ವಾಸಿಸುತ್ತಿದ್ದಳು. ಆಫ್ತಾಬನು ಶ್ರದ್ಧಾಳ ಹತ್ಯೆಯನ್ನು ಮಾಡಿ ಅವಳ ಮೃತದೇಹವನ್ನು ಅನೇಕ ತುಂಡುಗಳಾಗಿ ಕತ್ತರಿಸಿ ಇಲ್ಲಿನ ಕಾಡಿನಲ್ಲಿ ಎಸೆದಿದ್ದನು.
‘ನ್ಯೂಸ್ 18 ಇಂಡಿಯಾ’ ತನ್ನ 3 ಕಾರ್ಯಕ್ರಮಗಳಲ್ಲಿ ‘ಲವ ಜಿಹಾದ’ ಎಂದು ಉಲ್ಲೇಖಿಸಿತ್ತು.ಇದರಲ್ಲಿ 2 ಕಾರ್ಯಕ್ರಮಗಳ ಸೂತ್ರ ಸಂಚಾಲನೆಯನ್ನು ಅಮನ ಚೋಪ್ರಾ ಮಾಡಿದ್ದರು ಹಾಗೂ ಒಂದು ಕಾರ್ಯಕ್ರಮವನ್ನು ಅಮಿಶ ದೇವಗಣ ಪ್ರಸ್ತುತಪಡಿಸಿದ್ದರು. ‘ಟೈಮ್ಸ್ ನೌ ನವಭಾರತ’ ಮೇಲಿನ ಕಾರ್ಯಕ್ರಮವನ್ನು ಹಿಮಾಂಶು ದೀಕ್ಷಿತ ಅವರು ಪ್ರಸ್ತುತಪಡಿಸಿದ್ದರು. ಈ ಕಾರ್ಯಕ್ರಮಗಳ ಮಾಧ್ಯಮದಿಂದ ಧಾರ್ಮಿಕ ಬಣ್ಣವನ್ನು ನೀಡುವ ಪ್ರಯತ್ನ ಮಾಡಿದ್ದಾರೆಂದು ದೂಷಿಸಲಾಗಿದೆ.
`ಎನ್.ಬಿ.ಡಿ.ಎಸ್.ಎ.’ ಅಧ್ಯಕ್ಷ ಮತ್ತು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಎ.ಕೆ. ಸೀಕರಿ ಮಾತನಾಡಿ, ಪ್ರತಿಯೊಂದು ಅಂತರ್ ಧರ್ಮೀಯ ವಿವಾಹವನ್ನು ಲವ್ ಜಿಹಾದ್ ಎಂದು ಕರೆಯುವುದು ತಪ್ಪು ಎಂದು ಹೇಳಿದ್ದಾರೆ.
Hindi news channels 'News 18 India' and 'Times Now' scrutinized for calling Shraddha Walker's murder, a case of 'Love J!h@d'.
— The news regulatory body NBDSA, imposed a fine of Rs.50 thousand and Rs.1 lakh respectively.
👉 Ironically, in the world's largest democracy, it is… pic.twitter.com/lJ0KNIXgGY
— Sanatan Prabhat (@SanatanPrabhat) March 1, 2024
‘ಆಜ್ ತಕ್’ ನಲ್ಲಿ ಶ್ರೀ ರಾಮನವಮಿಯ ದಿನದಂದು ಮೆರವಣಿಗೆಯ ಮೇಲೆ ನಡೆದ ದಾಳಿಯ ಕಾರ್ಯಕ್ರಮದ ಬಗ್ಗೆಯೂ ಆಕ್ಷೇಪಣೆಗಳು :
ಹಿಂದೂಗಳ ಮೇಲೆ ಮೇರವಣಿಗೆಯ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸುತ್ತಾರೆ , ಇದು ಕಣ್ಣೆದುರಿಗೆ ಇರುವಾಗ ಅದನ್ನು ತೋರಿಸುವುದೂ ಕೂಡ ಅಪರಾಧವೆಂದು ನಿರ್ಧರಿಸುವ ಈ ಸಂಘವನ್ನೇ ವಿಸರ್ಜಿಸಬೇಕು.
2023 ರಲ್ಲಿ, ಶ್ರೀರಾಮ ಜನ್ಮ ದಿನದಂದು, ದೇಶದ ವಿವಿಧ ಸ್ಥಳಗಳಲ್ಲಿ ಹಿಂದೂ ಧಾರ್ಮಿಕ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಆಜ ತಕ ಈ ಹಿಂದಿ ಸುದ್ದಿವಾಹಿನಿಯ ‘ಬ್ಲ್ಯಾಕ ಅಂಡ ವೈಟ’ ಈ ಕಾರ್ಯಕ್ರಮದಲ್ಲಿ ನಿರೂಪಕ ಸುಧೀರ ಚೌಧರಿಯವರು ವಿಶ್ಲೇಷಣಾತ್ಮಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದರು. ಇದರ ಕಾರ್ಯಕ್ರಮದ ಬಗ್ಗೆ ‘ಎನ್.ಬಿ.ಡಿ.ಎಸ್.ಎ.’ ಹೇಳಿರುವುದೇನೆಂದರೆ, ಕಾರ್ಯಕ್ರಮದಲ್ಲಿ ಕೆಲವು ಅಯೋಗ್ಯ ಪ್ರಕರಣಗಳು ಧಾರ್ಮಿಕ ಹಿಂಸಾಚಾರಗಳನ್ನು ಒಳಗೊಂಡಿದ್ದು, ಒಂದು ವಿಶಿಷ್ಟ ಸಮುದಾಯವನ್ನು ಗುರಿ ಮಾಡಲಾಗಿದೆ. ಭವಿಷ್ಯದಲ್ಲಿ ಜಾಗರೂಕತೆಯಿಂದ ಇರುವ ಆವಶ್ಯಕತೆಯಿದೆ. ಇಂದ್ರಜಿತ್ ಘೋರ್ಪಡೆಯವರ ದೂರು ಆಧರಿಸಿ ಆಜ ತಕ್ ಗೆ ನೋಟಿಸ್ ಜಾರಿ ಮಾಡಲಾಗಿದೆ.
ಸಂಪಾದಕೀಯ ನಿಲುವು
|