ಪೂ. ಸಂಭಾಜಿ ಭಿಡೆಗುರೂಜಿ ಮೇಲೆ ಅಂಬೇಡ್ಕರ್ ಬೆಂಬಲಿಗರಿಂದ ಮಾರಣಾಂತಿಕ ಹಲ್ಲೆ !

ಮನಮಾಡ್ (ನಾಸಿಕ್) – ಫೆಬ್ರವರಿ 29 ರಂದು ರಾತ್ರಿ 11.30 ರ ಸುಮಾರಿಗೆ ಪೂ. ಸಂಭಾಜಿ ಭಿಡೆಗುರೂಜಿ ಯೆವಲದಿಂದ ಮಾಲೆಗಾಂವ್‌ಗೆ ಪ್ರಯಾಣಿಸುತ್ತಿದ್ದಾಗ ಅಂಬೇಡ್ಕರ್‌ವಾದಿಗಳು ಅವರ ಕಾರಿನ ಮೇಲೆ ದಾಳಿ ಮಾಡಿರುವ ವಿಡಿಯೋ ಪ್ರಸಾರವಾಗಿದೆ. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಅಂಬೇಡ್ಕರ್ ವಾದಿಗಳು ಪೂ. ಸಂಭಾಜಿ ಭಿಡೆಗುರೂಜಿ ಅವರ ಕಾರಿನ ಮೇಲೆ ದಾಳಿ ಮಾಡಿ ಮಾರಣಾಂತಿಕವಾಗಿ ಹಲ್ಲೆಗೆ ಯತ್ನಿಸುತ್ತಿರುವುದು ಕಾಣಿಸುತ್ತಿದೆ. ರಾಜ್ಯದ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ಇದನ್ನು ಬಲವಾಗಿ ಖಂಡಿಸಿವೆ.

(ಸೌಜನ್ಯ – Sudarshan ಮರಾಠಿ)

ಪೊಲೀಸ್ ಪಾತ್ರದ ಪ್ರಶ್ನೆ ಚಿಹ್ನೆ

ಈ ವೇಳೆ ಪೊಲೀಸರು ದಾಳಿಕೋರರನ್ನು ತಡೆಯಲು ಯತ್ನಿಸುತ್ತಿರುವುದು ಅತ್ಯಂತ ಕಡಿಮೆ ಇತ್ತು. “ಪೊಲೀಸರು ಈ ದಾಳಿಯನ್ನು ಏಕೆ ನಿಲ್ಲಿಸಲಿಲ್ಲ?” ಎಂದು ಹಿಂದುತ್ವನಿಷ್ಠರು ವಿಚಾರಿಸುತ್ತಿದ್ದಾರೆ. ಈ ವೇಳೆ ದಾಳಿಕೋರರು ಕಪ್ಪು ಬಾವುಟ ಪ್ರದರ್ಶಿಸಿ ‘ಮುರ್ದಾಬಾದ್’ ಘೋಷಣೆಗಳನ್ನು ಕೂಗಿದರು. ಈ ವೇಳೆ ಅವಾಚ್ಯ ಶಬ್ಧಗಳಿಂದ ಘೋಷಣೆಗಳನ್ನು ಸಹ ನೀಡಲಾಯಿತು. ಕೆಲ ಯುವಕ-ಯುವತಿಯರು ಕಾರಿನ ಮುಂದೆ ಬಂದು ಕಾರನ್ನು ಅಡ್ಡಗಟ್ಟಿ ಗಾಜು ಹಾಗೂ ಕಾರಿನ ಮುಂಭಾಗಕ್ಕೆ ಹೊಡೆದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅದೇ ಸಮಯಕ್ಕೆ ಒಬ್ಬ ಶೂ ಕಳಚಿ ಕಾರಿನ ಮೇಲೆ ಎಸೆದಿದ್ದಾನೆ. ದಾಳಿಯಲ್ಲಿ ಕಾರಿನ ಮುಂಭಾಗದ ದೀಪಗಳು ಒಡೆಯಿತು. ದಾಳಿಕೋರರನ್ನು ಮನಮಾಡ್ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ದಾಳಿಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪೂ. ಸಂಭಾಜಿ ಭಿಡೆಗುರೂಜಿಗೆ ‘ಝಡ್ ಪ್ಲಸ್’ ಭದ್ರತೆ ನೀಡಬೇಕು ಎಂದು ಹಿಂದುತ್ವನಿಷ್ಠರು ಆಗ್ರಹಿಸುತ್ತಿದ್ದಾರೆ.

ಪೂ. ಭಿಡೆಗುರೂಜಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ! – ಸುನಿಲ್ ಘನವಟ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯ ಸಂಘಟಕ, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಸುನೀಲ್ ಘನವಟ

ಪೂ. ಭಿಡೆಗುರೂಜಿ ಮೇಲಿನ ಹೇಡಿತನದ ದಾಳಿಯ ವಿರುದ್ಧ ಪ್ರತಿಭಟನೆ ! ಪೂಜನೀಯ ಭಿಡೆ ಗುರೂಜಿ ಅವರು ಋಷಿಯಂತಹ ವ್ಯಕ್ತಿತ್ವದವರಾಗಿದ್ದು, ಅವರನ್ನು ವಿವಿಧ ಸ್ಥಳಗಳಲ್ಲಿ ಕೆಲವು ಸಾಮಾಜಿಕ ಕಿಡಿಗೇಡಿಗಳು ಆಗಾಗ್ಗೆ ಹಲ್ಲೆ, ಕಿರುಕುಳ ನೀಡುವುದು, ಅವರ ವಾಹನವನ್ನು ಅಡ್ಡಗಟ್ಟುವುದು ನಡೆಯುತ್ತಿರುತ್ತದೆ. ಮನಮಾಡ್‌ನಲ್ಲಿ ನಡೆದ ಘಟನೆಯೂ ಅದೇ ಆಗಿದೆ. ಪೂ. ಗುರೂಜಿಯವರ ವಾಹನದ ಮೇಲೆ ಪೂರ್ವಾಗ್ರಹ ಪೀಡಿತದಂತೆ ದಾಳಿಗಳು ಮಾಡುವುದು, ಕಪ್ಪು ಬಾವುಟಗಳನ್ನು ತೋರಿಸುವುದು, ಘೋಷಣೆಗಳನ್ನು ಪೊಲೀಸರ ಮುಂದೆ ಮಾಡಲಾಗುತ್ತದೆ. ಸಂವಿಧಾನದ ಬಗ್ಗೆ ಮಾತನಾಡುವ ಜನರು, ಅದೇ ಸಂವಿಧಾನವನ್ನು ಅಗೌರವ ತರುತ್ತಾರೆ ಮತ್ತು ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಾರೆ. ಪೂ. ಗುರೂಜಿಯಂತಹ ವ್ಯಕ್ತಿಯ ಮೇಲೆ ದಾಳಿ ಮಾಡುವುದು ಯಾವ ತತ್ವದಲ್ಲಿದೆ ? ಇಂತಹ ಘಟನೆಯ ವಿರುದ್ಧ ಹಿಂದುತ್ವನಿಷ್ಠ ಸಂಘಟನೆಗಳ ಪರವಾಗಿ ನಾವು ಪ್ರತಿಭಟಿಸುತ್ತೇವೆ. ಈ ರೀತಿ ಮಾರಣಾಂತಿಕ ಹಲ್ಲೆ ಮಾಡುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಒಂದು ನಿರ್ದಿಷ್ಟ ಸಮಯದಲ್ಲಿ ಹಿಂದುತ್ವನಿಷ್ಠರ ಮೇಲೆ ಇಷ್ಟು ದೊಡ್ಡ ಗುಂಪು ದಾಳಿ ಮಾಡುತ್ತಿದೆ, ಈ ದಾಳಿಯು ಪೂರ್ವ ಯೋಜಿತವಾಗಿದೆ ಎಂಬುದು ಸ್ಪಷ್ಟವಾಗಿದೆ. ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗಲಿಲ್ಲ ಎಂದರೆ ಹೇಗೆ ? ಪೊಲೀಸರು ಮಲಗಿದ್ದರೇ ?