ಜ್ಞಾನವಾಪಿಯ ವ್ಯಾಸ ನೆಲಮಾಳಿಗೆಯಲ್ಲಿ ಮುಸ್ಲಿಮರ ನಮಾಜ ಪಠಣದ ಮೇಲೆ ನಿಷೇಧ ಹೇರಿ !

ಹಿಂದೂ ಪಕ್ಷದಿಂದ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ

ವಾರಣಾಸಿ (ಉತ್ತರ ಪ್ರದೇಶ) – ಜ್ಞಾನವಾಪಿಯಲ್ಲಿರುವ ವ್ಯಾಸ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ನೀಡಿದ ನಂತರ, ಹಿಂದೂ ಪಕ್ಷವು ಮುಸ್ಲಿಮರು ನೆಲಮಾಳಿಗೆಯ ಮೇಲೆ ನಡೆದಾಡುವುದನ್ನು ಮತ್ತು ನಮಾಜ ಪಠಣೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಹಾಗೂ ನೆಲಮಾಳಿಗೆಯಲ್ಲಿನ ಚಾವಣಿ ಮತ್ತು ಪಿಲ್ಲರ್‌ಗಳನ್ನು ದುರಸ್ತಿ ಮಾಡುವಂತೆಯೂ ಒತ್ತಾಯಿಸಲಾಗಿದೆ. ಮಾರ್ಚ್ ೧೯ರಂದು ಅರ್ಜಿ ವಿಚಾರಣೆ ನಡೆಯಲಿದೆ.

ಹಿಂದೂ ಪಕ್ಷದ ವಕೀಲ ಮದನ್ ಮೋಹನ್ ಯಾದವ್ ಇವರು ಮಾತನಾಡಿ, “ನ್ಯಾಯಾಲಯದ ಆದೇಶದ ನಂತರ ಜನವರಿ ೩೧ರಿಂದ ವ್ಯಾಸ ನೆಲಮಾಳಿಗೆಯಲ್ಲಿ ಪೂಜೆ ಆರಂಭವಾಗಿದೆ.

ವ್ಯಾಸ ನೆಲಮಾಳಿಗೆಯ ಛಾವಣಿಯು ತುಂಬಾ ಹಳೆ ಹಾಗೂ ದುರ್ಬಲವಾಗಿದೆ. ಮುಸ್ಲಿಮರು ನೆಲಮಾಳಿಗೆಯ ಛಾವಣಿಯ ಮೇಲೆ ನಡೆದಾಡುತ್ತಾರೆ. ಧಾರ್ಮಿಕ ಸ್ಥಳದ ಛಾವಣಿಯ ಮೇಲೆ ನಡೆದುಕೊಂಡು ಹೋಗುವುದು ಅಥವಾ ನಮಾಜ್ ಮಾಡುವುದು ಸರಿಯಲ್ಲ. ನೆಲಮಾಳಿಗೆಯ ಸೀಲಿಂಗ್ ಮತ್ತು ಕಂಬಗಳು ಸಾಕಷ್ಟು ದುರ್ಬಲವಾಗಿವೆ. ಕೆಲವು ಕಾರಣಗಳಿಂದ ಅದು ಬೀಳಬಹುದು ಹೀಗಾಗಬಾರದು. ಆದ್ದರಿಂದ ಮುಸ್ಲಿಂ ಸಮುದಾಯದವರು ನೆಲಮಾಳಿಗೆಯ ಮೇಲ್ಛಾವಣಿಯಲ್ಲಿ ಓಡಾಡುವುದನ್ನು ನಿಲ್ಲಿಸಬೇಕು ಮತ್ತು ನೆಲಮಾಳಿಗೆಯ ಮೇಲ್ಛಾವಣಿ, ಕಂಬಗಳನ್ನು ದುರಸ್ತಿಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.