ಅಜ್ಮೆರ ದರ್ಗಾ ಹಿಂದೆ ಹಿಂದೂಗಳ ದೇವಸ್ಥಾನವಾಗಿದ್ದರಿಂದ ಅಲ್ಲಿ ಪುರಾತತ್ವ ಇಲಾಖೆಯಿಂದ ಸಮೀಕ್ಷೆ ನಡೆಸಿ !

  • ರಾಜಸ್ಥಾನದ ಹಿಂದೂ ಸಂಘಟನೆಯಿಂದ ಮುಖ್ಯಮಂತ್ರಿ ಭಜನಲಾಲ ಅವರ ಬಳಿ ಆಗ್ರಹ !

  • ಹಿಂದು ಸಂಘಟನೆಯ ವಿರುದ್ಧ ದರ್ಗಾದಿಂದ ದೂರು !

ಜಯಪುರ (ರಾಜಸ್ಥಾನ) – ಅಜ್ಮೆರನ ಖ್ವಾಜಾ ಮೊಯಿನುದ್ದೀನ್ ಚಿಶ್ಚಿ ದರ್ಗಾ ಎಂದರೆ ಅಜ್ಮೆರ ದರ್ಗಾದಲ್ಲಿ ಮೊದಲು ಹಿಂದೂ ದೇವಸ್ಥಾನವಿತ್ತು. ಆದ್ದರಿಂದ ಈ ಸ್ಥಳವನ್ನು ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆಯಿಂದ (‘ಎ.ಎಸ್.ಐ.’ ನಿಂದ) ಸ್ಥಳದ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಮಹಾರಾಣಾ ಪ್ರತಾಪ ಸೇನೆ ಮತ್ತು ಹಿಂದೂ ಶಕ್ತಿ ದಳ ಈ ಸಂಘಟನೆಗಳು ರಾಜ್ಯದ ಮುಖ್ಯಮಂತ್ರಿ ಭಜನಲಾಲ ಶರ್ಮಾ ಅವರಿಗೆ ಪತ್ರ ಬರೆದು ಸಮೀಕ್ಷೆ ನಡೆಸುವಂತೆ ಒತ್ತಾಯಿಸಿವೆ. ಇದಲ್ಲದೇ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ.

🚨 ‘अजमेर दरगाह नहीं मंदिर है, चिश्ती ने हिंदुओं का धर्म परिवर्तन करवाया..’

ದರ್ಗಾಗಳ ಬಾಗಿಲುಗಳ ಮೇಲೆ ಈಗಲೂ ಸ್ವಸ್ತಿಕ್ ಚಿಹ್ನೆಗಳು ಕಾಣಿಸುತ್ತಿದೆ !

ಮಹಾರಾಣಾ ಪ್ರತಾಪ ಸೇನೆಯ ಅಧ್ಯಕ್ಷ ರಾಜ್ಯವರ್ಧನ ಸಿಂಗ ಪರಮಾರ ಮಾತನಾಡಿ, ಖ್ವಾಜಾ ಮೊಯಿನುದ್ದೀನ ಹಸನ ಚಿಸ್ತಿ ಅವರ ದರ್ಗಾ ಈ ಮೊದಲು ಶಿವನ ದೇವಸ್ಥಾನವಾಗಿತ್ತು. ಈ ದೇವಸ್ಥಾನವನ್ನು ಮುಸ್ಲಿಂ ದಾಳಿಕೋರರು ಧ್ವಂಸಗೊಳಿಸಿ ದರ್ಗಾವನ್ನು ಕಟ್ಟಿದರು. ದರ್ಗಾಗಳ ಬಾಗಿಲುಗಳ ಮೇಲೆ ಈಗಲೂ ಸ್ವಸ್ತಿಕ ಚಿಹ್ನೆಗಳು ಕಾಣಿಸುತ್ತವೆ. ಸ್ವಸ್ತಿಕ ಚಿಹ್ನೆಯು ಈ ಸ್ಥಳ ಹಿಂದೂಗಳದ್ದಾಗಿರುವ ಸಂಕೇತವಾಗಿದೆ ಎಂದು ಹೇಳಿದರು.

ದರ್ಗಾ ದಿವಾನ ಮತ್ತು ಖಾದಿಮ ಇವರಿಂದ ದೂರು ದಾಖಲು !

ಈ ಸಂಬಂಧ ದರ್ಗಾದ ದಿವಾನ ಜೈನುಅಲ್ ಅಬೇದಿನ್ ಇವರ ಪುತ್ರ ಸಯ್ಯದ ನಸೀರುದ್ದೀನ ಚಿಶ್ತಿ ಇವನು ದರ್ಗಾ ಪೊಲೀಸ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಹಾಗೆಯೇ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನಗಳನ್ನು ತಡೆಯುವಂತೆ ಕೋರಿ ದರ್ಗಾದ ಖಾದಿ(ಸೇವಕ) ಶಕೀಲ ಅಬ್ಬಾಸಿ ಇವರು ಅಜ್ಮೆರ ಕ್ಲಾಕ್ ಟಾವರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದರ್ಗಾ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿ ನರೇಂದ್ರ ಜಾಖಡ ಮಾತನಾಡಿ, ನಸೀರುದ್ದೀನ ಇವರು ನೀಡಿರುವ ದೂರಿನಲ್ಲಿ ಹಿಂದೂ ಶಕ್ತಿ ದಳ ಈ ಸಂಘಟನೆ ದರ್ಗಾವನ್ನು ಮಂದಿರವೆಂದು ಹೇಳುತ್ತಾ, ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆಂದು ಹೇಳಿದರು.

ಈ ಪ್ರಕರಣ ಅಲ್ಪಸಂಖ್ಯಾತರ ಆಯೋಗದ ವರೆಗೆ ತಲುಪಿದೆ. ಆಯೋಗವು ಈ ಪ್ರಕರಣದ ಬಗ್ಗೆ ಅಜ್ಮೆರ ಜಿಲ್ಲಾ ಆಡಳಿತದಿಂದ ಒಂದು ವಾರದಲ್ಲಿ ವರದಿಯನ್ನು ಸಲ್ಲಿಸುವಂತೆ ಕೇಳಿದ್ದಾರೆ. ಖಾದಿಮರ ನಿಯೋಗವು ಅಪರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ದರ್ಗಾ ವಿಷಯದಲ್ಲಿ ನೀಡಲಾಗುತ್ತಿರುವ ಹೇಳಿಕೆಗಳನ್ನು ನಿರ್ಬಂಧಿಸುವಂತೆ ಕೋರಿದ್ದಾರೆ.