ಬೆಮೆತರಾ (ಛತ್ತೀಸಗಡ) ಇಲ್ಲಿ ಬುಡಕಟ್ಟು ಸಮುದಾಯದ 25 ಕ್ಕೂ ಹೆಚ್ಚು ಜನರ ಮತಾಂತರ

ಬೆಮೆತರಾ (ಛತ್ತೀಸಗಡ) – ಇಲ್ಲಿ ಬುಡಕಟ್ಟು ಸಮುದಾಯದ 25 ಕ್ಕೂ ಹೆಚ್ಚು ಜನರು ಸಾಮೂಹಿಕವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. ಅವರೆಲ್ಲರು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಮನೆಗಳಲ್ಲಿ ಮತಾಂತರಗೊಂಡರು. ಕೆಲವು ಮನೆಗಳ ಮೇಲೆ `ಕ್ರಾಸ್’ ಚಿಹ್ನೆಗಳು ಕಂಡುಬಂದಿದೆ. ಈ ಘಟನೆಯಿಂದ ಆಕ್ರೋಶಗೊಂಡ ಹಿಂದೂ ಸಂಘಟನೆಗಳು ಆಡಳಿತಕ್ಕೆ ದೂರು ನೀಡಿವೆ. ಜಿಲ್ಲಾಧಿಕಾರಿ ರಣವೀರ ಶರ್ಮಾ ಇವರು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮತಾಂತರಗೊಂಡವರನ್ನು ಕಾಯಿಲೆಗಳಿಂದ ಮುಕ್ತಿ ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಆಮಿಷವನ್ನು ತೋರಿಸಿದ್ದಾರೆಂದು ಆರೋಪಿಸಿದ್ದಾರೆ.

1. ಇಲ್ಲಿನ ಹಿಂದೂ ಸಂಘಟನೆಯೊಂದಿಗೆ ಸಂಬಂಧಪಟ್ಟ ಸದಸ್ಯರು ವಿಭಾಗ ಸಂಖ್ಯೆ 13 ರಲ್ಲಿ ವಾಸಿಸುವ ಗೊಂಡ ಸಮುದಾಯದ ಐದು ಕುಟುಂಬಗಳ ಪೂಜಾ ಪದ್ಧತಿ ಮತ್ತು ಜೀವನಶೈಲಿಯಲ್ಲಾದ ಬದಲಾವಣೆಯ ಬಗ್ಗೆ ಮಾಹಿತಿ ಪಡೆದರು. ಆ ಸಮಯದಲ್ಲಿ ಪ್ರಾರ್ಥನೆಗಾಗಿ ರಾಯಪುರಕ್ಕೆ ಹೋಗಿದ್ದ ಈ ಕುಟುಂಬದವರು ಈಗ ಪ್ರಧಾನ ಮಂತ್ರಿ ವಸತಿ ಯೋಜನೆಯಡಿ ನಿರ್ಮಿಸಿದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇವರೆಲ್ಲರೂ ಸೇರಿ ಈ ಮನೆಯನ್ನು ಚರ್ಚ ಆಗಿ ಪರಿವರ್ತಿಸಿದ್ದಾರೆಂದು ಆರೋಪಿಸಲಾಗಿದೆ. ಸಂಪೂರ್ಣ ತಹಸಿಲ ಪ್ರದೇಶದಲ್ಲಿ ಇದು ಏಕೈಕ ಚರ್ಚ್ ಆಗಿದೆಯೆಂದು ಹೇಳಲಾಗುತ್ತಿದೆ. ಮೊದಲು ಮತಾಂತರಿತಗೊಂಡ ಕುಟುಂಬವು ಗುಜರಿ ಕೆಲಸ ಮಾಡಿ ತಮ್ಮ ಜೀವನ ಸಾಗಿಸುತ್ತಿದ್ದರು. ಅವರ ವೃತ್ತಿಯು ಇನ್ನೂ ಸಾಂಪ್ರದಾಯಿಕವಾಗಿದ್ದರೂ, ಅವರ ಜೀವನಶೈಲಿ ಬದಲಾಗಿದೆ.

2. ಹಿಂದೂ ಸಂಘಟನೆಗಳು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದು, ಮತಾಂತರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಯಾವ ಮನೆಗಳ ಮೇಲೆ ಕ್ರೈಸ್ತರ ಪವಿತ್ರ ಚಿಹ್ನೆಗಳನ್ನು ಹಚ್ಚಲಾಗುತ್ತಿದೆಯೋ, ಆ ಮನೆಗಳಿಗೆ ಬೀಗ ಹಾಕಬೇಕೆಂದೂ ಮನವಿ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಛತ್ತೀಸಗಡದಲ್ಲಿ ಈಗ ಭಾಜಪದ ಸರಕಾರ ಇದೆ. ಆದ್ದರಿಂದ, ಸರಕಾರವು ಹಿಂದೂಗಳ ಮತಾಂತರ ಮಾಡುವ ಕ್ರೈಸ್ತ ಧರ್ಮಪ್ರಚಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !