ಸಮಾಜವಾದಿ ಪಕ್ಷದ ಸಂಸದ ಡಾ. ಶಫಿಕುರ ಬರ್ಕ್ ನಿಧನ !

ಸಂಭಲ (ಉತ್ತರಪ್ರದೇಶ) – ಸಮಾಜವಾದಿ ಪಕ್ಷದ ಸಂಸದ ಡಾ. ಶಫಿಕುರ್ ರಹಮಾನ ಬರ್ಕ್ ಇವರು ಫೆಬ್ರವರಿ ೨೭ ರಂದು ಹೃದಯಘಾತದಿಂದ ನಿಧನರಾದರು. ಅವರಿಗೆ ೯೪ ವರ್ಷ ವಯಸ್ಸು ಆಗಿತ್ತು. ಸುಮಾರು ೨೦ ದಿನಗಳ ಹಿಂದೆ ಮೂತ್ರಪಿಂಡದ ಸೋಂಕಿನಿಂದ ಅವರನ್ನು ಮುರಾದಾಬಾದ ಇಲ್ಲಿಯ ಒಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಅವರ ರಾಜಕೀಯ ಪ್ರವಾಸ ೧೯೭೪ ರಿಂದ ಆರಂಭವಾಗಿತ್ತು. ಡಾ. ಬರ್ಕ್ ಇವರು ಸಂಸತ್ತಿನಲ್ಲಿ ಎಲ್ಲಕ್ಕಿಂತ ಹಿರಿಯ ಸಂಸದರಾಗಿದ್ದರು. ಅವರು ಉತ್ತರ ಪ್ರದೇಶದಲ್ಲಿನ ಓರ್ವ ಮುಸಲ್ಮಾನ್ ನಾಯಕನೆಂದು ಗುರುತಿಸಿಕೊಂಡಿದ್ದರು. ಅವರು ೫ ಬಾರಿ ಸಂಸದರು ಮತ್ತು ೪ ಬಾರಿ ಶಾಸಕರು ಆಗಿದ್ದರು.

(ಸೌಜನ್ಯ – News18 MP Chhattisgarh)

ಶಫಿಕುರ್ ರೆಹಮಾನ್ ಬರ್ಕ್ ಇವರ ಭಾರತದ್ವೇಷ ಮತ್ತು ಹಿಂದೂದ್ವೇಷ ಹಾಗೂ ಇಸ್ಲಾಂ ಪ್ರೇಮ !

೧. ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ ಬರ್ಕ್ ಇವರು, ನಮ್ಮ (ಬಾಬ್ರಿ) ಮಸೀದಿ ಬಲವಂತವಾಗಿ ನೆಲಸಮ ಮಾಡಿದ್ದಾರೆ. ಇದು ಮಾನವೀಯತೆಯ ವಿರುದ್ಧವಾಗಿದೆ. ನಮ್ಮ ಬಾಬರಿ ಮಸೀದಿ ನಮಗೆ ಮತ್ತೆ ಸಿಗಲಿ ಎಂದು ನಾನು ಅಲ್ಲಾನ ಬಳಿ ಪ್ರಾರ್ಥನೆ ಮಾಡುತ್ತೇನೆ.

೨. ೨೦೧೯ ರಲ್ಲಿ ಲೋಕಸಭೆಯಲ್ಲಿ ಪ್ರಮಾಣವಚನ ಸಮಾರಂಭದ ಸಮಯದಲ್ಲಿ ಬರ್ಕ್ ಇವರು ವಂದೆ ಮಾತರಂ ಇದು ಇಸ್ಲಾಂ ವಿರೋಧಿ ಆಗಿದೆ ಎಂದು ಹೇಳುತ್ತಾ ಅದನ್ನು ಹೇಳುವುದನ್ನು ತಪ್ಪಿಸಿದ್ದರು.

೩. ಅವರು ಇತ್ತೀಚಿಗೆ ನಡೆಯುತ್ತಿರುವ ಹೊಸ ಸಂಸತ್ತಿನಲ್ಲಿ ನಮಾಜ ಪಠಣೆಯ ಬೇಡಿಕೆ ಇಟ್ಟಿದ್ದರು.

೪. ಜ್ಞಾನವಾಪಿಯಲ್ಲಿ ಶಿವಲಿಂಗ ಇಲ್ಲ, ಎಂದು ಅವರು ಇತ್ತೀಚಿಗೆ ಹೇಳಿದ್ದರು.

೫. ‘ಹಮಾಸ್’ ಇದು ಭಯೋತ್ಪಾದಕ ಸಂಘಟನೆ ಅಲ್ಲ’, ಎಂದು ಕೂಡ ಅವರು ಹೇಳಿದ್ದರು.

೬. ಬರ್ಕ್ ಇವರು ೨೦೨೨ ರಲ್ಲಿ ಅಪಘಾನಿಸ್ತಾನದಲ್ಲಿ ಸ್ಥಾಪಿತವಾಗಿರುವ ತಾಲಿಬಾನಿ ಅಧಿಕಾರಕ್ಕೆ ಬೆಂಬಲ ನೀಡಿದ್ದರು.