ಹಾವಡಾ (ಬಂಗಾಳ) ಇಲ್ಲಿ ರಾತ್ರಿ ಮುಸಲ್ಮಾನರ ಹಬ್ಬದಲ್ಲಿ ಹಿಂದುಗಳ ೫ ದೇವಸ್ಥಾನಗಳ ಧ್ವಂಸ !

ವಿರೋಧಪಕ್ಷದ ನಾಯಕ ಸುವೆಂದು ಅಧಿಕಾರಿ ಇವರು ಛಾಯಾಚಿತ್ರಗಳು ಮತ್ತು ವಿಡಿಯೋ ಪೋಸ್ಟ್ ಮಾಡಿ ಮಾಹಿತಿ ನೀಡಿದರು !

ಹಾವಡಾ (ಬಂಗಾಳ ) – ಜಿಲ್ಲೆಯಲ್ಲಿನ ಬ್ರಾಂಕಾದಲ್ಲಿ ಹಿಂದುಗಳ ೫ ದೇವಸ್ಥಾನಗಳನ್ನು ದ್ವಂಸ ಮಾಡಿರುವ ವರದಿಯಾಗಿದೆ. ಭಾಜಪದ ನಾಯಕ ಮತ್ತು ವಿರೋಧಿ ಪಕ್ಷದ ನಾಯಕ ಸುವೆಂದು ಅಧಿಕಾರಿ ಇವರು ಅವರ ‘ಎಕ್ಸ್’ ಖಾತೆಯಲ್ಲಿ ದ್ವಂಸ ಮಾಡಿರುವ ದೇವಸ್ಥಾನದ ಛಾಯಾಚಿತ್ರಗಳು ಮತ್ತು ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಟೋಪಿ ಹಾಕಿರುವ ಕೆಲವು ಜನರು ದೇವಸ್ಥಾನಕ್ಕೆ ಹಾನಿ ಮಾಡುತ್ತಿರುವುದು ಕಾಣುತ್ತಿದೆ. ಈ ಘಟನೆಯಿಂದ ಆಕ್ರೋಶಗೊಂಡಿರುವ ಹಿಂದೂ ಸಂಘಟನೆಯ ಜನರು ಧ್ವಂಸ ಮಾಡಿರುವವರನ್ನು ಆದಷ್ಟು ಬೇಗನೆ ಬಂಧಿಸಲು ಒತ್ತಾಯಿಸುತ್ತಿದ್ದಾರೆ.

೧. ಸುವೆಂದು ಅಧಿಕಾರಿ ಇವರು ಅವರ ಪೋಸ್ಟನಲ್ಲಿ, ನೆನ್ನೆ ರಾತ್ರಿ ದುಶ್ಕರ್ಮಿಗಳು ಬ್ರಾಂಕಾದ ೫ ಸನಾತನಿ ದೇವಸ್ಥಾನ ಧ್ವಂಸ ಮಾಡಿದ್ದಾರೆ. ಸ್ಥಳೀಯ ಜನರು ರೈಲ್ವೆ ಸಾರಿಗೆ ನಿಲ್ಲಿಸಿದ್ದರು. ‘ನಾನು ಹಾವಡಾ ಪೊಲೀಸ್ ಆಯುಕ್ತ ಪ್ರವೀಣ ಕುಮಾರ ತ್ರಿಪಾಠಿ ಮತ್ತು ಪೊಲೀಸ ಮಹಾಸಂಚಾಲಕರಿಗೆ, ಈ ಘಟನೆಯಲ್ಲಿನ ತಪ್ಪಿತಸ್ಥರನ್ನು ಆದಷ್ಟು ಬೇಗನೆ ಬಂಧಿಸಬೇಕು ಎಂದು ವಿನಂತಿಸುತ್ತೇನೆ’, ಎಂದು ಬರೆದಿದ್ದಾರೆ.

೨. ಸುವೆಂದು ಅಧಿಕಾರಿ ಇವರು ಶೇರ್ ಮಾಡಿರುವ ಛಾಯಾಚಿತ್ರದಲ್ಲಿ ದೇವತೆಗಳ ಮೂರ್ತಿಗಳು ಭಗ್ನ ಗೊಂಡಿರುವ ಸ್ಥಿತಿಯಲ್ಲಿ ಕಾಣುತ್ತೇವೆ. ಚಂದನ, ಪುಷ್ಪಗಳು ಮುಂತಾದವು ಎಲ್ಲಾ ಕಡೆಗೆ ಹರಡಿರುವುದು ಕಾಣುತ್ತಿದೆ. ಜನರೂ ರೈಲ್ವೆ ಹಳಿಗಳ ಮೇಲೆ ಕೇಸರಿ ಧ್ವಜಗಳನ್ನು ಹಿಡಿದು ನಿಂತಿರುವುದು ಕಾಣುತ್ತಿದೆ. ಈ ಪ್ರತಿಭಟನಾಕಾರರಲ್ಲಿ ಮಹಿಳೆಯರು ಮತ್ತು ಚಿಕ್ಕ ಮಕ್ಕಳ ಸಮಾವೇಶ ಕೂಡ ಇದೆ. ೧ ನಿಮಿಷ ೪೫ ಸೆಕೆಂಡ್ ನ ವಿಡಿಯೋದಲ್ಲಿ ಟೋಪಿಗಳು ಹಾಕಿರುವ ಜನರ ಸಂಪೂರ್ಣ ಸಮೂಹ ಕಾಣುತ್ತದೆ. ಈ ಎಲ್ಲರೂ ರಾತ್ರಿಯ ಸಮಯದಲ್ಲಿ ದೇವಸ್ಥಾನದ ಧ್ವಂಸ ಮಾಡುತ್ತಿರುವುದು ಕಾಣುತ್ತಿದೆ. ಧ್ವಂಸದ ಈ ಘಟನೆ ಶಬ್ ಏ ಬಾರಾತ್ (ಮುಸಲ್ಮಾನರ ಹಬ್ಬ) ಸಮಯದಲ್ಲಿ ನಡೆದಿರುವುದು ತಿಳಿಯುತ್ತದೆ. ಬಂಗಾಳ ಪೋಲೀಸರ ಕಾರ್ಯ ಶೈಲಿಯಿಂದ ಹಿಂದೂಗಳನ್ನು ಮೇಲಿಂದ ಮೇಲೆ ಗುರಿ ಮಾಡುತ್ತಿದ್ದಾರೆ. ಬಿಗುವಿನ ವಾತಾವರಣ ನಿರ್ಮಾಣವಾಗಿರುವುದನ್ನು ನೋಡಿ ಘಟನಾ ಸ್ಥಳದಲ್ಲಿ ಪೊಲೀಸರ ಬಂದೋಬಸ್ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಬಂಗಾಳದಲ್ಲಿ ಹಿಂದುಗಳ ದೇವಸ್ಥಾನವನ್ನು ದ್ವಂಸಗೊಳಿಸುವವರು ಯಾರು, ಇದು ಪ್ರತ್ಯೇಕವಾಗಿ ಹೇಳಬೇಕಿಲ್ಲ !

ಬಂಗಾಳದಲ್ಲಿ ಎಲ್ಲಿಯವರೆಗೆ ರಾಷ್ಟ್ರಪತಿ ಆಡಳಿತ ಜಾರಿಯಾಗುವುದಿಲ್ಲವೋ ಅಲ್ಲಿಯವರೆಗೆ ಹೀಗೆ ನಡೆಯುತ್ತದೆ !