ಬಂಗಾಳದಲ್ಲಿ ಕಳೆದ ವರ್ಷದ ರಾಮನವಮಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 16 ಮುಸ್ಲಿಮರ ಬಂಧನ !

ಕೋಲಕಾತಾ (ಬಂಗಾಳ) – ಕಳೆದ ವರ್ಷ ಬಂಗಾಳದಲ್ಲಿ ನಡೆದ ರಾಮನವಮಿಯಲ್ಲಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ 16 ಮುಸ್ಲಿಮರನ್ನು ಬಂಧಿಸಿದೆ. ಇವರೆಲ್ಲರ ಮೇಲೆ ಪಿತೂರಿ, ಗಲಭೆಗಳನ್ನು ಪ್ರಚೋದಿಸುವುದು ಮತ್ತು ಧಾರ್ಮಿಕ ಮೆರವಣಿಗೆಗಳ ಮೇಲೆ ದಾಳಿ ಮಾಡಿದ ಆರೋಪದಡಿಯಲ್ಲಿ ಬಂಧಿಸಲಾಗಿದೆ. ತನಿಖೆಯ ವೇಳೆ ಹಿಂಸಾಚಾರದ ವಿಡಿಯೋ ದೃಶ್ಯಾವಳಿಗಳನ್ನು ನೋಡಿದ ನಂತರ ‘ಎನ್.ಐ.ಎ.’ 16 ಜನರನ್ನು ಗುರುತಿಸಿದೆ.

1. ಮಾರ್ಚ್ 30, 2023 ರಂದು, ಬಂಗಾಳದ ಉತ್ತರ ದಿನಾಜಪುರ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ರಾಮನವಮಿ ಮೆರವಣಿಗೆಯಲ್ಲಿ ಮತಾಂಧ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ಮಾಡಿದ್ದರು.

 2. 24 ಗಂಟೆಗಳ ಬಳಿಕ ಹೌರಾದ ಶಿಬ್‌ಪುರದಲ್ಲಿ ಪುನಃ ಕಲ್ಲು ತೂರಾಟ ನಡೆದಿದೆ. ಇದರಲ್ಲಿ 3 ಪೊಲೀಸರು ಸೇರಿದಂತೆ ಅಂದಾಜು 15 ಮಂದಿ ಗಾಯಗೊಂಡಿದ್ದು, 10ಕ್ಕೂ ಹೆಚ್ಚು ವಾಹನಗಳು ಸುಡಲಾಗಿತ್ತು. 20ಕ್ಕೂ ಹೆಚ್ಚು ಅಂಗಡಿಗಳನ್ನು ಧ್ವಂಸಗೊಳಿಸಲಾಗಿತ್ತು.

3. ಅಫ್ರೋಜ್ ಆಲಂ, ಮೊಹಮ್ಮದ್ ಅಶ್ರಫ್, ಮೊಹಮ್ಮದ್ ಇಮ್ತಿಯಾಜ್ ಆಲಂ, ಮೊಹಮ್ಮದ್ ಇರ್ಫಾನ್ ಆಲಂ, ಕೈಸರ್, ಮೊಹಮ್ಮದ್ ಫರೀದ್ ಆಲಂ, ಮೊಹಮ್ಮದ್ ಫುರ್ಕನ್ ಆಲಂ, ಮೊಹಮ್ಮದ್ ಪಪ್ಪು, ಮೊಹಮ್ಮದ್ ಸುಲೇಮಾನ್, ಮೊಹಮ್ಮದ್ ಸರಜನ್, ಮೊಹಮ್ಮದ್ ನೂರುಲ್ ಹೊಡಾ, ಮೊಹಮ್ಮದ್ ವಾಸಿಮ್, ಮೊಹಮ್ಮದ್ ಸಲ್ಲಾಹುದ್ದೀನ್, ಮಹಮ್ಮದ ಜಾನನಾಥ, ವಸೀಂ ಅಕ್ರಂ ಮತ್ತು ಮೊಹಮ್ಮದ್ ತನ್ವೀರ್ ಆಲಂ ಎಂದು ಬಂಧಿತರ ಹೆಸರು ಹೇಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಸಂಪಾದಕೀಯ ನಿಲುವು

ಗಲಭೆ ನಡೆದು 1 ವರ್ಷ ಕಳೆದಿದೆ. ಹೀಗಾಗಿ ‘ಗಲಭೆಕೋರರನ್ನು ಬಂಧಿಸಲು ಇಷ್ಟು ದಿನ ಏಕೆ ಬೇಕಾಯಿತು ?’, ಎಂಬ ಪ್ರಶ್ನೆಗೆ ತನಿಖಾ ಸಂಸ್ಥೆಗಳೇ ಉತ್ತರಿಸಬೇಕು !

ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾದರೆ ಈ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಹಿಂದೂಗಳಿಗೆ ಅನಿಸುತ್ತದೆ !