ಹುಡುಗಿಯರ ಮೇಲೆ ಬಲಾತ್ಕಾರ ಮಾಡುತ್ತಿದ್ದ ಅಕಬರನ ಮಾಹಿತಿಯನ್ನು ಪಠ್ಯಪುಸ್ತಕದಿಂದ ಕೈಬಿಡಲಾಗುವುದು

ರಾಜಸ್ಥಾನದ ಶಿಕ್ಷಣಸಚಿವರಾದ ಮದನ ದಿಲಾವರ ಇವರು ನೀಡಿದ ಮಾಹಿತಿ!

ಬಲೋತ್ರಾ(ರಾಜಸ್ಥಾನ) – ಅಕಬರನು ಆಕ್ರಮಣಕಾರಿ ಮತ್ತು ಬಲಾತ್ಕಾರಿಯಾಗಿದ್ದನು. ಅವನು ಮೀನಾ ಬಜಾರ್ (ಮಹಿಳೆಯರು ನಡೆಸುತ್ತಿದ್ದ ಮಾರುಕಟ್ಟೆ. ಅಕಬರನು ಈ ಮಾರುಕಟ್ಟೆಯನ್ನು ಪ್ರಾರಂಭಿಸಿದ್ದನು)ಪ್ರಾರಂಭ ಮಾಡುತ್ತಿದ್ದನು ಮತ್ತು ಸುಂದರ ಮಹಿಳೆಯರನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದನು. ತದನಂತರ ಅವನು ಆ ಹುಡುಗಿಯರ ಮೇಲೆ ಬಲಾತ್ಕಾರ ಮಾಡುತ್ತಿದ್ದನು. ಇಂತಹ ಅಕಬರನನ್ನು ಶ್ರೇಷ್ಠನೆಂದು ಕರೆಯುವುದು ಮೂರ್ಖತನವೇ ಆಗಿದೆ. ಶಾಲೆಯ ಶಿಕ್ಷಣ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಿ ಇಂತಹ ವಿಷಯಗಳನ್ನು ತೆಗೆದುಹಾಕಲಾಗುವುದು ಎಂದು ರಾಜಸ್ಥಾನದ ಶಿಕ್ಷಣ ಸಚಿವ ಮದನ ದಿಲಾವರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುವಾಗ ತಿಳಿಸಿದರು.

ಸರಕಾರಿ ಶಾಲೆಗಳಲ್ಲಿ ಪ್ರತಿದಿನ ಸೂರ್ಯ ನಮಸ್ಕಾರ ಮಾಡಲು ಆದೇಶ!

ಶಿಕ್ಷಣಸಚಿವ ಮದನ ದಿಲಾವರ ಮಾತನ್ನು ಮುಂದುವರಿಸಿ, ರಾಜ್ಯದ ಸರಕಾರಿ ಶಾಲೆಗಳಲ್ಲಿ ಪ್ರತಿದಿನ ಪ್ರಾರ್ಥನಾ ಸಭೆಗಳಲ್ಲಿ ಸೂರ್ಯನಮಸ್ಕಾರ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮದನ ದಿಲಾವರ ಹೇಳಿದರು. ಈ ಕುರಿತು ಪರಿಶೀಲನಾ ಸಭೆಗಳನ್ನು ನಡೆಸಲಾಗುವುದು. ಮಕ್ಕಳಿಗೆ ಪ್ರತಿದಿನ ಸೂರ್ಯ ನಮಸ್ಕಾರ ಮಾಡಲು ಕ್ರಮ ಕೈಕೊಳ್ಳಬೇಕು ಎಂದು ಶಿಕ್ಷಕರು ಹಾಗೂ ಸಿಬ್ಬಂದಿಗೆ ಮನವಿ ಮಾಡಲಾಗಿದೆ.

ಸಂಪಾದಕೀಯ ನಿಲುವು

ಅಕಬರನನ್ನು ಹೊಗಳುವವರಿಗೆ ತಪರಾಕಿ! ಕೇಂದ್ರ ಸರಕಾರವು ತನ್ನ ಅಧಿಕಾರ ವ್ಯಾಪ್ತಿಯಡಿಯಲ್ಲಿ ಬರುವ ಪಠ್ಯಕ್ರಮಗಳಿಂದಲೂ ಮೊಗಲರ ವೈಭವೀಕರಣ ಮಾಡುವ ಪಾಠಗಳನ್ನು ಕೈಬಿಟ್ಟು ಅವರ ದಾಳಿ ಮತ್ತು ಅತ್ಯಾಚಾರಿ ಮಾನಸಿಕತೆಯ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ಮಾಡಿಕೊಡಬೇಕು.