ಕಾನ್ಪುರ (ಉತ್ತರ ಪ್ರದೇಶ) ಇಲ್ಲಿ ನಡೆದ ಘಟನೆ!
ಕಾನಪುರ (ಉತ್ತರ ಪ್ರದೇಶ) – ಇಲ್ಲಿನ 5 ವರ್ಷದ ಬಾಲಕನೊಬ್ಬ ಅಲಾಹಾಬಾದ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿ ಶಾಲೆಯ ಪಕ್ಕದಲ್ಲಿರುವ ಮದ್ಯದಂಗಡಿಯನ್ನು ತೆಗೆಯುವಂತೆ ಕೋರಿದ್ದಾನೆ. ಈ ಅರ್ಜಿಯಲ್ಲಿ, ಇಲ್ಲಿ ಜನರು ಮದ್ಯವನ್ನು ಕುಡಿದು ಅವಾಚ್ಯಪದಗಳಲ್ಲಿ ಬೈದು ಜಗಳವಾಡುತ್ತಾರೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾನೆ.
(ಸೌಜನ್ಯ – ABP Ganga)
1. ಈ ಅರ್ಜಿಯ ವಿಚಾರಣೆ ವೇಳೆ ಜಿಲ್ಲಾ ಅಬಕಾರಿ ಇಲಾಖೆಯು, ‘ಮದ್ಯದಂಗಡಿ 30 ವರ್ಷ ಹಳೆಯದಾಗಿದೆ ಮತ್ತು ಈ ಶಾಲೆಯು 2019ರಲ್ಲಿ ತೆರೆಯಲಾಗಿದೆ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು. (ಹೀಗಿದ್ದರೆ, ಈ ಶಾಲೆಗೆ ಪರವಾನಿಗೆ ಹೇಗೆ ಸಿಕ್ಕಿತು ? ಆ ಸಮಯದಲ್ಲಿ ಸರಕಾರಕ್ಕೆ ಈ ನಿಯಮ ತಿಳಿದಿರಲಿಲ್ಲವೇ ? – ಸಂಪಾದಕರು) ಇದಕ್ಕೆ ನ್ಯಾಯಾಲಯವು ಆ ಇಲಾಖೆಗೆ, `ಇಲ್ಲಿ ಶಾಲೆ ಪ್ರಾರಂಭವಾದ ನಂತರ ಅಂಗಡಿಯ ಪರವಾನಿಗೆಯನ್ನು ಹೇಗೆ ನವೀಕರಿಸಲಾಗುತ್ತಿದೆ ?’ ಎಂದು ವಿಚಾರಿಸಿತು. ಈ ಪ್ರಕರಣದ ವಿಚಾರಣೆ ಮಾರ್ಚ್ 13 ರಂದು ನಡೆಯಲಿದೆ.
2. ರತನ ಸದನ ಆಜಾದ್ ನಗರದಲ್ಲಿ ವಾಸಿಸುವ ನ್ಯಾಯವಾದಿ ಪ್ರಸೂನ ದೀಕ್ಷಿತ ಇವರ ಪುತ್ರ ಇಲ್ಲಿಯ ಎಂ.ಆರ್. ಜಯಪುರಿಯಾ ಶಾಲೆಯಲ್ಲಿ ಶಿಶುವರ್ಗದಲ್ಲಿ ಕಲಿಯುತ್ತಿದ್ದಾನೆ. ನ್ಯಾಯವಾದಿ ಆಶುತೋಷ ಶರ್ಮಾ ಅವನು ದಾಖಲಿಸಿರುವ ದೂರಿನ ಅರ್ಜಿಯ ಪರವಾಗಿ ಹೋರಾಡುತ್ತಿದ್ದಾರೆ. ಅವರು ಮಾತನಾಡಿ, ಯಾವುದೇ ಶಾಲೆಯಿಂದ 50 ಮೀಟರ ಅಂತರದಲ್ಲಿ ಮದ್ಯದಂಗಡಿ ಮದ್ಯದಂಗಡಿ ತೆರೆಯಬೇಕೆಂಬ ನಿಯಮವಿದೆ; ಆದರೆ ಈ ಮದ್ಯದಂಗಡಿ ಶಾಲೆಯಿಂದ 30 ಮೀಟರ್ ಅಂತರದಲ್ಲಿ ಇದೆ. ಮುಂಜಾನೆ 7 ಗಂಟೆಗೆ ಸುಮಾರಿಗೆ ಅಂಗಡಿ ಬೇಗನೆ ತೆರೆಯುತ್ತದೆ. ಅಂಗಡಿಯ ಬಳಿ ಮದ್ಯ ಸೇವಿಸುವ ಜನರು ಪರಸ್ಪರ ಬೈಯ್ದಾಡುತ್ತಾರೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಈ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಸಂಪಾದಕೀಯ ನಿಲುವು5 ವರ್ಷದ ಮಗುವಿಗೆ ಅಂತಹ ಅರ್ಜಿಯನ್ನು ಏಕೆ ಸಲ್ಲಿಸಬೇಕಾಗುತ್ತಿದೆ ? ಆಡಳಿತಕ್ಕೆ ಇದು ಅರ್ಥವಾಗುವುದಿಲ್ಲವೇ ? |