ಫ್ರಾನ್ಸ ರಾಷ್ಟ್ರಧ್ವಜವನ್ನು ‘ಸೈತಾನ ಧ್ವಜ’ ಎಂದು ಕರೆದ ಇಮಾಮನನ್ನು 12 ಗಂಟೆಗಳಲ್ಲಿ ದೇಶದಿಂದ ಹೊರಗೆ ಓಡಿಸಿದರು !

ಪ್ಯಾರಿಸ್ (ಫ್ರಾನ್ಸ್) – ‘ಮೂಲಭೂತವಾದ’ ವನ್ನು ಹರಡುತ್ತಿರುವ ಕಾರಣವನ್ನು ನೀಡಿ, ಸರಕಾರವು ಟ್ಯುನೀಶಿಯಾ ಇಮಾಮ(ಮಶೀದಿಯಲ್ಲಿ ಪ್ರಾರ್ಥನೆಯನ್ನು ಮಾಡಿಸಿಕೊಳ್ಳುವ) ಮಹಜೂಬ ಮಹಜೌಬೀಮ ಅನ್ನು ದೇಶದಿಂದ ಹೊರಗೆ ಅಟ್ಟಿದೆ. . ಇಮಾಮ ಮಹಜೂಬ ಮಹಜೌಬೀಮ ಇವನ ಮೇಲೆ `ಬಗ್ನಾಲ್ಸ-ಸು- ಸೆಯಿಸ’ ಇಲ್ಲಿನ ಇಟೋಬಾ ಮಶೀದಿಯಲ್ಲಿ ಮತಾಂಧತೆ ಹರಡುವ ಹೇಳಿಕೆಯನ್ನು ನೀಡಿರುವ ಆರೋಪವಿದೆ. ಫ್ರಾನ್ಸ ಸರಕಾರ ಅವನ ಮೇಲೆ ತಕ್ಷಣ ಕ್ರಮ ಕೈಗೊಂಡು ಬಂಧಿಸಿ, 12 ಗಂಟೆಯೊಳಗಾಗಿ ಅವನನ್ನು ದೇಶದಿಂದ ಹೊರಗೆ ಅಟ್ಟಿದೆ.

ಫ್ರಾನ್ಸ ಗೃಹಸಚಿವ ಗೆರಾಲ್ಡ ಡರಮಾನಿನ ಇವರು `’ಎಕ್ಸ್’ ಮೇಲೆ ಪೋಸ್ಟ್ ಮಾಡಿ ‘ ಫ್ರಾನ್ಸ ದೇಶವು ಮೂಲಭೂತವಾದವನ್ನು ಹರಡುವ ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವುದಕ್ಕಾಗಿ ಟುನೀಶಿಯಾದ ಮುಸ್ಲಿಂ ಧರ್ಮಗುರುಗಳನ್ನು ದೇಶದಿಂದ ಹೊರಗೆ ಅಟ್ಟಿದೆ. ಫ್ರಾನ್ಸ್‌ನಲ್ಲಿ ಯಾವುದೇ ಮತಾಂಧತೆಗೆ ಸ್ಥಾನವಿಲ್ಲ.’ ಇಮಾಮನನ್ನು ಎಲ್ಲಿಗೆ ಕಳುಹಿಸಲಾಗಿದೆ, ಎನ್ನುವ ವಿಷಯದಲ್ಲಿ ಡರಮಾನಿನ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ.

ಇಮಾಮನಿಂದ ಫ್ರಾನ್ಸ ರಾಷ್ಟ್ರಧ್ವಜದ ಟೀಕೆ !

ಮಶೀದಿಯಲ್ಲಿ ಇಮಾಮನ ಪ್ರವಚನದ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ಇದರಲ್ಲಿ ಇಮಾಮ ಒಂದು ಧ್ವಜವನ್ನು `ಸೈತಾನಿ ಧ್ವಜ’ ಎಂದು ಹೇಳುತ್ತಿರುವುದು ಕಾಣಿಸುತ್ತಿದೆ.. ಅದರಲ್ಲಿ ಅವನು ` ಯಾರು ಅಲ್ಲಾನ ತತ್ವಗಳನುಸಾರ ನಡೆಯುತ್ತಾನೆಯೋ, ಅವನ ಆಯುಷ್ಯದಲ್ಲಿ ಇಂತಹ ಧ್ವಜಗಳಿಗೆ ಸ್ಥಾನವಿಲ್ಲ. ಯಾವ ತ್ರಿವರ್ಣಧ್ವಜ ನಮಗೆ ತೊಂದರೆ ಕೊಡುತ್ತದೆಯೋ ಮತ್ತು ಯಾರಿಂದ ನಮಗೆ ತಲೆನೋವಾಗುತ್ತದೆಯೋ, ಅಂತಹ ತ್ರಿವರ್ಣ ನಮ್ಮಲ್ಲಿ ಇರುವುದಿಲ್ಲ’ ಎಂದು ಹೇಳಿದ್ದಾನೆ.
ಈ ಇಮಾಮ ನೇರವಾಗಿ ಫ್ರಾನ್ಸ ರಾಷ್ಟ್ರಧ್ವಜದ ಹೆಸರನ್ನು ಹೇಳದಿದ್ದರೂ, ಫ್ರಾನ್ಸ ಧ್ವಜದಲ್ಲಿ ನೀಲಿ, ಬಿಳಿ ಮತ್ತು ಕೆಂದು ಹೀಗೆ ಮೂರು ಬಣ್ಣಗಳಿರುವುದರಿಂದ ಇದೇ ಧ್ವಜದ ವಿಷಯದಲ್ಲಿ ಹೇಳಲಾಗಿದೆಯೆಂದು ತಿಳಿಯಲಾಗುತ್ತಿದೆ.

ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ ! – ಇಮಾಮ

ನಾನು ಯಾವುದೇ ತಪ್ಪು ಕೆಲಸವನ್ನು ಮಾಡಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಫ್ರಾನ್ಸ ರಾಷ್ಟ್ರಧ್ವಜವನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ ಎಂದು ಇಮಾಮ ಫ್ರಾನ್ಸ ದೇಶದ ಪ್ರಸಾರ ಮಾಧ್ಯಮಗಳಿಗೆ ಹೇಳಿದ್ದಾನೆ. ಈ ಕ್ರಮದ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿಯೂ ಇಮಾಮ ತಿಳಿಸಿದ್ದಾನೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಎಂದಾದರೂ ಹೀಗಾಗುತ್ತದೆಯೇ? ಭಾರತವು ಫ್ರಾನ್ಸ ಸರಕಾರದಿಂದ ಕಲಿಯಬೇಕು ಮತ್ತು ಇದೇ ರೀತಿಯ ಕ್ರಮಗಳನ್ನು ಕೈಕೊಳ್ಳಬೇಕು!