Russian Company Dupes Indians : ೨ ಲಕ್ಷ ರೂಪಾಯಿ ನೌಕರಿ ಕೊಡುವ ಅಮಿಷ ತೋರಿಸಿ ೪ ಭಾರತೀಯರನ್ನು ರಷ್ಯಾ-ಉಕ್ರೇನ್ ಯುದ್ಧಭೂಮಿಗೆ ಕಳಿಸಿದರು !

ರಷ್ಯಾದ ಒಂದು ಸಂಸ್ಥೆಯಿಂದ ವಂಚನೆ !

ಮಾಸ್ಕೋ (ರಷ್ಯಾ) – ರಷ್ಯಾದ ಕೆಲವು ಸಂಸ್ಥೆಗಳು ಭಾರತೀಯರನ್ನು ವಂಚಿಸಿ ರಷ್ಯಾ-ಉಕ್ರೇನ್ ಯುದ್ಧಭೂಮಿಯಲ್ಲಿ ಹೋರಾಡಲು ಕಳಿಸುತ್ತಿವೆ. ಎರಡೂ ದೇಶಗಳ ಗಡಿಯಲ್ಲಿ ೪ ಭಾರತೀಯರು ಉಕ್ರೇನ್‌ಗಡಿಯಲ್ಲಿ ಕಾದಾಡುತ್ತಿರುವ ಘಟನೆ ಇತ್ತಿಚೆಗೆ ಬೆಳಕಿಗೆ ಬಂದಿದೆ. ಇವರಲ್ಲಿ ಒಬ್ಬರು ತೆಲಂಗಾಣದವರಾಗಿದ್ದು ಉಳಿದ ಮೂವರು ಕರ್ನಾಟಕದರಾಗಿದ್ದಾರೆ.

ಆಂಗ್ಲ ಪತ್ರಿಕೆಯೊಂದರ ಪ್ರಕಾರ, ರಷ್ಯಾದ ಒಂದು ಸಂಸ್ಥೆಯು ಭಾರತೀಯರನ್ನು ಸಹಾಯಕರೆಂದು ನೌಕರಿ ಕೊಡುವ ಅಮಿಷವೊಡ್ಡಿತು. ಅವರಿಗೆ ೨ ಲಕ್ಷ ರೂಪಾಯಿ ಸಂಬಳ ನೀಡಲಾಗುವುದು, ಎಂದು ಭರವಸೆ ನೀಡಿತು. ಆನಂತರ ಡಿಸೆಂಬರ್ ೨೦೨೩ ರಲ್ಲಿ ಅವರನ್ನು ಚನ್ನೈನಿಂದ ರಷ್ಯಾಕ್ಕೆ ಕರೆದೊಯ್ಯಲಾಯಿತು. ಈ ವೇಳೆ ಅವರ ಸಂಪರ್ಕದಲ್ಲಿದ್ದ ಬ್ರೋಕರ್‌ನು ಪ್ರತಿಯೊಬ್ಬರಿಂದ ೩ ಲಕ್ಷ ರೂಪಾಯಿ ಪಡೆದನು. ರಷ್ಯಾಕ್ಕೆ ಹೋದನಂತರ ಅವರನ್ನು ರಷ್ಯಾದ ಖಾಸಗಿ ಸೈನ್ಯವಾದ ‘ವಾಗ್ನರ್ ಗ್ರೂಪ್‘ ನಲ್ಲಿ ಸೇರಿಸಲಾಯಿತು ಮತ್ತು ಯುದ್ಧಭೂಮಿಗೆ ಕರೆದೊಯ್ಯಲಾಯಿತು.

ಈ ನಾಲ್ವರು ಭಾರತೀಯರಲ್ಲಿ ಒಬ್ಬನ ಹೆಸರು ಬೆಳಕಿಗೆ ಬಂದಿದ್ದು ಅವನು ೨೨ ವರ್ಷದ ಮಹಮ್ಮದ್ ಸುಫಿಯಾನ ಆಗಿದ್ದಾನೆ. ರಷ್ಯಾದ ಒಬ್ಬ ಸೈನಿಕನ ಮೊಬೈಲ್ ಫೋನ್‌ನಿಂದ ಅವರ ಕುಟುಂಬಕ್ಕೆ ಸಂದೇಶ ಕಳುಹಿಸಿದನು. ಅವನ ತಮ್ಮನ ಹೇಳಿಕೆ ಪ್ರಕಾರ, ಸುಫಿಯಾನ ಸಂದೇಶದಲ್ಲಿ ‘ನಾನು ಉಕ್ರೇನ್‌ಗಡಿಯಿಂದ ೪೦ ಕಿ.ಮಿ. ದೂರದಲ್ಲಿದ್ದೇನೆ. ನಮಗೆ ಬಲವಂತವಾಗಿ ಯುದ್ಧಕ್ಕೆ ಕಳುಹಿಸಲಾಗುತ್ತಿದೆ. ನಮಗೆ ಮೋಸ ಮಾಡಲಾಗಿದೆ. ನಮಗೆ ಸಹಾಯ ಮಾಡಿ. ನಮಗೆ ಯಾವುದೇ ಪರಿಸ್ಥಿತಿಯಲ್ಲಿಯೂ ಭಾರತಕ್ಕೆ ಮರಳಿ ಬರುವುದಿದೆ!‘ ಎಂದಿದ್ದಾನೆ.