ಕಾಂಗ್ರೆಸ್‌ ಪಕ್ಷದ ಸರಕಾರದ ಅಂದಿನ ಪ್ರಧಾನಮಂತ್ರಿ ಪಿ.ವಿ. ನರಸಿಂಹ ರಾವ್‌ : ಶ್ರೀರಾಮಮಂದಿರ ಹೋರಾಟದ ಪಾತ್ರಧಾರಿಯಾಗಿದ್ದ ಓರ್ವ ಅದೃಶ್ಯ ಸೈನಿಕ !

ಇತ್ತೀಚೆಗೆ ಮಾಜಿ ಪ್ರಧಾನಮಂತ್ರಿ ಹಾಗೂ ಕಾಂಗ್ರೆಸ್ಸಿನ ಮುಖಂಡ ದಿವಂಗತ ಪಿ.ವಿ. ನರಸಿಂಹ ರಾವ್‌ ಇವರಿಗೆ ‘ಭಾರತ ರತ್ನ’ ಪ್ರಶಸ್ತಿಯನ್ನು ಘೋಷಿಸಲಾಯಿತು. ಪಿ.ವಿ. ನರಸಿಂಹ ರಾವ್‌ ಇವರು ಶ್ರೀರಾಮಮಂದಿರದ ಹೋರಾಟದಲ್ಲಿ ವಿಭಿನ್ನ ಪಾತ್ರವನ್ನು ವಹಿಸಿದ್ದರು. ಅದಕ್ಕೆ ಸಂಬಂಧಿಸಿದ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಪಿ.ವಿ. ನರಸಿಂಹ ರಾವ್‌

೬ ಡಿಸೆಂಬರ್‌ ೧೯೯೨ ಇದನ್ನು ಜಗತ್ತಿನ ಇತಿಹಾಸದಲ್ಲಿ ಅಹಿಂಸಾತ್ಮಕ ಮತ್ತು ರಕ್ತರಹಿತ ಕ್ರಾಂತಿಯೆಂದು ಪರಿಗಣಿಸಲಾಗಿದೆ. ಶತಶತಮಾನಗಳ ಗುಲಾಮಗಿರಿಯ ಮೇಲೆ ಪ್ರಹಾರ ಮಾಡಿದ ರಾಮಭಕ್ತ ಕಾರಸೇವಕರ ಆ ಶೌರ್ಯವನ್ನು ನಿರಾಕರಿಸಲು ಸಾಧ್ಯವೇ ಇಲ್ಲ; ಆದರೆ ಆ ಕ್ರಾಂತಿ ರಕ್ತರಹಿತ ಆಗಲು ಒಬ್ಬ ರಾಮಭಕ್ತನು ತೆರೆಮರೆಯಲ್ಲಿ ಕಾರ್ಯವನ್ನು ಮಾಡುತ್ತಿದ್ದನು. ಆ ರಾಮಭಕ್ತನೇ ಪಿ.ವಿ. ನರಸಿಂಹ ರಾವ್‌ ! ಅವರು ಜವಾಹರಲಾಲ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರ ಹೆಸರಿನಿಂದ ಗುರುತಿಸಲ್ಪಡುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಪ್ರಧಾನಮಂತ್ರಿಯಾಗಿದ್ದರು. ಹಾಗಾಗಿ ‘ಸೆಕ್ಯುಲರ್’ (ಜಾತ್ಯತೀತ) ಆಗಿ ತಮ್ಮ ಪ್ರಧಾನಮಂತ್ರಿ ಹುದ್ದೆಯ ಪಟ್ಟಭದ್ರ ಹಿತಾಸಕ್ತಿಯಿಂದ ಅವರು ಡಿಸೆಂಬರ ೬ ರಂದು ಅಯೋಧ್ಯೆಯಲ್ಲಿ ಕಾರಸೇವೆ ಆಗಲೇಬಾರದು’, ಎಂದು ‘ಸಮಾಜವಾದಿ ಪಕ್ಷ’ದ ಮುಲಾಯಮಸಿಂಹ ಯಾದವ ಹಾಗೂ ‘ಜನಮೋರ್ಚಾ’ ಪಕ್ಷದ ಮುಖಂಡ ವಿಶ್ವನಾಥ ಪ್ರತಾಪ ಸಿಂಹ ಇವರಂತೆಯೇ ಯೋಜನೆಯನ್ನು ಮಾಡಬಹುದಿತ್ತು. ಇಷ್ಟು ದೊಡ್ಡ ಪ್ರಮಾಣದಲ್ಲಿ ರಾಮಭಕ್ತರು ಸೇರಿದಾಗ ಏನಾಗಬಹುದು, ಎಂಬುದರ ಕಲ್ಪನೆ ನರಸಿಂಹ ರಾವ್‌ ಇವರಿಗಿತ್ತು. ಗೂಢಚರ ವಿಭಾಗದವರೂ ಅವರಿಗೆ ಮುನ್ಸೂಚನೆಯನ್ನು ನೀಡಿದ್ದರು.

೧. ಗೂಢಚರರಿಂದ ಸೂಚನೆ ಸಿಕ್ಕಿದ್ದರೂ, ಬಾಬರೀ ಕಟ್ಟಡ ಸಂಪೂರ್ಣ ನೆಲಸಮವಾಗುವವರೆಗೆ ನರಸಿಂಹ ರಾವ್‌ ಇವರು ಶ್ರೀವಿಷ್ಣುವಿಗೆ ಅಭಿಷೇಕ ಮಾಡುವುದು

ಡಿಸೆಂಬರ್‌ ೬ ರ ಎಲ್ಲ ಶ್ರೇಯಸ್ಸನ್ನು ಅಂದಿನ ಭಾಜಪದ ಮುಖ್ಯಮಂತ್ರಿ ಕಲ್ಯಾಣ ಸಿಂಹರಿಗೆ ನೀಡಲಾಗುತ್ತದೆ. ಆದರೂ ಡಿಸೆಂಬರ್‌ ೫ ಕ್ಕಿಂತ ಮೊದಲೇ ಕಲ್ಯಾಣ ಸಿಂಹ ಇವರ ಸರಕಾರ ವನ್ನು ವಜಾಗೊಳಿಸಬಹುದಾಗಿತ್ತು. ರಾಷ್ಟ್ರಪತಿ ಆಡಳಿತವನ್ನು ತಂದು ಕಾಂಗ್ರೆಸ್ಸಿನ ದಮನತಂತ್ರ ನಡೆಸಲು ಸಾಧ್ಯವಿತ್ತು; ಆದರೆ ನರಸಿಂಹ ರಾವ್‌ ಇವರಿಗೆ ‘ಹಳೆಯದನ್ನು ಒಡೆಯದೆ ಹೊಸತದರ ಬುನಾದಿ ಕಟ್ಟಲು ಸಾಧ್ಯವಿಲ್ಲ’, ಎಂಬುದು ತಿಳಿದಿತ್ತು. ನರಸಿಂಹ ರಾವ್‌ ಇವರ ರಹಸ್ಯ ನಿಯೋಜನೆಗನುಸಾರವೇ ಮೊದಲು ಕಾರಸೇವಕರು ಗುಲಾಮಗಿರಿಯ ಕಟ್ಟಡದ ಕಡೆಗೆ ಧಾವಿಸಿದರು, ಆಗ ಅಲ್ಲಿದ್ದ ಪೊಲೀಸರು ಅಸಹಾಯಕತೆ ತೋರಿಸಿದರು. ಇದರಿಂದ ಮುಂದೆ ನೂರಾರು ಜನರು ಆ ಗುಲಾಮಗಿರಿಯ ಪ್ರತೀಕದ ಕಡೆಗೆ ಧಾವಿಸಿದರು. ಇದೆಲ್ಲ ನಡೆಯುವಾಗ ನರಸಿಂಹ ರಾವ್‌ ಇವರ ‘ಹಾಟ್‌ಲೈನ್‌’ನ ದೂರವಾಣಿ ದಿನವಿಡೀ ‘ರಿಂಗ್’ ಆಗುತ್ತಿತ್ತು. ಮೊದಲ ಕಟ್ಟಡ ಬೀಳಿಸಿದ ಸೂಚನೆ ಗೂಢಚರರಿಂದ ಬಂದಾಗ ನರಸಿಂಹ ರಾವ್‌ ವಿರಾಟಪುರುಷನನ್ನು ವರ್ಣಿಸುವ ‘ಪುರುಷಸೂಕ್ತ’ ವನ್ನು ಓದುತ್ತಾ ಶ್ರೀವಿಷ್ಣುವಿನ ಅಭಿಷೇಕ ಮಾಡಲು ಕುಳಿತರು; ಏಕೆಂದರೆ ‘ಹಾಟ್‌ಲೈನ್’ ಎತ್ತಿದರೆ, ಆಡಳಿತ ಸಕ್ರಿಯವಾಗುತ್ತಿತ್ತು. ಸೂರ್ಯಾಸ್ತದ ಸಮಯವಾಗಿತ್ತು. ಗೂಢಚರ ವಿಭಾಗದಿಂದ ‘೩ ನೇ ಗುಮ್ಮಟವೂ ನೆಲಸಮವಾಯಿತು’ ಎಂಬ ಸಂದೇಶ ಬಂದಿತು

೨. ಕಲ್ಯಾಣಸಿಂಹ ಇವರ ರಾಜೀನಾಮೆ !

ಹೀಗೆಲ್ಲ ಆಗಿದೆ ಎಂದು ತಿಳಿದ ನಂತರ ಅವರು ಆಸನದಿಂದ ಎದ್ದರು. ‘ಹಾಟ್‌ಲೈನ್‌’ನಲ್ಲಿ ಅಂದಿನ ಗೃಹಸಚಿವ ಹಾಗೂ ಕಾಂಗ್ರೆಸ್ಸಿನ ನೇತಾರ ಶಂಕರರಾವ್‌ ಚವ್ಹಾಣ ಇವರು ಕ್ರಮ ತೆಗೆದು ಕೊಳ್ಳಲು ಸಿದ್ಧರಾಗಿದ್ದರು. ಅವರನ್ನು ‘ಹಾಟ್‌ಲೈನ್‌’ನಲ್ಲಿ ನಿಲ್ಲಿಸಿ ನರಸಿಂಹ ರಾವ್‌ ಇವರು ಕಲ್ಯಾಣಸಿಂಹರನ್ನು ಸಂಪರ್ಕಿಸಿ, ”ನೀವು ರಾಜೀನಾಮೆ ನೀಡಿ. ಇಲ್ಲದಿದ್ದರೆ ಸರಕಾರವನ್ನು ವಜಾಗೊಳಿಸಬೇಕಾಗುವುದು’’ ಎಂದರು. ಅನಂತರ ಅವರು ಶಂಕರರಾವ್‌ ಚವ್ಹಾಣರಿಗೆ, ”ಆಗುವುದು ಆಗಿಹೋಯಿತು. ಗೃಹಸಚಿವರೆಂದು ಶಾಂತಿ ಸ್ಥಾಪಿಸಲು ಪ್ರಯತ್ನಿಸಿ’’ ಎಂದರು. ಈ ರೀತಿ ಅವರು ಶ್ರೀರಾಮಮಂದಿರ ನಿರ್ಮಾಣದಲ್ಲಿನ ಅಡಚಣೆಯನ್ನು ದೂರಗೊಳಿಸಿದ್ದರು. (ಆಧಾರ : ವಿವಿಧ ಜಾಲತಾಣಗಳು)

ಕಾಂಗ್ರೆಸ್ಸಿನವರ ಹಿಂದೂದ್ವೇಷ !

ನಿಜ ಹೇಳುವುದಾದರೆ ನರಸಿಂಹ ರಾವ್‌ ಪ್ರಧಾನಮಂತ್ರಿಯಾಗಿರುವಾಗ ಕಾಂಗ್ರೆಸ್ಸಿನ ಜಾತ್ಯತೀತತೆಯ ಭಾಗವೆಂದು ‘ಪ್ರಾರ್ಥನಾಸ್ಥಳ ಕಾನೂನು’ (ಪ್ಲೇಸಸ್‌ ಆಫ್‌ ವರ್ಶಿಫ್‌ ಏಕ್ಟ್‌) ಮಾಡಲಾಗಿತ್ತು. ಹೀಗಿದ್ದರೂ ನರಸಿಂಹ ರಾವ್‌ ಇವರು ಶ್ರೀರಾಮಮಂದಿರದ ಪ್ರಕರಣದಲ್ಲಿ ನಿಭಾಯಿಸಿದ ಪರೋಕ್ಷ ನಿಲುವಿನಿಂದ ಕಾಂಗ್ರೆಸ್‌ನವರು ಅವರಿಗೆ ಮುಂದೆ ಯಾವುದೇ ಮಾನ ಸನ್ಮಾನವನ್ನು ಕೊಡಲಿಲ್ಲ. ನರಸಿಂಹ ರಾವ್‌ ಇವರ ನಿಧನದ ನಂತರ ಕಾಂಗ್ರೆಸ್‌ ಮುಖ್ಯಾಲಯದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಶ್ರದ್ಧಾಂಜಲಿ ಅರ್ಪಿಸಲು ಅನುಮತಿ ಇರಲಿಲ್ಲ. ಇಷ್ಟು ಮಾತ್ರವಲ್ಲ, ಕುಟುಂಬದವರ ಇಚ್ಛೆಗನುಸಾರ ರಾವ್‌ ಇವರ ಮೃತದೇಹವನ್ನು ಸಾಗಿಸುತ್ತಿದ್ದ ಸೈನಿಕ ವಾಹನವನ್ನು ಕಾಂಗ್ರೆಸ್ಸಿನ ಸೋನಿಯಾ ಗಾಂಧಿಯ ಮನೆಯ ಪಕ್ಕದಲ್ಲಿದ್ದ ಕಾಂಗ್ರೆಸ್ಸಿನ ಮುಖ್ಯಾಲಯದ ಸಮೀಪ ನಿಲ್ಲಿಸಲಾಯಿತು. ಆಗ ಆ ವಾಹನವನ್ನು ಒಳಗೆ ಬರಲು ಬಿಡದೆ ಮುಖ್ಯ ಪ್ರವೇಶದ್ವಾರವನ್ನು ಮುಚ್ಚಲಾಯಿತು. ರಾವ್‌ ಇವರಿಗೆ ಅಂತಿಮ ವಿದಾಯ ಹೇಳಲು ಸೋನಿಯಾ ಗಾಂಧಿ ಸಹಿತ ಇತರ ಮುಖಂಡರು ಹೊರಗೆ ಬಂದರು; ಆದರೆ ಮುಖ್ಯಾಲಯದ ಪ್ರವೇಶದ್ವಾರವನ್ನು ಕೊನೆಗೂ ತೆರೆಯಲೇ ಇಲ್ಲ. ಇದರಿಂದಲೇ ಕಾಂಗ್ರೆಸ್ಸಿನವರ ನಿಜವಾದ ಹಿಂದೂದ್ವೇಷಿ ಸ್ವರೂಪ ಬಯಲಾಗುತ್ತದೆ !

(ಆಧಾರ : ವಿವಿಧ ಜಾಲತಾಣಗಳು)