‘ಮನುವಿನ ಪುರುಷರ ಮೇಲಿನ ಆಕ್ಷೇಪಗಳು ಮತ್ತು ಸ್ತ್ರೀಯರ ಬಗ್ಗೆ ಪೂಜ್ಯ ಬುದ್ಧಿ ಹೀಗೆ ಎರಡು ಉಪಾಂಶಗಳಲ್ಲಿ ಈ ಭಾಗವನ್ನು ಮಂಡಿಸಲಾಗಿದೆ. ಮನುಸ್ಮೃತಿಯಲ್ಲಿ ಜನರನ್ನು ಉಲ್ಲೇಖಿಸಿ ಮನು ಹೇಳುತ್ತಾನೆ, ‘ಕುಟುಂಬದಲ್ಲಿ ಕೆಲಸಗಳ, ಅಂದರೆ ಅಧಿಕಾರಗಳನ್ನು ಸ್ತ್ರೀ-ಪುರುಷರಲ್ಲಿ ವಿಭಜಿಸಲಾಗಿದೆ. ಕುಟುಂಬದಲ್ಲಿ ಮುಖ್ಯವಾದ ವಿಷಯವೆಂದರೆ, ಹಣ ಮತ್ತು ಜಮಾ-ಖರ್ಚು. ಅದನ್ನು ಸ್ತ್ರೀಯರಿಗೆ ಒಪ್ಪಿಸಬೇಕು ಮತ್ತು ಖರ್ಚಿನ ಅಧಿಕಾರವೂ ಅವಳ ಬಳಿಯೇ ಇರಬೇಕು’, ಎಂದು ಸ್ಪಷ್ಟವಾಗಿ ಹೇಳಲಾಗಿದೆ.
‘ಅರ್ಥಸ್ಯ ಸಙ್ಗ್ರಹೇ ಚೈನಾಂ ವ್ಯಯೇ ಚೈವ ನಿಯೋಜಯೇತ್ |’
(ಮನುಸ್ಮೃತಿ, ಅಧ್ಯಾಯ ೯, ಶ್ಲೋಕ ೧೧) ಅಂದರೆ (‘ಪತಿಯು ತನ್ನ ಪತ್ನಿಯನ್ನು) ಧನದ ಸಂಗ್ರಹ, ಹಾಗೆಯೇ ವ್ಯಯ (ಖರ್ಚು)ದ ಕಾರ್ಯಗಳಲ್ಲಿ ಅವಳನ್ನು ಸೇರಿಸಿಕೊಳ್ಳಬೇಕು.’
ಮನುವು ಸ್ತ್ರೀಯರ ಬಗ್ಗೆ ತೆಗೆದ ಉದ್ಗಾರಗಳ ಬಗ್ಗೆ ಅಪರಿಪಕ್ವ ಬುದ್ಧಿಯ ಜನರು (ತಿಳುವಳಿಕೆ ಇಲ್ಲದ ಜನರು) ಹೇಳುತ್ತಾರೆ, ಸಂತತಿಯ ಹಿತಕ್ಕಾಗಿಯೇ ಕಠೋರತನದಿಂದ ಸ್ತ್ರೀ ಸ್ವಭಾವದಲ್ಲಿನ ಸತ್ಯವನ್ನು ಅವನು ತೋರಿಸಿದ್ದಾನೆ. ಇದೊಂದು ವಿವಾದಾತ್ಮಕ ಹೇಳಿಕೆಯಾಗಿದೆ, ಎಂದು ಅನಿಸುತ್ತದೆ. ಇದೇ ವಿಭಜನೆಯಲ್ಲಿ ಪುರುಷನು ‘ಸ್ತ್ರೀಯ ರಕ್ಷಕನು’ ಮತ್ತು ಸ್ತ್ರೀಯು ‘ಸಂಸ್ಕೃತಿಯ ರಕ್ಷಕಳು’, ಎಂಬ ಒಂದು ಉಪಾಂಶವು ಈ ಅಧ್ಯಾಯದಲ್ಲಿ ಬರುತ್ತದೆ. ಸ್ತ್ರೀಯ ರಕ್ಷಣೆಯು ಪುರುಷನ ಮುಖ್ಯ ಕರ್ತವ್ಯವಾಗಿದೆ ! ‘ಇಂತಹ ಸಮಯದಲ್ಲಿ ಬ್ರಾಹ್ಮಣರೂ ಕೈಯಲ್ಲಿ ಶಸ್ತ್ರವನ್ನು ಹಿಡಿದು ಹೋರಾಡಿದರೂ ನಡೆದೀತು; ಆದರೆ ಯಾವುದೇ ಪರಿಸ್ಥಿತಿಯಲ್ಲಿ ಸ್ತ್ರೀಯನ್ನು ರಕ್ಷಿಸಬೇಕು’, ಎಂದು ಮನು ಹೇಳಿದ್ದಾನೆ; ಆದರೆ ಮನು ‘ಅಸ್ವತನ್ತ್ರಾಃ ಸ್ತ್ರೀಯಃ ಕಾರ್ಯಾಃ |’ (ಮನುಸ್ಮೃತಿ, ಅಧ್ಯಾಯ ೯, ಶ್ಲೋಕ ೨) ಅಂದರೆ ‘ಸ್ತ್ರೀಯರಿಗೆ ಸ್ವಾತಂತ್ರ ಕೊಡಬಾರದು/ ಸ್ತ್ರೀಯರನ್ನು ಯಾರಾದ ರೊಬ್ಬರ ನಿಯಂತ್ರಣದಲ್ಲಿಡಬೇಕು, ತಮ್ಮಿಚ್ಛೆಯಂತೆ ವರ್ತಿಸಲು ಬಿಡಬಾರದು’, ಎನ್ನುತ್ತಾನೆ. ಆಗ ಮಾತ್ರ ಮನುವಿನ ವಿಚಾರವು ತಿಳಿಯತೊಡಗುತ್ತದೆ ಮತ್ತು ಮನುವಿನ ಹೇಳಿಕೆಯು ಹೇಗೆ ಸರಿಯಿದೆ, ಎಂಬುದನ್ನು ವಿಚಾರವಂತರು ತೋರಿಸಿಕೊಡುತ್ತಾರೆ.
ಆದರೆ ‘ಅವಳ ರಕ್ಷಣೆಯ ಸಂಪೂರ್ಣ ಭಾರವನ್ನು ನಾವು ತೆಗೆದು ಕೊಳ್ಳುತ್ತೇವೆ. ಅವಳಿಗೆ ನಮ್ಮ ಇಚ್ಛೆಯಂತೆ ವರ್ತಿಸಲೇ ಬೇಕಾಗುತ್ತದೆ. ಅವಳು ಹೇಗಾದರೂ ವರ್ತಿಸಲಿ ಮತ್ತು ನಾವು ಮಾತ್ರ ಅವಳ ರಕ್ಷಣೆಯನ್ನು ಮಾಡಬೇಕು, ಇದು ಯೋಗ್ಯವಲ್ಲ. ಆ ವ್ಯಕ್ತಿಯ ರಕ್ಷಣೆಗಾಗಿ ಆ ವ್ಯಕ್ತಿಯ ಮೇಲೆ ಕೆಲವು ನಿರ್ಬಂಧಗಳನ್ನು ಹೇರುವುದು, ಇದೂ ಅನಿವಾರ್ಯವಾಗಿರುತ್ತದೆ ಮತ್ತು ಇದನ್ನೇ ಮನು ಹೇಳಿದ್ದಾನೆ’, ಎಂದು ಅಪರಿಪಕ್ವ ಬುದ್ಧಿಯ ಜನರು (ತಿಳುವಳಿಕೆ ಇಲ್ಲದ ಜನರು) ಹೇಳುತ್ತಾರೆ. ಒಟ್ಟಿನಲ್ಲಿ ಸ್ತ್ರೀ-ಪುರುಷರ ಪರಸ್ಪರರಲ್ಲಿನ ಪ್ರೇಮ, ಅವರ ಸ್ವಭಾವದಲ್ಲಿನ ವ್ಯತ್ಯಾಸ ಮತ್ತು ಅವೆಲ್ಲವುಗಳ ಸಂಸ್ಕೃತಿ ಮತ್ತು ಧರ್ಮಶಾಸ್ತ್ರವು ಮಾಡಿದ ವಿಚಾರ ಇಂತಹ ವ್ಯಾಪ್ತಿಯನ್ನು ಅಪರಿಪಕ್ವ ಬುದ್ಧಿಯ ಜನರು (ತಿಳುವಳಿಕೆ ಇಲ್ಲದ ಜನರು) ವಿಸ್ತರಿಸುತ್ತ ಹೋಗುತ್ತಾರೆ. ‘ವಿವಾಹಶಾಸ್ತ್ರ’ದಲ್ಲಿ ಇಂತಹ ಎಲ್ಲ ಉಪವಿಷಯಗಳನ್ನು ಸಮಾವೇಶಗೊಳಿಸಿ ಸ್ತ್ರೀ-ಪುರುಷ, ಸಮಾಜ ಮತ್ತು ಸಂಸ್ಕೃತಿ ಇವುಗಳ ಸಂಪೂರ್ಣ ಚಿತ್ರಣವು ನಮಗೆ ಕಾಣಿಸುವಂತೆ ವ್ಯವಸ್ಥೆ ಮಾಡಲಾಗುತ್ತದೆ.’
(ಆಧಾರ : ತ್ರೈಮಾಸಿಕ ‘ಪ್ರಜ್ಞಾಲೋಕ’, ಅಕ್ಟೋಬರ್‌ನಿಂದ ಡಿಸೆಂಬರ್ ೨೦೨೨)