ಪಾಶ್ಚಿಮಾತ್ಯ ದೇಶಗಳು ಭಾರತದ ಬದಲು ಪಾಕಿಸ್ತಾನಕ್ಕೆ ದೀರ್ಘಕಾಲದ ವರೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ ! – ವಿದೇಶಾಂಗ ಸಚಿವ ಡಾ. ಜೈ ಶಂಕರ

ವಿದೇಶಾಂಗ ಸಚಿವ ಡಾ. ಜೈ ಶಂಕರ ಇವರಿಂದ ಛೀಮಾರಿ !

ಮ್ಯೂನಿಚ (ಜರ್ಮನಿ) – ಹಲವು ಪಾಶ್ಚಿಮಾತ್ಯ ದೇಶಗಳು ಇಲ್ಲಿಯವರೆಗೆ ಭಾರತದ ಬದಲಿಗೆ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ಆದ್ಯತೆ ನೀಡಿವೆ; ಆದರೆ ಕಳೆದ 10 ರಿಂದ 15 ವರ್ಷಗಳಲ್ಲಿ, ಅಮೇರಿಕಾದೊಂದಿಗಿನ ಸಂಬಂಧಗಳು ಬದಲಾವಣೆಯಾಗಿದೆ. ಹೊಸ ಶಸ್ತ್ರಾಸ್ತ್ರ ಪೂರೈಕೆದಾರರ ರೂಪದಲ್ಲಿ ಅಮೇರಿಕಾದೊಂದಿಗೆ ರಷ್ಯಾ, ಫ್ರಾನ್ಸ ಮತ್ತು ಇಸ್ರೇಲ ಈ ರೀತಿ ವೈವಿಧ್ಯತೆ ನಿರ್ಮಾಣವಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಡಾ. ಜಯಶಂಕರ ಇಲ್ಲಿ ಒಂದು ಸಂದರ್ಶನದಲ್ಲಿ ಹೇಳಿದರು. ಅವರು ಇಲ್ಲಿನ ಭದ್ರತಾ ಮಂಡಳಿಯಲ್ಲಿ ಭಾಗವಹಿಸಲು ಬಂದಿದ್ದರು.

(ಸೌಜನ್ಯ – Hindusthan Times)

ಜಯಶಂಕರ ಮಾತನಾಡುತ್ತಾ,

1. ಜಗತ್ತು ಒಂದು ಆರ್ಥಿಕ ಮಾದರಿಯನ್ನು ಸಿದ್ಧಪಡಿಸಿದೆ. ಅದು ಅನ್ಯಾಯಕಾರಕವಾಗಿದೆ. ಜಾಗತೀಕರಣದ ಹೆಸರಿನಡಿಯಲ್ಲಿ ಹಲವು ದೇಶಗಳ ಅರ್ಥವ್ಯವಸ್ಥೆ ಕುಸಿದಿದೆ. ಅನೇಕ ದೇಶಗಳು ಮೂಲಭೂತ ವಿಷಯಗಳಿಗಾಗಿಯೂ ಇತರರನ್ನು ಅವಲಂಬಿಸಿವೆ.

2. ಜಾಗತಿಕ ವ್ಯವಸ್ಥೆಯು ಸಧ್ಯದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಕರೋನಾ ಸಾಂಕ್ರಾಮಿಕ, ಉಕ್ರೇನ್‌ನಲ್ಲಿ ಯುದ್ಧ, ಗಾಜಾದಲ್ಲಿ ನಡೆದಿರುವ ಯುದ್ಧ, ಅಫ್ಘಾನಿಸ್ತಾನದಿಂದ ನ್ಯಾಟೋ ಮರಳಿದ್ದು ಮತ್ತು ಬದಲಾಗುತ್ತಿರುವ ಹವಾಮಾನದಂತಹ ಘಟನೆಗಳು ಸಂಭವಿಸುತ್ತಿವೆ. ಇದೆಲ್ಲವೂ ನಮಗೆ ಸವಾಲಾಗಿವೆ. ಆದರೆ ಇದು ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಹೆಚ್ಚು ಬಲಪಡಿಸಲು ಅಲ್ಲ, ಬದಲಾಗಿ ಈ ವ್ಯವಸ್ಥೆಯನ್ನು ಬದಲಾಯಿಸುವ ಸವಾಲು ನಮ್ಮೆದುರಿಗೆ ಇದೆ. (ಈಗಿನ ವ್ಯವಸ್ಥೆಯೇ ಉತ್ತಮವೆಂದು ಪರಿಗಣಿಸಿ ಅದನ್ನು ಬದಲಾಯಿಸುವ ವಿಚಾರ ಸಾಧಾರಣವಾಗಿ ಆಗುವುದಿಲ್ಲ. ಭಾರತವು ಜಾಗತಿಕ ಮಟ್ಟದಲ್ಲಿ ಈ ವ್ಯವಸ್ಥೆಯಲ್ಲಿ ಬದಲಾವಣೆ ತರುವಲ್ಲಿ ಮುಂದಾಳತ್ವ ವಹಿಸುತ್ತಿದೆ. ಭಾರತ ಬಲಿಷ್ಠವಾಗುತ್ತಿರುವುದರ ದ್ಯೋತಕವಾಗಿದೆ. ಆದರೆ ಅದೇ ಸಮಯದಲ್ಲಿ, ಶತ್ರು ರಾಷ್ಟ್ರಗಳೊಂದಿಗೆ ಭಾರತದ ಉತ್ತಮ ವ್ಯಾಪಾರ ಸಂಬಂಧಗಳು ಇರಲಿ ಅಥವಾ ‘ಗ್ಲೋಬಲ್ ಸೌತ್’ ಅನ್ನು ಬಲಪಡಿಸುವ ಭಾರತದ ಪ್ರಯತ್ನ ಇವೆಲ್ಲವೂ ಉಲ್ಲೇಖಾರ್ಹವಾಗಿವೆ. ಸ್ವಾರ್ಥಲೋಲುಪತೆಯ ಮತ್ತು ಒಬ್ಬರನ್ನೊಬ್ಬರು ತುಳಿಯುವ ಜಗತ್ತಿನಲ್ಲಿ ನಿಃಸ್ವಾರ್ಥತೆ ಮತ್ತು ವ್ಯಾಪಕತೆ ಈ ಹಿಂದೂ ಧರ್ಮದ ಮೂಲ ಗುಣಗಳನ್ನು ಹೊಂದಿರುವ ಭಾರತದ ಈ ಪ್ರಯತ್ನಗಳ ಹಿಂದೆ ಅಡಗಿದೆಯೆನ್ನುವುದನ್ನು ಮರೆಯಬಾರದು! – ಸಂಪಾದಕರು)