ಯೋಗಿ ಸರ್ಕಾರ ಹಾಗೂ ಮೆಟ್ರೊ ಆಡಳಿತದ ಶ್ಲಾಘನೀಯ ನಿರ್ಧಾರ
ಆಗ್ರಾ (ಉತ್ತರ ಪ್ರದೇಶ) – ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ ೨೮ ರಂದು ಮಂಕಮೇಶ್ವರ ಮೆಟ್ರೋ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿನ ಜಾಮಾ ಮಸೀದಿ ಮೆಟ್ರೋ ನಿಲ್ದಾಣದ ಹೆಸರನ್ನು ಬದಲಾಯಿಸಲಾಗಿದೆ. ಈಗ ಅದಕ್ಕೆ ‘ಮಂಕಮೇಶ್ವರ ಮೆಟ್ರೊ ನಿಲ್ದಾಣ’ ಎಂದು ಮರುನಾಮಕರಣ ಮಾಡಲಾಗಿದೆ. ಆಗ್ರಾದ ಜನರು ಯೋಗಿ ಸರ್ಕಾರ ಮತ್ತು ’ಉತ್ತರ ಪ್ರದೇಶ ಮೆಟ್ರೋ ರೈಲು ನಿಗಮ’ (ಯು.ಪಿ.ಎಂ.ಆರ್.ಸಿ.)ದ ಬಳಿ ಈ ಬಗ್ಗೆ ಮನವಿ ಮಾಡಿದ್ದರು. ಇದರಿಂದಾಗಿ ರಾಜ್ಯ ಸರ್ಕಾರವು ಜಾಮಾ ಮಸೀದಿ ಮೆಟ್ರೋ ನಿಲ್ದಾಣದ ಹೆಸರನ್ನು ಬದಲಾಯಿಸಲು ಆದೇಶಿಸಿತ್ತು. ಅನಂತರ, ’ಯು.ಪಿ.ಎಂ.ಆರ್.ಸಿ.’ಯ ಅಧಿಕಾರಿಗಳು ಜಾಮಾ ಮಸೀದಿ ನಿಲ್ದಾಣದಲ್ಲಿ ’ಮಂಕಮೇಶ್ವರ ಮೆಟ್ರೋ ನಿಲ್ದಾಣ’ ಎಂಬ ಫಲಕ ಹಾಕಿದ್ದಾರೆ’ ಎಂದು ’ಉತ್ತರ ಪ್ರದೇಶ ಮೆಟ್ರೋ ರೈಲು ನಿಗಮ’ ದ ಉಪಮಹಾವ್ಯವಸ್ಥಾಪಕರಾದ ಶ್ರೀ. ಪಂಚಾನನ ಮಿಶ್ರಾ ರವರು ತಿಳಿಸಿದ್ದಾರೆ.
ಆಗ್ರಾದಲ್ಲಿನ ರಾವತಪಾಡಾ ಪರಿಸರದಲ್ಲಿನ ಮಂಕಮೇಶ್ವರ ಎಂಬ ಪುರಾತನ ಶಿವನ ದೇವಾಲಯವಿದೆ. ಆ ಜಾಗದಲ್ಲಿ ಹೊಸ ನಿಲ್ದಾಣ ನಿರ್ಮಾಣವಾಗುತ್ತಿರುವುದರಿಂದ ‘ಮಂಕಮೇಶ್ವರ ಮೆಟ್ರೊ ನಿಲ್ದಾಣ’ ಎಂದು ನಾಮಕರಣ ಮಾಡಬೇಕು ಎಂದು ಇಲ್ಲಿನ ಜನರು ಮನವಿ ಮಾಡಿದ್ದರು. ಕಳೆದ ವರ್ಷ ಜುಲೈನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರವರು ಮೆಟ್ರೋ ಯೋಜನೆಯ ಪರಿಶೀಲನೆಗಾಗಿ ಆಗ್ರಾಗೆ ಬಂದಿದ್ದರು. ಅನಂತರ ಅವರು ನಿಲ್ದಾಣದ ಹೆಸರನ್ನು ಬದಲಾಯಿಸುವುದಾಗಿ ಘೋಷಿಸಿದ್ದರು.
Agra’s Jama Masjid Metro Station Renamed to Mankameshwar Metro Stationhttps://t.co/jRs2iV0o5J#JamaMasjid #mankameshwar #YogiAdityanath #adityanath #UttarPradesh
— Republic (@republic) February 20, 2024