ಆಕ್ರೋಶಗೊಂಡ ಪಾಕಿಸ್ತಾನಿಗಳಿಂದ ಭಾರತದ ಮೇಲೆ ಆಪಾದನೆ !
ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನ ಮತ್ತು ತಾಲಿಬಾನ ಆಡಳಿತವಿರುವ ಅಫ್ಘಾನಿಸ್ತಾನ ನಡುವೆ ನಿರಂತರ ಉದ್ವಿಗ್ನ ವಾತಾವರಣವಿದೆ. ಅಫ್ಘಾನಿಸ್ತಾನವು ಪಾಕಿಸ್ತಾನವನ್ನು ‘1971 ರಂತೆ ಪಾಕಿಸ್ತಾನವನ್ನು ವಿಭಜಿಸುವುದಾಗಿ’ ಬೆದರಿಕೆ ಹಾಕಿದೆ. ಇದರಿಂದ ಪಾಕಿಸ್ತಾನಿಗಳು ಆಕ್ರೋಶಗೊಂಡಿದ್ದಾರೆ. ‘ಅಫ್ಘಾನಿಸ್ತಾನದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಮಾಡಿದೆ. ಹಾಗಾಗಿ ಅಲ್ಲಿನ ತಾಲಿಬಾನ ಸರಕಾರ ಭಾರತದೆಡೆಗೆ ವಾಲಿದೆ,’ ಎಂದು ಪಾಕಿಸ್ತಾನದ ಹೇಳಿಕೆಯಾಗಿದೆ. 1971 ರಲ್ಲಿ, ಪಾಕಿಸ್ತಾನದ ಪೂರ್ವ ಭಾಗವು ಪ್ರತ್ಯೇಕವಾಗಿ ಬಾಂಗ್ಲಾದೇಶವಾಗಿತ್ತು.
1. ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಪ್ರಸಾರವಾಗಿದೆ. ಇದರಲ್ಲಿ ತಾಲಿಬಾನ ಆಡಳಿತದ ಉಪ ವಿದೇಶಾಂಗ ಸಚಿವ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕಝಾಯಿ, ‘1971 ರಂತೆ ಪಾಕಿಸ್ತಾನವನ್ನು ವಿಭಜಿಸುತ್ತೇವೆ’, ಎಂದು ಬೆದರಿಕೆ ಹಾಕಿದ್ದಾರೆ. ಕೆಲವು ತಿಂಗಳ ಹಿಂದೆ, ಪಾಕಿಸ್ತಾನವು ಲಕ್ಷಗಟ್ಟಲೆ ಅಫಘಾನಿಸ್ತಾನಿ ನಿರಾಶ್ರಿತರನ್ನು ದೇಶದಿಂದ ಹೊರಗೆ ಅಟ್ಟಲು ಪ್ರಾರಂಭಿಸಿದಾಗ ತಾಲಿಬಾನ ಈ ಬೆದರಿಕೆಯನ್ನು ಹಾಕಿತ್ತು.
2. ಪಾಕಿಸ್ತಾನಿ ಯೂಟ್ಯೂಬರ್ ಸನಾ ಅಮ್ಜದ ಈ ವಿಷಯವನ್ನು ಜನರೊಂದಿಗೆ ಚರ್ಚಿಸಿದ್ದಾರೆ. ಇದರಲ್ಲಿ ಓರ್ವ ಪಾಕಿಸ್ತಾನಿ ವ್ಯಕ್ತಿ ಮಾತನಾಡಿ, ‘ಯುದ್ಧದಲ್ಲಿ ಅಮೇರಿಕವನ್ನು ಬೆಂಬಲಿಸುವ ಮೂಲಕ ಪಾಕಿಸ್ತಾನವು ತಪ್ಪು ಮಾಡಿದೆ. ಆದ್ದರಿಂದಲೇ ತಾಲಿಬಾನಿಗಳು ನಮ್ಮ ಮೇಲೆ ಕೋಪಗೊಂಡಿದ್ದಾರೆ ಎಂದು ಹೇಳಿದ್ದಾರೆ.
3. ಮತ್ತೋರ್ವ ಯುವತಿಯು, ‘ನಾವು ಧರ್ಮ ಮತ್ತು ಪ್ರಾಂತ್ಯಗಳಲ್ಲಿ ವಿಭಜಿಸಲ್ಪಟ್ಟಿದ್ದೇವೆ. ಒಂದಾನೊಂದು ಕಾಲದಲ್ಲಿ ನಾವು ಅಫಘಾನಿ ಜನರಿಗೆ ಆಶ್ರಯ ನೀಡಿದ್ದೆವು ಮತ್ತು ಈಗ ಅವರನ್ನು ಹೊರಗೆ ಅಟ್ಟುತ್ತಿದ್ದೇವೆ. ಪಾಕಿಸ್ತಾನದ ವಿದೇಶಾಂಗ ನೀತಿಗಳ ಅಡಿಯಲ್ಲಿ ತೆಗೆದುಕೊಂಡ ನಿರ್ಧಾರಗಳು ನಮ್ಮ ತಿಳುವಳಿಕೆಯನ್ನು ಮೀರಿವೆ. ಪಾಕಿಸ್ತಾನ ಎಲ್ಲರೊಂದಿಗೂ ಸಂಬಂಧಗಳನ್ನು ಹಾಳು ಮಾಡಿಕೊಂಡಿದೆ. ಅಫ್ಘಾನಿಸ್ತಾನ, ಇರಾನ್ ಮತ್ತು ಭಾರತ ನಡುವಿನ ಸಂಬಂಧ ಹದಗೆಟ್ಟಿದೆ. ಭಾರತದೊಂದಿಗೆ ಸಂಬಂಧ ಉತ್ತಮವಾಗಿದ್ದರೆ ನಮ್ಮ ಪರಿಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
4. ‘ಭಾರತದ ಬೆಂಬಲದಿಂದಾಗಿ ತಾಲಿಬಾನ್‌ಗಳು ಹೀಗೆ ಹೇಳುತ್ತಿದ್ದಾರೆಯೇ?’ ಎಂದು ಯುವತಿಗೆ ಕೇಳಿದಾಗ, ‘ನಾವು ಇನ್ನೊಬ್ಬರ ಭುಜದ ಮೇಲೆ ಬಂದೂಕನ್ನು ಇಡಬಾರದು’, ಎಂದು ಹೇಳಿದ್ದಾಳೆ.
5. ಮತ್ತೊಬ್ಬ ವ್ಯಕ್ತಿಯು, ತಾಲಿಬಾನನೊಂದಿಗೆ ಯುದ್ಧ ನಡೆದರೆ, ಅದಕ್ಕೆ ಹಲವು ಕಾರಣಗಳಿರಬಹುದು; ಆದರೆ ಪಾಕಿಸ್ತಾನಕ್ಕೆ ಅದು ಯಾವತ್ತಿಗೂ ಬೇಡವಾಗಿದೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಪಾಕಿಸ್ತಾನದ ಅರಾಜಕತೆಯನ್ನು ನೋಡಿದರೆ, ಆ ದೇಶವು ಇನ್ನೂ 4 ತುಂಡುಗಳಾಗಿ ಒಡೆಯುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಜಗತ್ತಿನ ಭೂಪಟದಲ್ಲಿ ಪಾಕಿಸ್ತಾನ ಹೆಸರಿನ ದೇಶ ಉಳಿಯುವುದಿಲ್ಲ, ಇದು ಸತ್ಯವಾಗಿದ್ದು, ಇದನ್ನು ಭಾರತದಲ್ಲಿರುವ ಪಾಕಿಸ್ತಾನ ಪ್ರೇಮಿಗಳು ಅರಿತುಕೊಳ್ಳಬೇಕು ! |