ಭಕ್ತಿಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಗುರುದೇವರಿಗೆ ಮಾನಸ ಪ್ರದಕ್ಷಿಣೆ ಹಾಕಲು ಹೇಳಿದಾಗ ಗುರುದೇವರು ಈ ಕೃತಿಯನ್ನು ಮೊದಲೇ ಮಾಡಿಸಿಕೊಂಡ ಅರಿವಾಗಿ ಭಾವಾಶ್ರು ಬರುವುದು : ‘೧೬.೧೨.೨೦೨೧ ರಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಭಕ್ತಿಸತ್ಸಂಗದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರಿಗೆ ಮಾನಸ ಪ್ರದಕ್ಷಿಣೆಗಳನ್ನು ಹಾಕಲು ಹೇಳಿದರು. ಇದನ್ನು ಕೇಳಿದ ನಂತರ ನನಗೆ ತುಂಬಾ ಭಾವಜಾಗೃತಿಯಾಗಿ ನನ್ನ ಕಣ್ಣುಗಳಲ್ಲಿ ಭಾವಾಶ್ರು ಬಂದವು; ಏಕೆಂದರೆ ಭಕ್ತಿಸತ್ಸಂಗದ ೪ ದಿನಗಳ ಮೊದಲು ನಾನು ನಾಮಜಪವನ್ನು ಮಾಡುತ್ತಿರುವಾಗ ಮಾನಸವಾಗಿ ವಿಷ್ಣುಸ್ವರೂಪ ಪರಾತ್ಪರ ಗುರು ಡಾಕ್ಟರ ಆಠವಲೆಯವರ ಚರಣಗಳನ್ನು ತೊಳೆದು ಅವುಗಳ ಮೇಲೆ ಹೂವುಗಳನ್ನು ಅರ್ಪಿಸುತ್ತಿದ್ದೆನು. ಅನಂತರ ಅವರ ಸುತ್ತಲೂ ಪ್ರದಕ್ಷಣೆಯನ್ನು ಹಾಕುತ್ತಿದ್ದೆನು. ಆ ಸಮಯದಲ್ಲಿ ‘ವಿಷ್ಣುಸ್ವರೂಪ ಪ.ಪೂ. ಗುರುದೇವರು ಕ್ಷೀರಸಾಗರದಲ್ಲಿ ಶೇಷನಾಗನ ಮೇಲೆ ಮಲಗಿದ್ದಾರೆ ಮತ್ತು ನಾನು ಅವರಿಗೆ ಪ್ರದಕ್ಷಿಣೆಯನ್ನು ಹಾಕುತ್ತಿದ್ದೇನೆ’, ಎಂಬ ಭಾವವನ್ನಿಟ್ಟು ನಾನು ಪ್ರಯತ್ನಿಸುತ್ತಿದ್ದೆನು. ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಭಕ್ತಿಸತ್ಸಂಗದಲ್ಲಿ ಹೇಳಿದ ಕೃತಿಯನ್ನು ಗುರುದೇವರು ನನ್ನಿಂದ ಮೊದಲೇ ಮಾಡಿಸಿಕೊಂಡರು’, ಎಂದು ಎನಿಸಿ ಭಾವಜಾಗೃತವಾಯಿತು.
‘ಹೇ ಗುರುದೇವಾ, ನಿಮ್ಮ ಕೃಪೆ ಅಪಾರವಾಗಿದೆ. ನಾವು ನಿಮ್ಮನ್ನು ತಿಳಿದು ಕೊಳ್ಳಲು ಕಡಿಮೆ ಬೀಳುತ್ತೇವೆ. ದೇವಾ, ನೀವು ನನಗೆ ಈ ಅನುಭೂತಿಯನ್ನು ನೀಡಿ ಮತ್ತೊಮ್ಮೆ ತಮ್ಮ ಕೃಪೆಯ ಅನುಭೂತಿಯನ್ನು ನೀಡಿದ್ದೀರಿ. ಅದಕ್ಕಾಗಿ ತಮ್ಮ ಕೋಮಲ ಚರಣಗಳಲ್ಲಿ ಶತಕೋಟಿ ಕೃತಜ್ಞತೆಗಳು.’
– ಸೌ. ರಾಧಾ ಮಂಜುನಾಥ (ಆಧ್ಯಾತ್ಮಿಕ ಮಟ್ಟ ಶೇ. ೬೫, ೬೭ ವರ್ಷ), ಮಂಗಳೂರು, ಕರ್ನಾಟಕ. (೧೯.೧೨.೨೦೨೧)