ಸುಟ್ಟಗಾಯಗಳಿಗೆ (Burns) ಹೋಮಿಯೋಪಥಿ ಔಷಧಿಗಳ ಮಾಹಿತಿ

‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ ಉಪಚಾರ !’ (ಲೇಖನಮಾಲೆ ೧೯) !

ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ. ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿದೆ. ಮನೆಯಲ್ಲಿಯೇ ಈ ಚಿಕಿತ್ಸೆ ಯನ್ನು ಹೇಗೆ ಮಾಡಬಹುದು ? ಹೋಮಿಯೋಪಥಿ ಔಷಧಿಗಳನ್ನು ಯಾವ ರೀತಿ ತಯಾರಿಸಬೇಕು ? ಅವುಗಳನ್ನು ಹೇಗೆ ಸಂಗ್ರಹಿಸಬೇಕು ? ಇಂತಹ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇವೆ.

ಸಂಚಿಕೆ ೨೫/೯ ರಿಂದ ನಾವು ಪ್ರತ್ಯಕ್ಷ ರೋಗಗಳಿಗೆ ಸ್ವಯಂಚಿಕಿತ್ಸೆ ಪದ್ಧತಿಯನ್ನು ತಿಳಿದುಕೊಳ್ಳುತ್ತಿದ್ದೇವೆ. ಅದರ ಅಡಿಯಲ್ಲಿ ೨೫/೨೨ ನೇ ಸಂಚಿಕೆಯಲ್ಲಿ ನಾವು ‘ಕೀಟ ಅಥವಾ ಪ್ರಾಣಿಗಳು ಕಚ್ಚಿದಾಗ ತೆಗೆದುಕೊಳ್ಳಬೇಕಾದ ಹೋಮಿಯೋಪಥಿ ಔಷಧಿಗಳ ಮಾಹಿತಿಯನ್ನು ಓದಿದೆವು. ಕಾಯಿಲೆಗಳಿಗೆ ನೇರವಾಗಿ ಸ್ವಯಂಚಿಕಿತ್ಸೆ ಮಾಡುವ ಮೊದಲು ೨೫/೧, ೨೫/೨ ಮತ್ತು ೨೫/೩ ನೇ ‘ಸನಾತನ ಪ್ರಭಾತ ಪತ್ರಿಕೆಯಲ್ಲಿ ಪ್ರಕಾಶಿಸಲಾದ ಲೇಖನಗಳಲ್ಲಿನ ‘ಹೋಮಿಯೋಪತಿ ಸ್ವಯಂಚಿಕಿತ್ಸೆಯ ಬಗ್ಗೆ ಇರುವ ಮಾರ್ಗದರ್ಶನದ ಅಂಶಗಳು ಮತ್ತು ಪ್ರತ್ಯಕ್ಷ ಔಷಧಿಗಳನ್ನು ಹೇಗೆ ಆಯ್ಕೆ ಮಾಡಬೇಕು ?, ಎಂಬುದರ ಮಾಹಿತಿಯನ್ನು ವಾಚಕರು ಈ ಮೊದಲು ಓದಬೇಕೆಂದು ವಿನಂತಿ !

ಶರೀರದ ಯಾವುದಾದರೊಂದು ಅಂಗವು ಬೆಂಕಿ, ಬಿಸಿ ನೀರು ಅಥವಾ ಇತರ ದ್ರವ ಪದಾರ್ಥಗಳು, ಹಬೆ, ತೀವ್ರ ಬಿಸಿಲು ಇವುಗಳಿಂದ ಉಷ್ಣತೆಯ ಸಂಪರ್ಕಕ್ಕೆ ಬಂದ ನಂತರ ಆಗುವ ದುಷ್ಪರಿಣಾಮಕ್ಕೆ ‘ಸುಡುವುದು’, ಎಂದು ಹೇಳುತ್ತಾರೆ. ಆಮ್ಲದಂತಹ ರಾಸಾಯನಿಕಗಳೂ ಶರೀರವನ್ನು ಸುಡಬಹುದು. ಸ್ವಲ್ಪ ಸುಟ್ಟರೆ ನಾವು ಮನೆಯಲ್ಲಿಯೆ ಚಿಕಿತ್ಸೆ ಮಾಡಬಹುದು; ಆದರೆ ಬಹಳ ದೊಡ್ಡ ಪ್ರಮಾಣದಲ್ಲಿ ಸುಟ್ಟುಹೋದರೆ ಅದು ಅಪಾಯಕಾರಿಯಾಗಬಹುದು; ಆದುದರಿಂದ ಅದಕ್ಕಾಗಿ ತಕ್ಷಣ ಆಸ್ಪತ್ರೆಯಲ್ಲಿ ಭರ್ತಿಯಾಗುವುದು ಆವಶ್ಯಕವಾಗಿದೆ. ಸಾಮಾನ್ಯವಾಗಿ ಸುಟ್ಟ ಭಾಗ ಕೆಂಪಾಗುವುದು, ಬಾವು ಬರುವುದು, ನೀರು ತುಂಬಿದ ಗುಳ್ಳೆಗಳೇಳುವುದು, ಇವು ಸುಟ್ಟ ಗಾಯಗಳ ಲಕ್ಷಣಗಳಾಗಿವೆ. ಸುಟ್ಟ ಜಾಗದ ಬಗ್ಗೆ ಸರಿಯಾಗಿ ಗಮನವಿಡದಿದ್ದರೆ ಮತ್ತು ಯೋಗ್ಯ ಚಿಕಿತ್ಸೆ ಸಿಗದಿದ್ದರೆ ಅಲ್ಲಿ ಕೀವು ಆಗಬಹುದು. ಈ ಲಕ್ಷಣಗಳ ಹೊರತು ಬೇರೇನಾದರೂ ವಿಶಿಷ್ಟ ಲಕ್ಷಣಗಳಿದ್ದರೆ, ಆ ಔಷಧಿಯನ್ನು ತೆಗೆದುಕೊಳ್ಳಬೇಕು ಅಥವಾ ಕೊಡಬೇಕು. ವಿಶಿಷ್ಟ ಲಕ್ಷಣಗಳನ್ನು ಆ ಔಷಧಿಗಳ ಹೆಸರುಗಳ ಮುಂದೆ ನೀಡಲಾಗಿದೆ.

೧. ಕ್ಯಾಂಥರಿಸ್ ವೆಸಿಕಾಟೋರಿಯಾ (Cantharis Vesicatoria)

೧ ಅ. ಸುಟ್ಟ ಗಾಯ ಗಳಿಂದಾದ ಗುಳ್ಳೆಗಳಲ್ಲಿ ನೀರು ತುಂಬುವ ಮೊದಲು ಅಥವಾ ನೀರು ತುಂಬಿದ ನಂತರ ಈ ಔಷಧದ ಮೂಲ ಅರ್ಕವನ್ನು ನೀರಿನಲ್ಲಿ ಸೇರಿಸಿ ಅದನ್ನು ಸುಟ್ಟ ಚರ್ಮದ ಮೇಲೆ ಹಚ್ಚಬೇಕು.
೧ ಆ. ಗುಳ್ಳೆಗಳು ಒಡೆದ ನಂತರ ಈ ಔಷಧಿಯನ್ನು ಕುದಿಸಿ ಆರಿಸಿದ ನೀರಿನಲ್ಲಿ ಹಾಕಿ ಅದನ್ನು ಗುಳ್ಳೆಗಳ ಮೇಲೆ ಹಚ್ಚಬೇಕು.

೨. ಆರ್ಟಿಕಾ ಯುರೆನ್ಸ್ (Urtica Urens) : ಸುಟ್ಟ ನಂತರ ಉರಿಉರಿಯಾಗಿ ವೇದನೆಗಳು ಆಗುವುದು

೩. ಕಾಸ್ಟಿಕಮ್ (Causticum)

೩ ಅ. ಒಂದು ಸಲ ಸುಟ್ಟುಕೊಂಡ ನಂತರ ವ್ಯಕ್ತಿಯು ಯಾವಾಗಲೂ ಅನಾರೋಗ್ಯದಿಂದಿರುವುದು
೩ ಆ. ಸುಟ್ಟ ನಂತರ ಚರ್ಮದ ಮೇಲಾಗುವ ವಿವಿಧ ದುಷ್ಪರಿಣಾಮಗಳು

೪. ಹೆಪಾರ ಸಲ್ಫುರಿಸ್ ಕ್ಯಾಲ್ಕರಿಯಾ (Hepar Sulphuris Calcaria) : ಸುಟ್ಟಗಾಯ ಉಲ್ಬಣವಾಗಿ ಅದರಲ್ಲಿ ಕೀವಾಗುವುದು

‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪತಿ’ ಉಪಾಯ !’ ಈ ಮುಂಬರುವ ಗ್ರಂಥದಲ್ಲಿನ ಆಯ್ದ ಭಾಗಗಳನ್ನು ಪ್ರತಿ ವಾರದ ಸಂಚಿಕೆಯಲ್ಲಿ ಲೇಖನಗಳ ಸ್ವರೂಪದಲ್ಲಿ ಪ್ರಕಟಿಸಲಾಗುತ್ತಿದೆ. ಆದರೂ ಸ್ವಉಪಾಯದ ದೃಷ್ಟಿಯಿಂದ ಸಾಧಕರು, ವಾಚಕರು, ರಾಷ್ಟ್ರ-ಧರ್ಮಪ್ರೇಮಿಗಳು, ಹಿತಚಿಂತಕರು, ಅರ್ಪಣೆದಾರರು ಈ ಲೇಖನಗಳನ್ನು ಆಪತ್ಕಾಲದ ದೃಷ್ಟಿಯಿಂದ ಸಂಗ್ರಹಿಸಿ ಇಡಬೇಕು. ಆಪತ್ಕಾಲದಲ್ಲಿ ಡಾಕ್ಟರರು, ವೈದ್ಯರು ದೊರಕದಿದ್ದರೆ, ಅಂತಹ ಸಮಯದಲ್ಲಿ ಈ ಲೇಖನಗಳನ್ನು ಓದಿ ತಮ್ಮ ಮೇಲೆ ಉಪಾಯ ಮಾಡಿಕೊಳ್ಳಬಹುದು.