|
ವಿಯೆನ್ನಾ (ಆಸ್ಟ್ರಿಯಾ) – ಚೀನಾ ಅಮೇರಿಕೆಗೆ ಚೀನಿ ವಿದ್ಯಾರ್ಥಿಗಳನ್ನು ಪೀಡಿಸುವುದನ್ನು ನಿಲ್ಲಿಸುವಂತೆ ಹೇಳಿದೆ. ಇಲ್ಲಿ ಎರಡೂ ದೇಶಗಳ ನಾಯಕರು ಮತ್ತು ಅಧಿಕಾರಿಗಳು ಭೇಟಿಯಾದರು. ಆ ಸಮಯದಲ್ಲಿ, ಚೀನಾದ ಸಾರ್ವಜನಿಕ ಭದ್ರತಾ ಸಚಿವ ವಾಂಗ ಶಿಯೊಹೋಂಗ ಅವರು ಅಮೇರಿಕೆಯ `ಹೋಮಲ್ಯಾಂಡ ಸೆಕ್ಯುರಿಟಿ’ಯ ಸಚಿವ ಅಲೆಜಾಂದ್ರೊ ಮೆಯೊರ್ಕಾಸ ಇವರಿಗೆ ಪುರಾವೆಗಳು ಇದ್ದರೂ ಅಮೇರಿಕಾ ವಿಮಾನ ನಿಲ್ದಾಣದ ಮೇಲೆ ಚೀನಿ ವಿದ್ಯಾರ್ಥಿಗಳ ಕಟ್ಟುನಿಟ್ಟಾದ ಪರಿಶೀಲನೆಗೆ ಒಳಪಡುತ್ತಾರೆ. ಅನೇಕ ಬಾರಿ ಅವರನ್ನು ಚೀನಾಕ್ಕೆ ಮರಳಿ ಕಳುಹಿಸಲಾಗುತ್ತದೆ. ಯಾವುದೇ ಕಾರಣವಿಲ್ಲದಿರುವಾಗಲೂ ಇಷ್ಟು ಕಠಿಣವಾಗಿರುವುದು ಯೋಗ್ಯವಲ್ಲ. ಅವರು ತಮ್ಮ ಮಾತನ್ನು ಮುಂದುವರಿಸಿ, ಅಮೇರಿಕೆಯು ಚೀನಿ ನಾಗರಿಕರು ಮತ್ತು ವಿದ್ಯಾರ್ಥಿಗಳ ವಿರುದ್ಧ ತಾರತಮ್ಯ ಮಾಡದೇ ಅವರನ್ನು ಗೌರವದಿಂದ ಪ್ರವೇಶ ನೀಡಲಾಗುತ್ತದೆ ಎಂದು ಖಚಿತ ಪಡಿಸಬೇಕೆಂದು ಹೇಳಿದ್ದಾರೆ.
ಚೀನಾ ವಿರುದ್ಧ ಅಮೆರಿಕಾದ ಆರೋಪಗಳು !
1. ಅಮೆರಿಕದ ಸುದ್ದಿಪತ್ರಿಕೆ ‘ವಾಲ್ ಸ್ಟ್ರೀಟ್ ಜರ್ನಲ್’ನಲ್ಲಿನ ಲೇಖನದಲ್ಲಿ ಇತ್ತೀಚಿನ ವರ್ಷಗಳಲ್ಲಿ ಚೀನಾದ ನಾಗರಿಕರು ಅಮೇರಿಕಕ್ಕೆ ಪ್ರವಾಸಿಗರೆಂದು ವರ್ಷಾಂತ್ಯದಲ್ಲಿ ಹೋಗುತ್ತಾರೆ; ಆದರೆ ಅಲ್ಲಿ ಸುಮ್ಮನೆ ಗೂಢಚಾರಿಕೆ ನಡೆಸುತ್ತಾರೆ. ವರದಿಗಳ ಪ್ರಕಾರ, ಚೀನಾದ ನಾಗರಿಕರು ಅಮೇರಿಕೆಯ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸುತ್ತಾರೆ ಮತ್ತು ನಂತರ ಚೀನಾಕ್ಕೆ ಕಳುಹಿಸುತ್ತಾರೆ ಎಂದು ಹೇಳಿದೆ.
2. ಅಮೇರಿಕ ಚೀನಾದಿಂದ ಔಷಧಗಳನ್ನು ಆಮದು ಮಾಡಿಕೊಳ್ಳುತ್ತದೆ. ಚೀನಾದಿಂದ ರಫ್ತಾಗುವ ಔಷಧಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ‘ಫೆಂಟನಾಯಿಲ್’ ಎಂಬ ರಾಸಾಯನಿಕ ಇರುತ್ತದೆ. ಈ ಮಾಧ್ಯಮದ ಮೂಲಕ ಅಮೇರಿಕೆಯಲ್ಲಿ ಮಾದಕ ವಸ್ತುಗಳ ವ್ಯಾಪಾರಕ್ಕೆ ಪ್ರೋತ್ಸಾಹ ಸಿಗುತ್ತಿದೆ ಎಂದು ಅಮೇರಿಕಾ ಚೀನಾ ಮೇಲೆ ಆರೋಪಿಸಿದೆ. ಅಮೇರಿಕದಲ್ಲಿ ‘ಫೆಂಟನಾಯಿಲ್’ ಬಳಕೆಯಿಂದ ಪ್ರತಿ ವರ್ಷ 70 ಸಾವಿರಕ್ಕೂ ಹೆಚ್ಚು ಜನರು ಮರಣ ಹೊಂದುತ್ತಿದ್ದಾರೆ.