‘ಇನ್‌ಸ್ಟಾಗ್ರಾಮ್ ಸ್ಟೇಟಸ್’ನಲ್ಲಿ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಚಿತ್ರಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ನಿಹಾಲ್ ವಿರುದ್ಧ ದೂರು ದಾಖಲು !

  • ಸ್ಟೇಟಸ್‌ನಲ್ಲಿ “ಬಾಪ್ ತೊ ಬಾಪ್ ರಹೇಗಾ” ಹಾಡು !

  • ಸಾಂಗ್ಲಿಯಲ್ಲಿ ಘಟನೆ !

ಸಾಂಗ್ಲಿ, ಫೆಬ್ರವರಿ 19 (ಸುದ್ದಿ.) – ಕ್ರೂರ ಕರ್ಮ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ನ ಚಿತ್ರಗಳನ್ನು ‘ಇನ್‌ಸ್ಟಾಗ್ರಾಮ್ ಸ್ಟೇಟಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನಿಹಾಲ್ ಆಸಿಫ್ ಬಾವಾ ವಿರುದ್ಧ ಸಾಂಗ್ಲಿ ನಗರ ಪೊಲೀಸರು ದೂರು ದಾಖಲಿಸಿದ್ದಾರೆ. ಈ ಸಂಬಂಧ ಸಾಂಗ್ಲಿವಾಡಿಯ ಅನಿಕೇತ್‌ ಕುಂಬಾರ್‌ ದೂರು ದಾಖಲಿಸಿದ್ದರು. ಫೆಬ್ರವರಿ 18ರ ಸಂಜೆ 4.30ಕ್ಕೆ ಈ ಸ್ಟೇಟಸ್ ಇಟ್ಟಿರುವುದು ಗಮನಕ್ಕೆ ಬಂದಿದೆ. ಫೆಬ್ರವರಿ 19ರಂದು ನಡೆಯಲಿರುವ ಶಿವಜಯಂತಿ ಹಿನ್ನೆಲೆಯಲ್ಲಿ ಮತಾಂಧ ಮುಸಲ್ಮಾನರು ಇಂತಹ ವಿಡಿಯೋ ಹಾಕುವ ಮೂಲಕ ಹಿಂದೂ-ಮುಸ್ಲಿಂರ ನಡುವೆ ಧಾರ್ಮಿಕ ಬಿರುಕು ಮೂಡಿಸಲು ಯತ್ನಿಸುತ್ತಿರುವುದು ಕಂಡು ಬರುತ್ತಿದೆ.

ನಿಹಾಲ್ ತನ್ನ ಇನ್ಸ್ಟಾಗ್ರಾಮ್ ಖಾತೆ Ubed-pathan786 ನಲ್ಲಿ ಕ್ರೂರ ಕರ್ಮ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ನ ಚಿತ್ರ ಇಟ್ಟು ‘ಬಾಪ ತೊ ಬಾಪ್ ರಹೇಗಾ’ ಎಂದು ಹಾಡುತ್ತಿರುವ ಚಿತ್ರಗಳೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾನೆ. ಒಬ್ಬ ವ್ಯಕ್ತಿಯು ಹಾಡಿಗೆ ನೃತ್ಯ ಮಾಡುತ್ತಿರುವುದು ಕಾಣುತ್ತದೆ.

ಇದನ್ನು ಅರಿತ ಅನಿಕೇತ್‌ ಕುಮಾರ್‌ ತನ್ನ ಸ್ನೇಹಿತ ವೈಭವ್‌ ಕೋಳಿಗೆ ಎಲ್ಲವನ್ನೂ ಹೇಳಿದ್ದಾನೆ. ಆ ವಿಡಿಯೋ ಮೊಬೈಲ್‌ ನಲ್ಲಿ ಕಾಣಿಸುತ್ತಿದೆಯೇ ಎಂದು ನೋಡಲು ಹೇಳಿದರು. ಈ ವೇಳೆ ವೈಭವ್ ತನ್ನ ಸ್ನೇಹಿತರಾದ ರಾಹುಲ್ ಬೋಳಾಜ್, ಪ್ರಥಮೇಶ್ ಮುಳೆ ಮತ್ತು ಅನಿಕೇತ್ ಅಮೃಳೆ ಅವರೊಂದಿಗೆ ಈ ವಿಡಿಯೋವನ್ನು ನೋಡಿದ್ದಾರೆಂದು ತಿಳಿದುಬಂದಿದೆ.

ಸಂಪಾದಕೀಯ ನಿಲುವು

ಶಿವಜಯಂತಿ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಈ ಪ್ರಯತ್ನ ನಡೆಸಿರುವುದು ಸ್ಪಷ್ಟವಾಗಿದೆ. ಅವರನ್ನು ಹದ್ದುಬಸ್ತಿನಲ್ಲಿಡಲು ಕ್ರಮ ಕೈಗೊಳ್ಳದೆ ಈ ರೀತಿಯ ಕೆಲಸಗಳು ನಿಲ್ಲುವುದಿಲ್ಲ !