ಛತ್ತಿಸ್ಗಡ್ ಸರಕಾರ ಮತಾಂತರ ನಿಯಂತ್ರಣ ಮಸೂದೆ ತರುವ ಸಿದ್ಧತೆಯಲ್ಲಿ !

ರಾಯಪುರ (ಛತ್ತೀಸ್‌ಗಢ) – ಛತ್ತೀಸ್‌ಗಢದಲ್ಲಿ ಮತಾಂತರ ನಿಯಂತ್ರಣ ಮಸೂದೆಯನ್ನು ಶೀಘ್ರದಲ್ಲೇ ತರಲಾಗುವುದು. ಮಸೂದೆಯ ಕರಡು ಅಂಗೀಕಾರವಾದರೂ ವಿಧಾನಸಭೆಯಲ್ಲಿ ಮಂಡಿಸುವ ಮುನ್ನ ಕೆಲವು ತಿದ್ದುಪಡಿಗಳನ್ನು ಮಾಡಲಾಗುವುದು.

ಏನಿದೆ ಮಸೂದೆಯಲ್ಲಿ ?

1. ಯಾವ ವ್ಯಕ್ತಿಗೆ ಮತಾಂತರಗೊಳ್ಳಲಿದೆ ಅವನು 60 ದಿನಗಳ ಮೊದಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಅರ್ಜಿಯನ್ನು ಸಲ್ಲಿಸಬೇಕು. ಅದರಲ್ಲಿ ಅವನ ಸಂಪೂರ್ಣ ಮಾಹಿತಿ ಇರುತ್ತದೆ ನಂತರ ಪೊಲೀಸರು ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಾರೆ. ‘ಮತಾಂತರ ಆಗುವುದರ ಹಿಂದಿನ ನಿಜವಾದ ಕಾರಣ ಮತ್ತು ಉದ್ದೇಶವೇನು?’, ಇದರ ಪರಿಶೀಲನೆ ಮಾಡಲಾಗುವುದು.

2. ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರವನ್ನು ಬಲವಂತವಾಗಿ, ಪ್ರಭಾವದಿಂದ, ವಂಚನೆಯಿಂದ, ಮದುವೆ ಅಥವಾ ಸಂಪ್ರದಾಯದಿಂದ ಮಾಡಲಾಗುವುದಿಲ್ಲ. ಒಂದು ವೇಳೆ ಜಿಲ್ಲಾಧಿಕಾರಿಗಳು ಸದರಿ ಅರ್ಜಿಯಲ್ಲಿ ಅನುಮಾನಾಸ್ಪದವಾಗಿ ಏನಾದರೂ ಕಂಡುಬಂದಲ್ಲಿ ಮತಾಂತರವನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುವುದು.

ಸಂಪಾದಕೀಯ ನಿಲುವು

ಬಿಜೆಪಿ ಆಡಳಿತವಿರುವ ಪ್ರತಿಯೊಂದು ರಾಜ್ಯಗಳು ಇಂತಹ ಕಾನೂನನ್ನು ಮಾಡುವುದಕ್ಕಿಂತ ಕೇಂದ್ರ ಸರಕಾರ ಇಡೀ ದೇಶಕ್ಕೆ ಒಂದು ಕಾನೂನನ್ನು ಮಾಡಬೇಕೆಂದು ಹಿಂದುಗಳ ಅಪೇಕ್ಷೆ !