‘ಅಕ್ಬರ್‘ ಸಿಂಹಕ್ಕೆ ‘ಸೀತಾ‘ ಹೆಸರಿನ ಸಿಂಹಿಣಿ ಜೊತೆಗಿಟ್ಟಿದ್ದರಿಂದ ವಿಹಿಂಪ ನಿಂದ ನ್ಯಾಯಾಲಯದಲ್ಲಿ ಅರ್ಜಿ !

ಬಾಂಗಾಳ ರಾಜ್ಯ ಸರಕಾರದ ಅರಣ್ಯ ಇಲಾಖೆಯೇ ಈ ಹೆಸರು ಇಟ್ಟಿದೆ ಎಂದು ಆರೋಪ !

ಕೋಲಕಾತಾ (ಬಂಗಾಳ) – ರಾಜ್ಯದ ಸಿಲಿಗುಡಿಯ ಮೃಗಾಲಯದಲ್ಲಿ ‘ಅಕ್ಬರ್‘ ಹೆಸರಿನ ಸಿಂಹವನ್ನು ‘ಸೀತಾ‘ ಹೆಸರಿನ ಸಿಂಹಿಣಿಯೊಂದಿಗೆ ಇರಿಸಲಾಗಿದೆ. ಇದು ಹಿಂದೂ ಧರ್ಮಕ್ಕೆ ಮಾಡಿದ ಅವಮಾನ ಎಂದು ವಿಶ್ವ ಹಿಂದೂ ಪರಿಷತ್ತಿನ ಬಂಗಾಳ ವಿಭಾಗವು ಕೊಲಕಾತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಈ ಅರ್ಜಿಯ ವಿಚಾರಣೆ ಫೆಬ್ರವರಿ ೨೦ ರಂದು ನಡೆಯಲಿದೆ. ಸಿಂಹದ ಜೋಡಿಯ ಹೆಸರನ್ನು ಬದಲಾಯಿಸಬೇಕು ಎಂದು ಅರ್ಜಿದಾರ ವಿಎಚ್‌ಪಿಯ ಕಾರ್ಯಕರ್ತರು ಮಾಡಿದ್ದಾರೆ. ಈ ಸಿಂಹ ಜೋಡಿಯನ್ನು ಫೆಬ್ರವರಿ ೧೩ ರಂದು ತ್ರಿಪುರಾದ ಸೆಪಾಹಿಜಾಲಾ ಪ್ರಾಣಿ ಸಂಗ್ರಹಾಲಯದಿಂದ ತರಲಾಗಿತ್ತು. ‘ನಾವುಗಳು ಸಿಂಹಗಳ ಹೆಸರನ್ನು ಬದಲಾಯಿಸಿಲ್ಲ. ಈ ಮೊದಲೇ ಕೊಡಲಾಗಿತ್ತು‘, ಎಂದು ಬಂಗಾಳ ಸರಕಾರದ ಅಡಿಯಲ್ಲಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣದಲ್ಲಿ ರಾಜ್ಯದ ಅರಣ್ಯಾಧಿಕಾರಿ ಮತ್ತು ಸಫಾರಿ ಪಾರ್ಕ್ ನಿರ್ದೇಶಕರನ್ನು ಕಕ್ಷಿದಾರರನ್ನಾಗಿ ಮಾಡಲಾಗಿದೆ.

ಸಂಪಾದಕೀಯ ನಿಲುವು

ಸಿನಿಮಾದ ಮೂಲಕ ಲವ್ ಜಿಹಾದ್ ಅನ್ನು ಪ್ರೋತ್ಸಾಹಿಸುವುದು ಚಿಂತಾಜನಕವಾಗಿರುವಾಗ ಈ ಹೇಯರೂಪದ ಷಡ್ಯಂತ್ರ ಬಯಲಿಗೆ ಬರಬೇಕಾಗಿದೆ !