ಸಂಯುಕ್ತ ಅರಬ್ ಅಮಿರಾತದಲ್ಲಿ ಭಾರತೀಯರಿಗೆ ಸಿಗುತ್ತಿದೆ ಹೆಚ್ಚಿನ ಗೌರವ !

ವಿಷಾದ ವ್ಯಕ್ತಪಡಿಸಿದ ಪಾಕಿಸ್ತಾನಿ ನಾಗರಿಕರು

ಅಬು ಧಾಬಿ – ಸಂಯುಕ್ತ ಅರಬ್ ಅಮಿರಾತದಲ್ಲಿ (ಯುಎಇ) ಮತ್ತು ಭಾರತದ ನಡುವಿನ ಸಂಬಂಧಗಳು ಪ್ರಸ್ತುತ ಅತ್ಯುತ್ತಮವಾಗಿವೆ. ಯುಎಇಯಲ್ಲಿ ವಾಸಿಸುವ ಭಾರತೀಯರು ಸಣ್ಣ ಉದ್ಯೋಗಗಳು ಮತ್ತು ದೊಡ್ಡ ಉದ್ಯಮಗಳು ಮತ್ತು ಸಂಸ್ಥೆಗಳ ಸಿಇಒ ಹುದ್ದೆಯಲ್ಲಿದ್ದಾರೆ. ಸಂಯುಕ್ತ ಅರಬ್ ಅಮಿರಾತದಲ್ಲಿ ನೆಲೆಸಿರುವ ಭಾರತೀಯರು ಆ ದೇಶದ ಅಭಿವೃದ್ಧಿಗಾಗಿ ಮಾಡಿರುವ ಕೆಲಸದಿಂದ ಅಲ್ಲಿನ ಭಾರತೀಯರ ಬಗ್ಗೆ ಉತ್ತಮ ಚಿತ್ರಣ ಮೂಡಿಸಿದೆ. ಭಾರತ ಮತ್ತು ಯುಎಇ ನಡುವಿನ ಸಂಬಂಧವನ್ನು ಸುಧಾರಿಸುವ ಹಿಂದಿನ ಪ್ರಮುಖ ಕಾರಣಗಳಲ್ಲಿ ಇದು ಒಂದಾಗಿದೆ. ಇಲ್ಲಿ ವಾಸಿಸುವ ವಿದೇಶಿಯರಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಭಾರತೀಯರ ನಂತರ, ಪಾಕಿಸ್ತಾನಿ ಪ್ರಜೆಗಳು ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ; ಆದರೆ ಅಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳಿಗೆ ಭಾರತೀಯರಂತೆ ಗೌರವ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

(ಸೌಜನ್ಯ – Real entertainment tv)

೧. ಪಾಕಿಸ್ತಾನಿ ‘ಯು ಟ್ಯುಬರ್’ ಸುಹೇಬ್ ಚೌಧರಿ ಅವರು ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ವಾಸಿಸುವ ಪಾಕಿಸ್ತಾನಿ ಪ್ರಜೆಗಳ ಸಂದರ್ಶನ ತೆಗೆದುಕೊಂಡರು. ಈ ಸಂದರ್ಶನದಲ್ಲಿ ಪಾಕಿಸ್ತಾನಿ ಪ್ರಜೆಯೊಬ್ಬರು, ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ಭಾರತೀಯರನ್ನು ಬಹಳ ಗೌರವದಿಂದ ನೋಡುತ್ತಾರೆ ಎಂದು ಹೇಳಿದ್ದಾರೆ. ಅಲ್ಲಿನ ಭಾರತೀಯರಿಗೆ ಪಾಕಿಸ್ತಾನಿಗಳ ಬಗ್ಗೆ ದ್ವೇಷವಿಲ್ಲ ಎಂದು ಹೇಳಿದ್ದಾರೆ.

೨. ನವಾಜ್ ಎಂಬ ಇನ್ನೊಬ್ಬ ಪಾಕಿಸ್ತಾನಿಯು, ಭಾರತೀಯರು ತಮ್ಮ ಶಿಕ್ಷಣ, ಬರವಣಿಗೆ ಮತ್ತು ಇತರ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದರು; ಆದರೆ ಪಾಕಿಸ್ತಾನಿಗಳಿಗೆ ಈ ಗುಣಗಳಿಲ್ಲ.

೩. ಪಾಕಿಸ್ತಾನದ ಕೆಲವು ಭ್ರಷ್ಟರು ದೇಶದ ಹೆಸರನ್ನು ಹಾಳು ಮಾಡಿದ್ದಾರೆ. “ಆದ್ದರಿಂದ ಜನರು ಯುಎಇಯಲ್ಲಿ ಪಾಕಿಸ್ತಾನಿ ಪ್ರಜೆಗಳಿಗೆ ಉದ್ಯೋಗ ನೀಡಲು ಬಯಸುವುದಿಲ್ಲ” ಎಂದು ಒಬ್ಬರು ಹೇಳಿದರು.

೪. ‘ಭಾರತೀಯರು ಉನ್ನತ ಶಿಕ್ಷಣ ಪಡೆದಿದ್ದಾರೆ. ಅವರು ತಮ್ಮ ಜನರಿಗೆ ಸಹಾಯ ಮಾಡುತ್ತಾರೆ. ಅವರ ಸರಕಾರವೂ ಅವರಿಗೆ ಬೆಂಬಲ ನೀಡುತ್ತದೆ’, ಎಂದೂ ಸಹ ಕೆಲವು ಪಾಕಿಸ್ತಾನಿ ನಾಗರಿಕರು ಹೇಳಿದರು.