ಸರಕಾರಿ ಭೂಮಿಯಲ್ಲಿ ಅತಿಕ್ರಮಣ ದರ್ಗಾದ ಹೆಸರು ನೋಂದಾಯಿಸುವುದಕ್ಕಾಗಿ ಅರ್ಜಿ ನಿರಾಕರಣೆ !

ನ್ಯಾಯವಾದಿ ಖುಶ್ ಖಂಡೆಲವಾಲ್ ಇವರ ಹಸ್ತಕ್ಷೇಪದ ನಂತರ ಅಪರ ತಹಸೀಲದಾರರ ನಿರ್ಧಾರ !

ಭಾಯಿಂದರ – ಇಲ್ಲಿಯ ಉತ್ತಾನ ಡೊಂಗರಿಯ ಸರಕಾರಿ ಭೂಮಿಯ ಮೇಲೆ ಬಾಲೇಶ ಪೀರ್ ದರ್ಗಾ ಕಟ್ಟಿ ಅತಿಕ್ರಮಣ ಮಾಡಿದ್ದರು. (ಇಷ್ಟು ನಡೆಯುವವರೆಗೆ ಸರಕಾರ ನಿದ್ರಿಸುತ್ತಿತ್ತೆ ? – ಸಂಪಾದಕರು) ಇದಕ್ಕಾಗಿ ಈ ಭೂಮಿಯಲ್ಲಿನ ಪೊದೆಗಳನ್ನು ನಾಶಗೊಳಿಸಲಾಗಿದೆ. ಈ ಅತಿಕ್ರಮಣ ಕಟ್ಟಡದ ಸುಳ್ಳು ದಾಖಲೆಗಳನ್ನು ತೋರಿಸಿ ದರ್ಗಾದ ಹೆಸರು ಸ್ಥಳದ ೭/೧೩ ಪಹಣಿಯ ಮೇಲೆ ನೊಂದಾಯಿಸಲಾಗುತ್ತಿತ್ತು. ಅದಕ್ಕಾಗಿ ದರ್ಗಾದ ಟ್ರಸ್ಟಿನ ಸಚಿವ ಅಬ್ದುಲ್ ಕಾದಿರಿ ಕುರೇಶಿ ಇವರು ಅರ್ಜಿ ಸಲ್ಲಿಸಿದ್ದರು; ಆದರೆ ‘ಹಿಂದೂ ಟಾಸ್ಕ್ ಫೋರ್ಸ’ನ ಸಂಸ್ಥಾಪಕ ನ್ಯಾಯವಾದಿ ಖುಶ್ ಖಂಡೆಲವಾಲ ಇವರು ಈ ಪ್ರಕರಣದಲ್ಲಿ ಸಮಯಕ್ಕೆ ಸರಿಯಾಗಿ ಹಸ್ತಕ್ಷೇಪ ಮಾಡಿದರು. ಆದ್ದರಿಂದ ಮೇಲ್ದರ್ಜೆಯ ತಹಶೀಲದಾರರು ದರ್ಗಾದ ಹೆಸರು ನೋಂದಾಯಿಸಲು ವಿರೋಧಿಸುತ್ತಾ ಸಂಬಂಧಿತ ಅರ್ಜಿ ನಿರಾಕರಿಸಿದರು.

ಇದರ ಸಂದರ್ಭದಲ್ಲಿ ನ್ಯಾಯವಾದಿ ಖುಶ್ ಖಂಡೆಲವಾಲ ಇವರು, ಬಾಯಿಂದರದ ವಿಭಾಗೀಯ ಅಧಿಕಾರಿ ದೀಪಕ್ ಅಹಿರೇ ಮತ್ತು ತಲಾಠಿ ರಮೇಶ ಫಾಪಾಲೆ ಇವರು ದರ್ಗಾಗೆ ಅನುಮತಿ ನೀಡುವುದಕ್ಕಾಗಿ ಅಕ್ಟೋಬರ್ ೨೦೨೩ ರಲ್ಲಿ ಸುಳ್ಳು ವರದಿ ಮಂಡಿಸಿದ್ದರು. ನಂತರ ಇದರ ವಿರುದ್ಧ ಹಸ್ತಕ್ಷೇಪ ಮಾಡಲಾಯಿತು.

ಸಂಪಾದಕೀಯ ನಿಲುವು

ಸರಕಾರಿ ಭೂಮಿಯಲ್ಲಿನ ಅತಿಕ್ರಮಣ ದರ್ಗಾಗೆ ವಿರೋಧ ವ್ಯಕ್ತಪಡಿಸುವುದರ ಹಿಂದಿನ ಷಡ್ಯಂತ್ರವನ್ನು ಸಮಯ ಇರುವಾಗಲೇ ತಡೆದ ನ್ಯಾಯವಾದಿ ಖುಶ್ ಖಂಡೆಲವಾಲ್ ಇವರ ಅಭಿನಂದನೆ !