ಉಗ್ರರಿಂದ ‘ಎಕ್ಸ್’ ಖಾತೆಯ ಬಳಿಕೆ !

‘ಟೇಕ್ ಟ್ರಾನ್ಸಪರನ್ಸಿ ಪ್ರಾಜೆಕ್ಟ್’ನ (‘ಟಿಟಿಪಿ’ಯ) ವರದಿಯಲ್ಲಿ ದಾವೆ !

ವಾಷಿಂಗ್ಟನ್ (ಅಮೇರಿಕಾ) – ‘ಟೇಕ್ ಟ್ರಾನ್ಸಪರನ್ಸಿ ಪ್ರಾಜೆಕ್ಟ್’ನ (‘ಟಿಟಿಪಿ’ಯ) ವರದಿಯ ಪ್ರಕಾರ ಪ್ರಸಿದ್ಧ ಉದ್ಯಮಿ ಇಲಾನ್ ಮಸ್ಕ್ ಇವರ ‘ಎಕ್ಸ್’ (ಹಿಂದಿನ ಟ್ವಿಟರ್) ಮೂಲಕ ಅಮೇರಿಕಾವು ಉಗ್ರರು ಎಂದು ಘೋಷಿಸಿರುವ ೨ ಉಗ್ರರ ಗುಂಪಿನ ನಾಯಕರ ‘ಎಕ್ಸ್’ ಖಾತೆಗೆ ಪ್ರೇಮಿಯಂ, ಪೇಮೆಂಟ್ ಸೇವೆ ಮತ್ತು ಇತರ ಅನೇಕ ಸರಕಾರಿ ಸೇವೆ ಪೂರೈಸುತ್ತಿದೆ. ಇಂತಹ ೧೨ ಕ್ಕಿಂತಲೂ ಹೆಚ್ಚಿನ ಖಾತೆಗಳ ಗುರುತು ಪತ್ತೆ ಹಚ್ಚಲಾಗಿದೆ. ಈ ಖಾತೆಗಳಿಂದ ‘ಎಕ್ಸ್’ನ ಪ್ರೀಮಿಯಂ ಸೇವೆ ಕಳೆದ ವರ್ಷ ಏಪ್ರಿಲ್ ನಲ್ಲಿ ಪಡೆದಿತ್ತು.

೧. ವರದಿಯಲ್ಲಿ, ಈ ಖಾತೆಯಿಂದ ‘ಎಕ್ಸ್’ ಗೆ ಮಾಸಿಕ ಅಥವಾ ವಾರ್ಷಿಕ ಶುಲ್ಕ ನೀಡುತ್ತದೆ. ಇದರಿಂದ ‘ಎಕ್ಸ್’ ಸಂಬಂಧಿತ ಆರ್ಥಿಕ ವ್ಯವಹಾರ ನಡೆಸಬಹುದು ಇದು ಸ್ಪಷ್ಟವಾಗುತ್ತದೆ. ಹೀಗೆ ಮಾಡುವುದು ಇದು ಅಮೇರಿಕಾದ ನಿಷೇಧದ ಉಲ್ಲಂಘನೆ ಆಗಿದೆ.

೨. ‘ಎಕ್ಸ್’ ನಲ್ಲಿ ಅಮೆರಿಕಾದ ಸರಕಾರವು ರಾಷ್ಟ್ರೀಯ ಸುರಕ್ಷೆಗೆ ಅಪಾಯ ಇದೆ ಎಂದು ಘೋಷಿಸಿರುವ ೨೮ ಖಾತೆಗಳು ಆ ವ್ಯಕ್ತಿಗೆ ಮತ್ತು ಗುಂಪಿನದ್ದಾಗಿದೆ. ಈ ಗುಂಪಿನಲ್ಲಿ ಹಿಜಬುಲ್ಲದ ೨ ನಾಯಕರು, ಯೇಮೇನನಲ್ಲಿನ ಹುತೀ ಬಂಡುಕೋರರಿಗೆ ಸಂಬಂಧಿತ ಖಾತೆಗಳು ಮತ್ತು ಇರಾನ್ ಮತ್ತು ರಷ್ಯಾ ಸರಕರಿ ಪ್ರಸಾರ ಮಾಧ್ಯಮಗಳ ಖಾತೆಗಳ ಸಮಾವೇಶವಿದೆ.

ಎಕ್ಸ್ ಈ ಖಾತೆಯಿಂದ ಬ್ಲೂಟಿಕ್ ತೆಗೆದಿದೆ !

ಟೇಕ್ ಟ್ರಾನ್ಸ್ಪರೆನ್ಸಿ ಪ್ರಾಜೆಕ್ಟ್ ವರದಿಯ ನಂತರ ಎಕ್ಸ್ ಇಂದ ಉಗ್ರರ ಗುಂಪಿನ ಜೊತೆಗೆ ಸಂಬಂಧಿತ ಖಾತೆಯಿಂದ ‘ಬ್ಲೂಟಿಕ್’ (ಖಾತೆಯ ಹೆಸರಿನ ಮುಂದೆ ನೀಲಿ ಬಣ್ಣದ ಚಿಹ್ನೆ. ಹಣ ತುಂಬಿ ಈ ಚಿಹ್ನೆ ಪಡೆಯಬೇಕಾಗುತ್ತದೆ) ತೆಗೆದು ಹಾಕಿದೆ. ‘ಈ ಪ್ರಕರಣದ ಬಗ್ಗೆ ಗಮನ ನೀಡುತ್ತಿದ್ದೇವೆ’, ಎಂದು ‘ಎಕ್ಸ್’ ನಿಂದ ಹೇಳಲಾಗಿದೆ. ಒಂದು ಮನವಿಯಲ್ಲಿ ಎಕ್ಸ್, ಕಂಪನಿ ಟಿಟಿಪಿಯ ವರದಿಯನ್ನು ಪುನರಾವಲೋಕನ ಮಾಡುತ್ತಿದೆ ಮತ್ತು ಅವಶ್ಯಕತೆ ಇದ್ದರೆ ಕ್ರಮ ಕೈಗೊಳ್ಳುವುದು ಎಂದು ಹೇಳಿದೆ. ವರದಿಯಲ್ಲಿ ನಮೂದಿಸಿರುವ ಅನೇಕ ಖಾತೆಗಳ ಹೆಸರುಗಳು ನೇರ ಅನುಮತಿ ಸೂಚಿಯಲ್ಲಿ ಇಲ್ಲ ಎಂದೂ ಹೇಳಿದೆ.