ಉತ್ತರಪ್ರದೇಶದಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುವುದರ ಹಿಂದೆ ಓರ್ವ ಮುಖ್ಯ ಉಲೇಮಾನ ಕೈವಾಡ !

(ಉಲೇಮ ಎಂದರೆ ಇಸ್ಲಾಂ ಧರ್ಮವಿಷಯದ ಜ್ಞಾನಿ)

ಲಕ್ಷ್ಮಣಪುರಿ (ಉತ್ತರಪ್ರದೇಶ) – ಹಲಾಲ ಪ್ರಮಾಣ ಪತ್ರ ನೀಡುವ ಪ್ರಕರಣದಲ್ಲಿ ಉತ್ತರ ಪ್ರದೇಶದಲ್ಲಿನ ಓರ್ವ ಮುಖ್ಯ ಉಲೇಮಾನ ಹೆಸರು ಬೆಳಕಿಗೆ ಬಂದಿದೆ. ಪೊಲೀಸರ ವಿಶೇಷ ಕೃತಿ ಪಡೆಗೆ (ಎಸ್.ಟಿ.ಎಫ್.ಗೆ) ಇದರ ಬಗ್ಗೆ ಅನೇಕ ಮಹತ್ವದ ಸಾಕ್ಷಿಗಳು ದೊರೆತಿವೆ. ‘ಆ್ಯಪ್ ಇಂಡಿಯಾ’ದಿಂದ ಈ ವಾರ್ತೆ ಪ್ರಸಾರ ಆಗಿದೆ. ಈ ಪ್ರಕರಣದಲ್ಲಿ ಎಸ್.ಟಿ.ಎಫ್. ನಿಂದ ಫೆಬ್ರುವರಿ ೧೨, ೨೦೨೪ ರಂದು ‘ಹಲಾಲ್ ಕೌನ್ಸಿಲ್ ಆಫ್ ಇಂಡಿಯಾ’ದ ಅಧ್ಯಕ್ಷ ಮೌಲಾನ ಹಬೀಬ್ ಯೂಸುಫ್ ಪಟೇಲ್, ಉಪಾಧ್ಯಕ್ಷ ಮೌಲಾನ ಮೋಹಿದಶೀರ್ ಸಪದಿಹಾ, ಮಹಾಸಚಿವ ಮುಫ್ತಿ ತಾಹೀರ್ ಝಾಕಿರ್ ಮತ್ತು ಕೋಷಾಧ್ಯಕ್ಷ ಮಹಮ್ಮದ್ ಅನ್ವರ್ ಖಾನ್ ಇವರನ್ನು ಮುಂಬಯಿಯಲ್ಲಿ ಬಂಧಿಸಲಾಗಿತ್ತು. ಅವರ ಮೇಲೆ ಹಲಾಲ ಪ್ರಮಾಣ ಪತ್ರದ ಹೆಸರಿನಲ್ಲಿ ವಿವಿಧ ಕಂಪನಿಗಳಿಂದ ಹಣ ಕಬಳಿಸುವ ಆರೋಪ ಇತ್ತು.

‘ಇಂಡಿಯಾ ಪ್ರೈವೇಟ್ ಲಿಮಿಟೆಡ್ ಚೆನ್ನೈ’, ‘ಜಮೀದ್ ಉಲೇಮಾ ಹಿಂದ್ ಹಲಾಲ್ ಟ್ರಸ್ಟ್ ದೆಹಲಿ’ ಮತ್ತು ‘ಹಲಾಲ್ ಕೌನ್ಸಿಲ್ ಆಫ್ ಇಂಡಿಯಾ ಮುಂಬಯಿ’, ಈ ಮುಸಲ್ಮಾನ ಸಂಸ್ಥೆಗಳು ವಿವಿಧ ಕಂಪನಿಗಳಿಗೆ ಹಲಾಲ ಪ್ರಮಾಣ ಪತ್ರ ನೀಡುತ್ತಿದ್ದವು. ‘ಈ ಎಲ್ಲಾ ಉತ್ಪಾದನೆಗಳು ಮುಸಲ್ಮಾನರು ಶರಿಯತ್ ಅಡಿಯಲ್ಲಿ ತಯಾರಿಸಿದ್ದು ಅದು ಮುಸಲ್ಮಾನರು ಉಪಯೋಗಿಸಬಹುದು’, ಇದನ್ನು ತೋರಿಸುವುದಕ್ಕಾಗಿ ಈ ಪ್ರಮಾಣ ಪತ್ರ ನೀಡುವುದು ಇದರ ಹಿಂದಿನ ಉದ್ದೇಶವಾಗಿತ್ತು.

೧. ‘ಎಸ್.ಟಿ.ಎಫ್. ನಿಂದ ಹಲಾಲ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಆರೋಪಿಗಳ ಬ್ಯಾಂಕ್ ಖಾತೆಗಳು ವಶಪಡಿಸಿಕೊಳ್ಳಲಾಗಿದ್ದು ಅವರ ಸಹಚರರನ್ನು ಬಂಧಿಸಲಾಗಿದೆ.

೨. ಈ ಹಣ ದೇಶದ ಸಹಿತ ವಿದೇಶದಲ್ಲಿನ ಬ್ಯಾಂಕು ಖಾತೆಗಳಿಗೂ ವರ್ಗಾಯಿಸುತ್ತಿದ್ದರು. ಆದ್ದರಿಂದ ಅದರ ಉಪಯೋಗ ದೇಶ ವಿರೋಧಿ ಚಟುವಟಿಕೆಗಳಲ್ಲಿ ಮಾಡುವ ಅನುಮಾನವಿದೆ.

೩. ಇಲ್ಲಿಯವರೆಗೆ ಸುಮಾರು ೨೦ ಕಂಪನಿಗಳ ಹೆಸರು ಬೆಳಕಿಗೆ ಬಂದಿದ್ದು ಅವರ ಜೊತೆಗೆ ಮೇಲಿನ ಆರೋಪಿಗಳು ವ್ಯವಹರಿಸುತ್ತಿದ್ದರು.

೪. ಕಳೆದ ವರ್ಷ ಯೋಗಿ ಆದಿತ್ಯನಾಥ ಸರಕಾರವು ಉತ್ತರ ಪ್ರದೇಶದಲ್ಲಿ ಹಲಾಲ ಪ್ರಮಾಣ ಪತ್ರಸಹಿತ ವಸ್ತುಗಳ ಮಾರಾಟ ಮಾಡಿರುವ ಪ್ರಕರಣದಲ್ಲಿ ಜನರನ್ನೂ ಜೈಲಿಗೆ ಕಳುಹಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು.