ನಿತೀಶ ಕುಮಾರಗೆ ಬೆದರಿಕೆ : ಭಾಜಪ ಬಿಡದಿದ್ದರೇ ಬಾಂಬ್ ನಿಂದ ಸ್ಪೋಟಿಸುವೆವು !

ಮತ್ತೊಬ್ಬನಿಂದ ದೆಹಲಿ ಉಚ್ಚ ನ್ಯಾಯಾಲಯ ಸ್ಫೋಟಿಸುವ ಬೆದರಿಕೆ ! 

ನವ ದೆಹಲಿ – ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಮತ್ತು ದೆಹಲಿ ಉಚ್ಚ ನ್ಯಾಯಾಲಯವನ್ನು ಬಾಂಬ್ ನಿಂದ ಸ್ಫೋಟಿಸುವ ಎರಡು ಪ್ರತ್ಯೇಕ ಬೆದರಿಕೆ ಬಂದಿದೆ. ಬಿಹಾರ ಪೊಲೀಸ್ ಮಹಾನಿರ್ದೇಶಕ ಆರ್.ಎಸ್. ಭಾಟಿ ಇವರಿಗೆ ಓರ್ವನು ಆಡಿಯೋ ಕ್ಲಿಪ್ ಅನ್ನು ಕಳುಹಿಸಿದ್ದನು. ಅದರಲ್ಲಿ ಅವನು, ‘ಭಾಜಪದೊಂದಿಗೆ ಹೋಗಬೇಡಿರಿ ಎಂದು ನಿತೀಶರಿಗೆ ಹೇಳಿರಿ, ಇಲ್ಲದಿದ್ದರೆ ಅವರನ್ನು ನಾವು ಬಾಂಬ್ ನಿಂದ ಸ್ಪೋಟಿಸುವೆವು ಮತ್ತು ಅವರ ಶಾಸಕರನ್ನೂ ಕೊಲ್ಲುತ್ತೇವೆ’ ಎಂದು ಇತ್ತು. ಪೊಲೀಸರು ಈ ಪ್ರಕರಣದ ದೂರು ದಾಖಲಿಸಿ, ಸೋನು ಪಾಸ್ವಾನ ಹೆಸರಿನ ವ್ಯಕ್ತಿಯನ್ನು ರಾಜ್ಯದ ದಾವಣಗೆರೆಯಿಂದ ಬಂಧಿಸಿದ್ದಾರೆ. ಪಾಸ್ವಾನ್ ಬಿಹಾರದ ಸಮಸ್ತಿಪುರ್ ಜಿಲ್ಲೆಯ ನಿವಾಸಿಯಾಗಿದ್ದು, ಕರ್ನಾಟಕದ ಗೋಣಿಚೀಲ ಹೊಲಿಯುವ ಕೆಲಸ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಪಾಸ್ವಾನ ಮಾತನಾಡಿ, ಬಿಹಾರ ರಾಜ್ಯದಲ್ಲಿ ಪದೇ ಪದೇ ಅಧಿಕಾರ ಬದಲಾವಣೆಗಳಿಂದಾಗಿ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತಿದ್ದು, ಬಡತನ ಮತ್ತು ನಿರುದ್ಯೋಗ ಹೆಚ್ಚಾಗುತ್ತಿತ್ತು. ಅದಕ್ಕೇ ಬೇಸತ್ತು ನಾನು ಇಂತಹ ಬೆದರಿಕೆಯನ್ನು ಹಾಕಿದ್ದೇನೆ ಎಂದು ಹೇಳಿದ್ದಾನೆ. ಪೊಲೀಸರು ಅವನ ಮೊಬೈಲ ವಶಪಡಿಸಿಕೊಂಡಿದ್ದಾರೆ.

ಎರಡನೇಯ ಘಟನೆ ಫೆಬ್ರವರಿ 14 ರ ಸಾಯಂಕಾಲ ದೆಹಲಿ ಉಚ್ಚ ನ್ಯಾಯಾಲಯದ ಒಬ್ಬ ಅಧಿಕಾರಿಗೆ ಒಂದು ಇ-ಮೇಲ್ ಬಂದಿತು. ಫೆಬ್ರುವರಿ 15ರಂದು ನ್ಯಾಯಾಲಯದಲ್ಲಿ ಭಾರಿ ಸ್ಫೋಟ ನಡೆಸುವುದಾಗಿ ಅದರಲ್ಲಿ ಹೇಳಲಾಗಿತ್ತು. `ಈ ಸ್ಫೋಟ ದೆಹಲಿಯ ಅತಿ ದೊಡ್ಡ ಸ್ಫೋಟವಾಗಿರಲಿದೆ. ಎಷ್ಟು ಸಾಧ್ಯವೋ ಅಷ್ಟು ಭದ್ರತೆಯನ್ನು ನಿಯೋಜಿಸಿರಿ ಮತ್ತು ಎಲ್ಲ ಮಂತ್ರಿಗಳನ್ನು ಕರೆಸಿರಿ, ನಾವು ನಿಮ್ಮೆಲ್ಲರನ್ನು ಸೇರಿಸಿ ಕೊಲ್ಲುತ್ತೇವೆ’ ಎಂದು ಬೆದರಿಕೆಯನ್ನು ಹಾಕಲಾಗಿತ್ತು.

ತದನಂತರ ನ್ಯಾಯಾಲಯದ ಪ್ರದೇಶದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಸಂಪೂರ್ಣ ಪ್ರದೇಶದಲ್ಲಿ ತಪಾಸಣೆ ನಡೆಸಲಾಯಿತು. ಪರಿಸರದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ. ಬೆದರಿಕೆ ಹಾಕಿದ ವ್ಯಕ್ತಿಯನ್ನು ಗುರುತಿಸಲಾಗುತ್ತಿದೆ.