ಪುತಿನ್ ರವರು ಉಕ್ರೇನ್ ಯುದ್ಧದಿಂದ ಹಿಂದೆ ಸರಿದರೆ ಅವರ ಹತ್ಯೆಯಾಗುವ ಸಾಧ್ಯತೆ !- ಅಮೇರಿಕಾದ ಬಿಲಿಯನೇರ್ ಇಲಾನ್ ಮಸ್ಕ್ ಇವರ ಹೇಳಿಕೆ

ನ್ಯೂಯಾರ್ಕ್(ಅಮೇರಿಕ) – ೧೦ ದಿನಗಳಲ್ಲಿ ರಷ್ಯಾ-ಉಕ್ರೇನ್ ಯುದ್ಧಕ್ಕೆ ೨ ವರ್ಷ ಪೂರ್ಣವಾಗುವುದು. ಹೀಗಿರುವಾಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಇತ್ತೀಚೆಗಿನ ಸಂದರ್ಶನ ಪ್ರಸಾರವಾಗಿದೆ. ಇದರಲ್ಲಿ ಅವರು ರಷ್ಯಾ-ಉಕ್ರೇನ್ ಯುದ್ಧದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತಿದ್ದಾರೆ. ಈ ಸಂದರ್ಭದಲ್ಲಿ ಅಮೇರಿಕಾದ ಬಿಲಿಯನೇರ್ ಇಲಾನ್ ಮಸ್ಕ್ ಅವರು ತಮ್ಮ ಒಡೆತನದ ‘ಎಕ್ಸ್‘ ನಲ್ಲಿ ನಡೆದ ‘ಎಕ್ಸ್ ಸ್ಪೇಸೆಸ್‘ ಕಾರ್ಯಕ್ರಮದಲ್ಲಿ ಇದನ್ನು ಖಚಿತ ಪಡಿಸಿದ್ದಾರೆ. ಪುತಿನ್ ಯುದ್ಧದಿಂದ ಹಿಂದೆ ಸರಿದರೆ ಅವರನ್ನು ಸಾಯಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಹಾಗೆಯೇ ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ದದಲ್ಲಿ ಸೋಲಾಗಬಹುದು, ಹೀಗೆ ಯಾವುದೇ ಸಾಧ್ಯತೆಗಳಿಲ್ಲ ಎಂದು ಹೇಳಿದ್ದಾರೆ.

ಮಸ್ಕ್ ಆಯೋಜಿಸಿದ್ದ ಈ ಆನ್ ಲೈನ್ ಚರ್ಚಾಕೂಟದಲ್ಲಿ ಅಮೇರಿಕಾದ ವಿವಿಧ ಸಂಸದರು ಮತ್ತು ರಾಜಕೀಯ ಮುಖಂಡರು ಉಪಸ್ಥಿತರಿದ್ದರು. ರಷ್ಯಾದ ವಿರುದ್ಧ ಉಕ್ರೇನ್‌ಗೆ ಅಮೇರಿಕಾವು ಮಿಲಿಟರಿ ಸಹಾಯ ನೀಡಬೇಕೇ ಅಥವಾ ಬೇಡವೇ, ಎಂಬುದರ ಚರ್ಚೆ ಇತ್ತು. ಚರ್ಚೆಯಲ್ಲಿ ಭಾಗವಹಿಸಿದ ಸಂಸದರಲ್ಲಿ ವಿಸ್ಕಾನಿಸ್ಟನ್‌ನ ರಾನ್ ಜಾನ್ಸನ್, ಓಹಾಯೋದ ಜೆ.ಡಿ.ಹಾನ್ಸ್, ಉಟಾಹದ ಮೈಕ್‌ಲೀ, ವಿವೇಕ ರಾಮಸ್ವಾಮಿ ಮತ್ತು ‘ಕ್ರಾಫ್ಟ್ ವೆಂಚರ್ಸ್‘ ಕಂಪನಿಯ ಸಹಸಂಸ್ಥಾಪಕ ಡೆವಿಡ್ ಸ್ಯಾಕ್ಸ್ ಇವರುಗಳು ಭಾಗವಹಿಸಿದ್ದರು.

ಉಕ್ರೇನ್‌ನ ಗೆಲವು ಕೇವಲ ಒಂದು ಕನಸು ! – ಸಂಸದ ರಾನ್ ಜಾನ್ಸನ್

ಈ ಸಂದರ್ಭದಲ್ಲಿ ರಷ್ಯಾ ವಿರುದ್ಧ ಉಕ್ರೇನ್ ಗೆಲ್ಲುವ ನಿರೀಕ್ಷೆಯಲ್ಲಿರುವ ಜನರು ನಿಜವಾಗಿಯೂ ಕನಸಿನ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ ಎಂದು ರಾವ್ ಜಾನ್ಸನ್ ಹೇಳಿದರು. ಉಕ್ರೇನ್‌ಗೆ ಸಹಾಯ ಮಾಡಲು ಅಮೇರಿಕಾ ಸಂಸತ್ತಿನಲ್ಲಿ ತರಲಾದ ಮಸೂದೆಯಲ್ಲಿ ಅಮೇರಿಕನ್ನರು ತಮ್ಮ ಪ್ರತಿನಿಧಿಗಳನ್ನು ಸಂಪರ್ಕಿಸುತ್ತಾರೆ. ಈ ವೆಚ್ಚದಿಂದ ಉಕ್ರೇನ್‌ಗೆ ಯಾವುದೇ ಸಹಾಯ ಸಿಗುವುದಿಲ್ಲ. ಯುದ್ಧ ಮುಂದುವರೆಯುವುದರಿಂದ ಉಕ್ರೇನ್‌ಗೆ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.