ಠಾಣೆಯ ಮ್ಹಾದಾ ಕಾಲೋನಿಯಲ್ಲಿ ಅಕ್ರಮ ಮದರಸಾ

ಮನಸೆ ಮತ್ತು ಪೊಲೀಸರಿಂದ ಜಂಟಿ ಕಾರ್ಯಾಚರಣೆ !

(ಮನಸೆ ಅಂದರೆ ಮಹಾರಾಷ್ಟ್ರ ನವನಿರ್ಮಾಣ ಸೇನೆ)

ಮನಸೆಯ ಠಾಣೆ ಹಾಗೂ ಪಾಲ್ಘರ್ ಜಿಲ್ಲಾಧ್ಯಕ್ಷ ಅವಿನಾಶ್ ಜಾಧವ್

ಥಾಣೆ – ಮನಸೆಯ ಠಾಣೆ ಹಾಗೂ ಪಾಲ್ಘರ್ ಜಿಲ್ಲಾಧ್ಯಕ್ಷ ಅವಿನಾಶ್ ಜಾಧವ್ ಮತ್ತು ಅವರ ಕಾರ್ಯಕರ್ತರು ಪೊಲೀಸರೊಂದಿಗೆ ಇಲ್ಲಿನ ಎಂ.ಎಂ.ಆರ್‌.ಡಿ.ಎ. ಕಟ್ಟಡಕ್ಕೆ ತೆರಳಿ ಕಟ್ಟಡದಿಂದ ಧ್ವನಿವರ್ಧಕದ ಮೂಲಕ ಅಜಾನ್ ನೀಡಿದವರಿಗೆ ಬುದ್ಧಿಕಲಿಸಿದ್ದಾರೆ. ಎಂ.ಎಂ.ಆರ್‌.ಡಿ.ಎ. ಕಟ್ಟಡದಲ್ಲಿ ಕೆಲ ಮತಾಂಧರು ಅಕ್ರಮ ಮದರಸಾ ಆರಂಭಿಸಿದ್ದಾರೆ. ನಮಾಜ್ ಮತ್ತು ಆಜಾನ್ ಅಲ್ಲಿ ಪ್ರತ್ಯಕ್ಷವಾಗಿ ನಡೆಯುತ್ತಿದ್ದಾಗ ಜಾಧವ್ ಪೊಲೀಸರೊಂದಿಗೆ ಅವರ ಮನೆಗೆ ಹೋದರು. ಪೊಲೀಸರು ಆತನ ಸೌಂಡ್ ಸಿಸ್ಟಂ ಹಾಗೂ ನಮಾಜ್ ವೇಳೆ ಬರೆದಿದ್ದ ಫಲಕಗಳನ್ನು ವಶಪಡಿಸಿಕೊಂಡಿದ್ದಾರೆ.

1. ಜಾಧವ್ ಅಲ್ಲಿನ ಮುಸ್ಲಿಂ ಕುಟುಂಬಕ್ಕೆ, ”ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಜೋರಾಗಿ ಪ್ರಾರ್ಥಿಸುತ್ತೀರಿ. ಮನೆಯಲ್ಲಿ ಪ್ರಾರ್ಥನೆ ಮಾಡಿ. ನಮಗೆ ಯಾವುದೇ ಅಭ್ಯಂತರ ಇಲ್ಲ. ನಾವು ನಿಮ್ಮೊಂದಿಗಿದ್ದೇವೆ; ಆದರೆ ನೀವು ಕೂಗಿದರೆ ಅದು ಸರಿಯಲ್ಲ.” ಎಂದು ಹೇಳಿದರು.

2. ಇಲ್ಲಿ ದಿನಕ್ಕೆ 3-4 ಬಾರಿ ನಮಾಜ್ ಮಾಡಲಾಗುತ್ತಿತ್ತು. ಕೆಲವರು ಹೊರಗಿನಿಂದ ಬಂದು ನಮಾಜ ಮಾಡುತ್ತಿದ್ದರು. ಮುಂಬಯಿನಿಂದ ಕೆಲವರನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಆ ಜನರು ಅದನ್ನು ಮಾಡುತ್ತಿದ್ದಾರೆ. ಮಸೀದಿಯಲ್ಲಿ ಹೆಚ್ಚಿನ ಸಂಖ್ಯೆಯ ಆಜಾನ್‌ಗಳನ್ನು ನೀಡುವಂತೆ, ಈ ಆಜಾನ್ ಅನ್ನು ಕಟ್ಟಡದಲ್ಲಿ ಧ್ವನಿವರ್ಧಕದ ಮೂಲಕ ನೀಡಲಾಗುತ್ತದೆ. ಈ ಕಟ್ಟಡದಲ್ಲಿ ಮದರಸಾ ತೆರೆಯಲಾಗಿದೆ.

”ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮಸೀದಿ ಮೇಲೆ ಭೋಗ ಹಾಕುವಂತಿಲ್ಲ, ಆದರೆ ಈಗ ಮನೆ ಮೇಲೆ ಹಾಕಲು ಆರಂಭಿಸಿದ್ದಾರೆ. ಕೆಟ್ಟ ವಿಚಾರಗಳಿರುವವರು ಇಲ್ಲಿಗೆ ಬರುತ್ತಿದ್ದು, ಇಲ್ಲಿ ಏನೋ ನಡೆಯುತ್ತಿದೆ ಎಂಬ ಸಂಏಹ ವ್ಯಕ್ತವಾಗಿದೆ ಎಂದು ಅವಿನಾಶ್ ಜಾಧವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ವಸತಿ ಕಾಲೋನಿಯಲ್ಲಿ ಅಕ್ರಮ ಮದರಸಾ ತೆರೆಯುವವರೆಗೂ ಆಡಳಿತ ಮತ್ತು ಪೊಲೀಸರು ನಿದ್ದೆ ಮಾಡುತ್ತಿದ್ದರೇ ? ಮನಸೆ ಈ ವಿಷಯದ ಬಗ್ಗೆ ಗಮನ ಹರಿಸದೇ ಇದ್ದಿದ್ದರೆ ಈ ಅಕ್ರಮ ಮದರಸಾ ಹೀಗೆಯೇ ಮುಂದುವರೆಯುತ್ತಿತ್ತು !