ಮುಸಲ್ಮಾನ ಕಕ್ಷಿದಾರರಿಂದ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ಅರ್ಜಿಯ ಕುರಿತು ಒಂದುವರೆ ಗಂಟೆ ವಿಚಾರಣೆ !

  • ಜ್ಞಾನವಾಪಿಯ ನೆಲಮಾಳಿಗೆಯಲ್ಲಿ ಹಿಂದುಗಳಿಗೆ ಪೂಜೆಗೆ ಅನುಮತಿ ನೀಡಿದ ಪ್ರಕರಣ !

  • ಮುಂದಿನ ವಿಚಾರಣೆ ಫೆಬ್ರವರಿ ೧೫ ಕ್ಕೆ

ಪ್ರಯಾಗರಾಜ (ಉತ್ತರಪ್ರದೇಶ) – ವಾರಣಾಸಿಯ ಜ್ಞಾನವಾಪೀಯಲ್ಲಿರುವ ವ್ಯಾಸ ನೆಲಮಾಳಿಗೆಯಲ್ಲಿ ಪೂಜೆ ಆರಂಭಿಸಿರುವ ಪ್ರಕರಣದಲ್ಲಿ ಮುಸಲ್ಮಾನ ಕಕ್ಷಿದಾರರು ದಾಖಲಿಸಿರುವ ಅರ್ಜಿಯ ಮೇಲೆ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಈ ಸಮಯದಲ್ಲಿ ಜ್ಞಾನವಾಪಿ ವ್ಯವಸ್ಥೆ ಸಮಿತಿ ಮತ್ತು ಉತ್ತರಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ನ ನ್ಯಾಯವಾದಿಯಿಂದ ಅವರ ಪಕ್ಷ ಮಂಡಿಸಿದರು. ಈಗ ಫೆಬ್ರುವರಿ ೧೫ ರಂದು ಮತ್ತೊಮ್ಮೆ ವಿಚಾರಣೆ ನಡೆಯುವುದು. ಸಮಯದಲ್ಲಿ ಹಿಂದೂ ಪಕ್ಷದವರು ಅವರ ಪಕ್ಷ ಮಂಡಿಸುವರು. ಅಲಹಾಬಾದ್ ಉಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯವರೆಗೆ ಪೂಜೆಯ ಆದೇಶಕ್ಕೆ ತಡೆಯಾಜ್ಞೆ ನೀಡಿಲ್ಲ.

ಮುಸಲ್ಮಾನ ಪಕ್ಷದವರು ತಮ್ಮ ಯುಕ್ತಿವಾದದಲ್ಲಿ, ವ್ಯಾಸ ನೆಲ ಮಾಳಿಗೆ ಎಂದಿಗೂ ಹಿಂದುಗಳ ವಶದಲ್ಲಿ ಇರಲಿಲ್ಲ. ನೆಲಮಳೆಗೆ ವಶದಲ್ಲಿರುವ ಹಿಂದುಗಳ ದಾವೇ ಸಂಪೂರ್ಣ ತಪ್ಪಾಗಿದೆ. ಬಾಬ್ರಿ ಪ್ರಕರಣದಲ್ಲಿ ನಿರ್ಮೋಹಿ ಅಖಾಡಾದ ವತಿಯಿಂದ ಓರ್ವ ವ್ಯಕ್ತಿ ನಿಂತು ಪೂಜೆ ಮಾಡುವ ಅಧಿಕಾರ ಕೇಳಿದ್ದನು; ಆದರೆ ನ್ಯಾಯಾಲಯವು ಅದನ್ನು ಒಪ್ಪಿರಲಿಲ್ಲ. (ಈ ಮೊಕದ್ದಮೆಯ ಕೊನೆಯಲ್ಲಿ ತೀರ್ಪು ಹಿಂದೂಗಳ ಪರ ಬಂದಿತ್ತು, ಇದನ್ನು ಮುಸಲ್ಮಾನ ಪಕ್ಷದವರು ಅನುಕೂಲತೆಯ ಪ್ರಕಾರ ಮರೆಯುತ್ತಾರೆ, ಇದನ್ನು ತಿಳಿಯಿರಿ ! – ಸಂಪಾದಕರು) ವ್ಯಾಸ ಕುಟುಂಬದವರು ಯಾವ ಅಧಿಕಾರದಿಂದ ಪೂಜೆ ಆರಂಭಿಸಲು ಬೇಡಿಕೆ ಸಲ್ಲಿಸಿದ್ದಾರೆ ? ಇದು ಜಿಲ್ಲಾ ನ್ಯಾಯಾಧೀಶರು ಕೇಳಬೇಕಿತ್ತು. ಜಿಲ್ಲಾ ನ್ಯಾಯಾಧೀಶರು ಅವರ ಅರ್ಜಿಯ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಬದಲು ನೇರ ಪೂಜೆ ಮಾಡಲು ಆದೇಶ ನೀಡಿದ್ದಾರೆ ಎಂದು ಹೇಳಿದರು.