ಭಾರತದ ೮ ನಿವೃತ್ತ ನೌಕಾದಳದ ಅಧಿಕಾರಿಗಳ ಬಿಡುಗಡೆ ಮಾಡಿದ ಕತಾರ್ !

  • ಭಾರತದ ರಾಜತಾಂತ್ರಿಕ ಗೆಲವು !

  • ತಥಾಕಥಿತ ಬೇಹುಗಾರಿಕೆ ಆರೋಪದಡಿಯಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು !

ನವ ದೆಹಲಿ – ಕೊನೆಗೂ ಕತಾರವು ಭಾರತದ ನೌಕಾದಳ 9 ನಿವೃತ್ತ ಅಧಿಕಾರಿಗಳನ್ನು ಬಿಡುಗಡೆಗೊಳಿಸಿದೆ. ಈ ಅಧಿಕಾರಿಗಳು ಕತಾರನಲ್ಲಿ ಬೇಹುಗಾರಿಕೆ ನಡೆಸುವ ಆರೋಪದಲ್ಲಿ ಮೊದಲು ಗಲ್ಲು ಶಿಕ್ಷೆ ವಿಧಿಸಿತ್ತು. ಭಾರತದ ಹಸ್ತಕ್ಷೇಪದ ನಂತರ ಈ ಶಿಕ್ಷೆಯನ್ನು ರದ್ದುಪಡಿಸಿ ಜೀವಾವಧಿ ಶಿಕ್ಷೆಗೆ ಬದಲಾಯಿಸಿತು. ಇದರಲ್ಲಿನ ೭ ಜನರು ಸ್ವದೇಶಕ್ಕೆ ಹಿಂತಿರುಗಿದ್ದಾರೆ. ಕೆಲವು ದಾಖಲೆಗಳನ್ನು ಪೂರ್ಣಗೊಳಿಸುವುದಕ್ಕಾಗಿ ಎಂಟನೆಯ ಅಧಿಕಾರಿ ಭಾರತಕ್ಕೆ ಹಿಂತಿರುಗಲು ವಿಳಂಬವಾಗಿದೆ. ಇದು ಭಾರತದ ರಾಜತಾಂತ್ರಿಕ ಗೆಲುವಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರೇ ಮುಂದಾಳತ್ವ ವಹಿಸಿದ್ದರು ಎಂದು ಹೇಳುತ್ತಿದ್ದಾರೆ.

೧. ಕತಾರವು ಈ ನಿವೃತ್ತ ನೌಕಾದಳ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿದ ನಂತರ ಭಾರತದಿಂದ ಕತಾರಗೆ ಸವಾಲು ಹಾಕಿದ್ದು ಹಾಗೂ ಅವರ ಕುರಿತಾದ ಇರುವ ದಾಖಲೆಗಳನ್ನು ನೀಡಿದರು.

೨. ಯಾವಾಗ ನಿವೃತ್ತ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪಿದರು ಆಗ ಅವರು ‘ಭಾರತ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದರು. ಹಾಗೂ ಇವರೆಲ್ಲರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕತಾರಗೆ ಕೃತಜ್ಷತೆ ಸಲ್ಲಿಸಿದರು.

೧. ‘ನಾವು ಈ ನಿರ್ಣಯವನ್ನು ಸ್ವಾಗತಿಸುತ್ತೇವೆ’ ಎಂಟು ಜನರಲ್ಲಿ ಏಳು ಜನರು ಭಾರತಕ್ಕೆ ಮರಳಿದ್ದಾರೆ. ಈ ನಾಗರಿಕರ ಘರ ವಾಪಸಿಯ ಬಗ್ಗೆ ನಮಗೆ ಸಂತೋಷವಿದೆ ! – ವಿದೇಶಾಂಗ ಸಚಿವಾಲಯ

೨. ನಾವು ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದೇವೆ, ಇದರ ಬಗ್ಗೆ ನಮಗೆ ಬಹಳ ಆನಂದವಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ನಮ್ಮ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡದೇ ಇದ್ದಿದ್ದರೆ ನಮ್ಮ ಬಿಡುಗಡೆ ಕಷ್ಟವಾಗಿತ್ತು. – ಬಿಡುಗಡೆ ಹೊಂದಿರುವ ನಿವೃತ್ತ ನೌಕಾದಳದ ಅಧಿಕಾರಿ

ನಿವೃತ್ತ ನೌಕಾದಳದ ಅಧಿಕಾರಿಗಳ ಹೆಸರುಗಳು

ಕ್ಯಾಪ್ಟನ್ ನವತೇಜ ಸಿಂಗ ಗಿಲ್, ಕ್ಯಾಪ್ಟನ್ ಸೌರಭ ವಸಿಷ್ಠ, ಕಮಾಂಡರ್ ಪೂರ್ಣೆಂದು ತಿವಾರಿ, ಕ್ಯಾಪ್ಟನ್ ಬೀರೇಂದ್ರ ಕುಮಾರ ವರ್ಮ, ಕಮಾಂಡರ್ ಸುಗುಣಾಕರ ಪಾಕಲ, ಕಮಾಂಡರ್ ಸಂಜೀವ ಗುಪ್ತ, ಕಮಾಂಡರ್ ಅಮಿತ ನಾಗಪಾಲ ಮತ್ತು ನಾವಿಕ ರಾಗೇಶ

ಏನು ನಡೆದಿತ್ತು ?

ಕತಾರದಲ್ಲಿನ ‘ಅಲ್ ದಾಹರ ಗ್ಲೋಬಲ್ ಟೆಕ್ನಾಲಜಿಸ್ ಅಂಡ್ ಕನ್ಸಲ್ಟೆನ್ಸಿ ಸರ್ವಿಸಸ್’ ಈ ಕಂಪನಿಯಲ್ಲಿ ಈ ನಿವೃತ್ತ ಅಧಿಕಾರಿಗಳು ಕಾರ್ಯನಿರತವಾಗಿದ್ದರು. ಈ ಕಂಪನಿಯಿಂದ ರಕ್ಷಣೆಯ ಕುರಿತಾದ ಸೇವೆ ನೀಡುತ್ತಾರೆ. ಈ ಎಲ್ಲರಿಗೆ ತಥಾಕಥಿತ ಬೇಹುಗಾರಿಕೆಯ ಬಗ್ಗೆ ಆಗಸ್ಟ್ ೩೦, ೨೦೨೨ ರಂದು ಕತಾರ ಪೋಲೀಸರು ಬಂಧಿಸಿದ್ದರು. ಕತಾರದಲ್ಲಿನ ಒಂದು ಕನಿಷ್ಠ ನ್ಯಾಯಾಲಯದಿಂದ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಭಾರತದ ವಿದೇಶಾಂಗ ಸಚಿವಾಲಯವು ಅಕ್ಟೋಬರ್ ೨೬, ೨೦೨೩ ರಂದು ಇದರ ಬಗ್ಗೆ ಒಂದು ಮನವಿ ಪ್ರಸಾರ ಮಾಡಿ ಈ ತೀರ್ಪಿನ ಬಗ್ಗೆ ಆತಂಕ ವ್ಯಕ್ತಪಡಿಸಿತು. ‘ನಾವು ಎಲ್ಲಾ ರೀತಿಯ ಕಾನೂನ ಬದ್ಧ ಪರ್ಯಾಯವನ್ನು ಉಪಯೋಗಿಸಿ ಅವರನ್ನು ರಕ್ಷಿಸುವ ಪ್ರಯತ್ನ ಮಾಡುವೆವು’ ಎಂದು ಭಾರತ ಹೇಳಿತ್ತು.

ಸಂಪಾದಕೀಯ ನಿಲುವು

ಭಾರತವು ಇದೇ ರೀತಿ ಪಾಕಿಸ್ತಾನವು ಬಂಧಿಸಿರುವ ನಿವೃತ್ತ ನೌಕಾದಳ ಅಧಿಕಾರಿ ಕುಲಭೂಷಣ ಜಾಧವ ಇವರ ಬಿಡುಗಡೆಗಾಗಿ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ ಎಂದು ಜನರಿಗೆ ಅನಿಸುತ್ತದೆ !