ವಿಧ್ವಂಸದೆಡೆಗೆ ಮಾರ್ಗಕ್ರಮಿಸುತ್ತಿರುವ ದಾಸ್ಯದ ಭಾರತೀಯರು !
೧. ಹಿಂದೂಗಳಿಗೆ ಆಂಗ್ಲದಾಸ್ಯದ ಬಯಕೆ !
‘ಭಾರತದ ಧಮನಿಗಳಲ್ಲಿ (ರಕ್ತನಾಳಗಳಲ್ಲಿ) ಈಗ ಪಶ್ಚಿಮದ ರಕ್ತ ಹರಿಯತೊಡಗಿದೆ. ಆಂಗ್ಲ ಶಿಕ್ಷಿತ, ಅರ್ಧಶಿಕ್ಷಿತ ಹಿಂದೂಗಳಿಗೆ ಅತ್ಯಾಧುನಿಕರಾಗುವ ತೀವ್ರ ಇಚ್ಛೆಯಿದೆ. Our dream is modern. Our eating is modern. Even the Hindu ladies giggle like British Women. (ನಮ್ಮ ಕನಸು ಆಧುನಿಕ, ನಮ್ಮ ಆಹಾರವೂ ಆಧುನಿಕ. ಹಿಂದೂ ಸ್ತ್ರೀಯರು ಕೂಡ ಬ್ರಿಟಿಷ ಸ್ತ್ರೀಯರ ಹಾಗೆ ನಗುತ್ತಾರೆ.) ಭಾರತೀಯರಿಗೆ ಆಂಗ್ಲದ ಮೋಹ ಎಷ್ಟಿದೆಯೆಂದರೆ, ಒಂದು ವೇಳೆ ಇಂಗ್ಲೆಂಡ್‌ನಿಂದ ಆಂಗ್ಲ ಭಾಷೆ ಹೋಗಬಹುದು; ಆದರೆ ಭಾರತದಿಂದ ಹೋಗಲಿಕ್ಕಿಲ್ಲ. ಆಂಗ್ಲಶಿಕ್ಷಣ ಪಡೆದ ಹಾಗೂ ಅರ್ಧಶಿಕ್ಷಣ ಪಡೆದವನಿಗೆ ಅತ್ಯಾಧುನಿಕ ಜೀವನ ನಡೆಸುವ ಆಸಕ್ತಿಯಿದೆ. ಅತ್ಯಾಧುನಿಕತೆ ಎಂದರೆ ಆಂಗ್ಲ ಭಾಷೆ ಮಾತನಾಡಲು ಬರುವುದು ! ಹಳ್ಳಿಯ ಹುಡುಗರಿಗೂ ಆಂಗ್ಲ ಬೇಕಾಗಿದೆ. ಅದಕ್ಕಾಗಿ ಅವರು ಹೆಚ್ಚಿನ ಸಂಬಳ ನೀಡಿ ಆಂಗ್ಲ ಶಿಕ್ಷಕರನ್ನಿಡುತ್ತಿದ್ದಾರೆ. ಆಂಗ್ಲ ಭಾಷೆ ಬರುವುದೇ ಆಧುನಿಕತೆಯ ಲಕ್ಷಣವಾಗಿದೆ. ಅದಕ್ಕೆ ‘ಪ್ರಗತಿ’ಎನ್ನುತ್ತಾರೆ.‘ “Everything modern is progressive.’’ (ಆಧುನಿಕವಿರುವುದೆಲ್ಲವೂ ಪ್ರಗತಿಪರವಾಗಿದೆ)
೨. ಪಾಶ್ಚಾತ್ಯರ ಉಡುಪಿನ ಅತಿ ಬಳಕೆಯಿಂದಾಗಿ ಭಾರತೀಯ ಸಂಸ್ಕೃತಿಯನ್ನು ಜೀವಂತವಿಡಲು ಪರಿಶ್ರಮ ಪಡಬೇಕಾಗಿದೆ
ಇಂದು ನಮ್ಮ ಉಡುಗೆ-ತೊಡುಗೆಗಳು ಬದಲಾಗಿವೆ. ‘ಕೋಟ್’ ಇದೆ. ‘ಕಾಲರ್’ನ ‘ಶರ್ಟ್’ ಇದೆ. ಅದು ಪಾಶ್ಚಾತ್ಯರತ್ತ ಹೊರಳಿಸುವಂತಹದ್ದಾಗಿದೆ. ಇಂದು ನಮ್ಮ ದುರ್ದೆಶೆ ಆಗಿದೆ. ಉಡುಗೆಗಳ ವಿಷಯದಲ್ಲಿ ಇದು ಸಂಭವಿಸುವಂತಹದ್ದೇ; ಆದರೆ ಅವರಿಗೂ ಭಾರತೀಯತೆ ಮತ್ತು ಭಾರತೀಯ ಸಂಸ್ಕೃತಿಯನ್ನು ಜೀವಂತವಾಗಿಡುವ ಆಸಕ್ತಿಯಿದೆ. ಪ್ರತಿಯೊಬ್ಬ ಹಿಂದೂ ಉಡುಗೆಯಲ್ಲಿ ಜ್ವಲಂತ ಸ್ವಾಭಿಮಾನವನ್ನು ಶಾಶ್ವತವಾಗಿಡಲು ಪ್ರಯತ್ನಿಸುತ್ತಾನೆ. ಹಾಗೆ ಅವನು ಪ್ರಯತ್ನಿಸಬೇಕು.
೩. ಭಾರತ ಸ್ವತಂತ್ರವಾದ ನಂತರ ಭಾರತೀಯತ್ವ ನಾಶವಾಗಿ ಪಾಶ್ಚಾತ್ಯ ವಿಚಾರಶೈಲಿ ಬೇರೂರುವುದು
ಎರಡನೆ ಮಹಾಯುದ್ಧ ಮುಗಿದ ನಂತರ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಆಗಿನಿಂದ ನಮ್ಮ ದೇಶದಲ್ಲಿ ಪಾಶ್ಚಾತ್ಯ, ಅಮೇರಿಕನ್ ವಿಚಾರಶೈಲಿಯ ಶ್ರದ್ಧೆ ಮತ್ತು ನಿಷ್ಠೆಯು ಬಹಳ ಹೆಚ್ಚಾಯಿತು. ಇದರಿಂದ ನಮ್ಮೆಲ್ಲ ಭಾರತೀಯರ ಜೀವನ ವರ್ಣಮಯವಾಯಿತು. ಎಲ್ಲ ಪ್ರಧಾನಮಂತ್ರಿಗಳು ಪಾಶ್ಚಾತ್ಯರ ಉಡುಗೆ-ತೊಡುಗೆಗಳನ್ನು ಧರಿಸುತ್ತಾರೆ. ಅವರ ಆಹಾರಪದ್ಧತಿ, ಉಡುಗೆತೊಡುಗೆ ಮತ್ತು ರೀತಿನೀತಿ ಎಲ್ಲವೂ ಪಾಶ್ಚಾತ್ಯ ಪದ್ಧತಿಯದ್ದಾಗಿದೆ. ಈಗ ಇನ್ನೆಲ್ಲಿಯ ಭಾರತೀಯತೆ ? ಎಂತಹ ಹಿಂದೂ ಸಂಸ್ಕೃತಿ ? ಸಾರಾಸಗಟಾಗಿ ಎಲ್ಲ ಪ್ರಧಾನಮಂತ್ರಿಗಳನ್ನು ಒಂದೇ ಸಾಲಿನಲ್ಲಿ ನಿಲ್ಲಿಸಬೇಡಿ. ಲಾಲಬಹದ್ದೂರ ಶಾಸ್ತ್ರಿಯವರನ್ನು ಸ್ಮರಿಸಿರಿ ! ಅವರು ಈಜಿಪ್ತ್‌ಗೆ ಹೋದಾಗ ಸ್ವತಃ ಅಡುಗೆಯನ್ನು ಮಾಡಿ ಊಟ ಮಾಡಿದರು.
೪. ಆಧುನಿಕತೆಯಿಂದ ನಾಶವಾದ ಆಚಾರಗಳು ಆಂಗ್ಲ ಭಾಷೆ ಬರುವುದು ಅಂದರೆ, ಆಧುನಿಕತೆ !
ಆಂಗ್ಲದಲ್ಲಿ ಸಂಭಾಷಣೆ ಮತ್ತು ಉಡುಗೆ-ತೊಡುಗೆ ಎಂದರೆ ಆಧುನಿಕತೆ ! ಇಂದಿನ ಆಧುನಿಕತೆಯೆಂದರೆ ಅದು ಪ್ರಗತಿಯ ಲಕ್ಷಣ ! ಇವೆಡಿಥಿಣಹಿಟಿಗ್ ಮೊಜಎಡಿಟಿ ಇಸ್ ಠಿಡಿಒಗ್ಡಿಎಸ್ಸಿವೆ (ಆಧುನಿಕವಾದುದೆಲ್ಲವೂ ಪ್ರಗತಿಶೀಲ.) ಮದ್ಯಪಾನ, ಔತಣ, ಬಾಲ್ ಡ್ಯಾನ್ಸೆಸ್ (ವಿಶಿಷ್ಟ ಪ್ರಕಾರದ ನೃತ್ಯ), ಅವಿವಾಹಿತ ಮಾತೆಯ ಪ್ರತಿಷ್ಠೆ, ನೋಂದಣೀಕೃತ ವಿವಾಹ ಹಾಗೂ ವಿಚ್ಛೇದನೆ ಇವೆಲ್ಲವೂ ಪ್ರಗತಿಪರರ ಲಕ್ಷಣವಾಗಿವೆ !
ಇಲ್ಲಿ ಸ್ತನಪಾನದಿಂದಲೇ ಆಂಗ್ಲ ನುಸುಳುತ್ತದೆ. ಇಲ್ಲಿ ‘ಅಮ್ಮಾ’ ಇದರಿಂದ ಆರಂಭವಾಗುವುದಿಲ್ಲ. ಮಗು ಮೊದಲ ಶಬ್ದ ‘ಮಮ್ಮಿ’ ಎಂದು ಉಚ್ಚರಿಸುತ್ತದೆ. ನಂತರ ‘ಪಪ್ಪಾ’ ! ಭಾರತದಲ್ಲಿನ ಆಂಗ್ಲಶಿಕ್ಷಿತ ಹಿಂದೂಗಳು ನಾಯಿಯೊಂದಿಗೂ ಆಂಗ್ಲದಲ್ಲಿಯೇ ಮಾತನಾಡುತ್ತಾರೆ. ಧೋತಿಯಂತೂ ಯಾವಾಗಲೋ ಹೋಗಿದೆ. ಈ ರೀತಿಯ ಬಹಳಷ್ಟು ಆಚಾರಗಳು ನಷ್ಟವಾಗುತ್ತಿವೆ. ಬ್ರಾಹ್ಮಣರ ಷಟ್ಕರ್ಮಗಳು ಹೋದವು. ಕ್ಷತ್ರೀಯ ವರ್ಣವೇ ಉಳಿದಿಲ್ಲ. ಆಂಗ್ಲದ ನೆರಳಿನಲ್ಲಿ ಹಿಂದೂಗಳಿಗೆ ಪಂಚಾಂಗದ ನೆನಪೇ ಉಳಿದಿಲ್ಲ. ಯಾವುದನ್ನು ನಿಷೇಧ ಮಾಡಬೇಕು ಗೊತ್ತಾಗುವುದಿಲ್ಲ.
೫. ಮುಸಲ್ಮಾನರ ಕಟ್ಟರತೆ; ಆದರೆ ಹಿಂದೂಗಳು ಅದನ್ನು ಹೊದಿಕೆಯಲ್ಲಿ ಸುತ್ತಿಟ್ಟಿದ್ದಾರೆ
ಮುಸಲ್ಮಾನರು ಅಮೇರಿಕಾ ಹಾಗೂ ಯುರೋಪ್‌ನಲ್ಲಿ ಹಂದಿಯ ಮಾಂಸವನ್ನು ತಿನ್ನುವುದಿಲ್ಲ. ಅದನ್ನು ಅವರು ಅಭಿಮಾನದಿಂದ ಹೇಳುತ್ತಾರೆ, ಆದರೆ ಹಿಂದೂ ಭಾರತದ ಗಡಿದಾಟಿದ ಕೂಡಲೇ ಬಹಿರಂಗವಾಗಿ ನಮಗೆ ಗೋಮಾಂಸದ ನಿಷೇಧವಿಲ್ಲ ಎಂದು ಹೇಳುತ್ತಾರೆ. ಹಾಗೆ ಹೇಳುವಾಗ ಅವರ ಎದೆ ಉಬ್ಬುತ್ತದೆ. ಬಿಳಿಯರ ಜೊತೆಗೆ ಬಾಯಿ ಚಪ್ಪರಿಸುತ್ತಾ ಗೋಮಾಂಸ ಸೇವಿಸುವಾಗ ಅವರಿಗೆ ಸ್ವರ್ಗಸುಖ ಸಿಗುತ್ತದೆ !
೬. ಆಧುನಿಕತೆಯಿಂದಾಗಿ ಭಾಷಾ ಸಂಸ್ಕೃತಿ ನಾಶ !
ಆಂಗ್ಲ ಶಿಕ್ಷಣದಿಂದ ವಿಶೇಷವಾಗಿ ಭಾಷೆಯಿಂದ ಸಂಸ್ಕೃತಿ ನಾಶವಾಯಿತು. ಭಾರತದಲ್ಲಿ ಎಲ್ಲಿ ಹೋದರೂ, ನಗರಗಳಲ್ಲಿ ಮಾತ್ರವಲ್ಲ, ಹಳ್ಳಿಗಳಲ್ಲಿನ ನೇಕಾರ, ಕ್ಷೌರಿಕ, ಅಗಸ ಮುಂತಾದವರ ಅಂಗಡಿಗಳ ಫಲಕಗಳು ಆಂಗ್ಲದಲ್ಲಿರುತ್ತವೆ. ‘ನೇಕಾರ’ ಎಂದು ಹೇಳಿಸಿಕೊಳ್ಳಲು ನಾಚಿಕೆಯಾಗುತ್ತದೆ; ಆದರೆ ‘Tailor’ (ಟೇಲರ್) ಎಂದು ಹೇಳಿಸಿಕೊಳ್ಳಲು ಗೌರವವೆನಿಸುತ್ತದೆ. ಹಾಗೆಯೆ ‘ಹೇರ್ ಕಟ್ಟಿಂಗ್ ಸಲೂನ್’ ಇತ್ಯಾದಿ ಹೆಸರನ್ನಿಡುವುದು ಸನ್ಮಾನವೆನಿಸುತ್ತದೆ. ನಮ್ಮ ಹಳೆಯ ಕಾಲದ ಶಾಸ್ತ್ರಿ-ಭಟಜೀ ಇವರು ಕೂಡ ನಡುನಡುವೆ ಆಂಗ್ಲ ಶಬ್ದಗಳನ್ನು ಉಚ್ಚರಿಸುತ್ತಾರೆ. ತಮ್ಮ ಆಧುನಿಕತೆಯನ್ನು ಅವರು ಆಂಗ್ಲದ ಮೂಲಕ ಜಗತ್ತಿಗೆ ತೋರಿಸಲು ಪ್ರಯತ್ನಿಸುತ್ತಾರೆ.
೭. ಆಂಗ್ಲದ ನುಸುಳುವಿಕೆ ಹಾಗೂ ಆಂಗ್ಲ ಸಂಸ್ಕೃತಿಯ ಅಂಧಾನುಕರಣೆ !
ಆಂಗ್ಲರು ನೂರೈವತ್ತು ವರ್ಷಗಳ ಕಾಲ ಭಾರತವನ್ನಾಳಿದರು. ಈಗ ಆಂಗ್ಲ ಭಾರತದ್ದೇ ಆಗಿದೆ. ಭಾಷೆ ಮತ್ತು ಸಂಸ್ಕೃತಿ ಇವುಗಳ ಅವಿಭಾಜ್ಯ ಸಂಬಂಧವಿರುತ್ತದೆ. ಸೂಜಿಯ ಹಿಂದೆ ನೂಲು (ದಾರ) ಹೋಗುತ್ತದೆ, ಹಾಗೆಯೇ ಆಂಗ್ಲ ಭಾಷೆಯ ಜೊತೆಗೆ ಆಂಗ್ಲ ಸಂಸ್ಕೃತಿ ನುಸುಳುತ್ತದೆ. ‘ಗುಡ್‌ಮಾರ್ನಿಂಗ್ (ಸುಪ್ರಭಾತ), ಶೇಕ್ ಹ್ಯಾಂಡ್ (ಹಸ್ತಲಾಘವ), ಥ್ಯಾಂಕ್ಯು (ಧನ್ಯವಾದ), ಇಂತಹ ರೂಢಿಗಳು ನಮ್ಮಲ್ಲಿ ನುಸುಳಿಕೊಂಡಿವೆ. ಆದ್ದರಿಂದ ನಮ್ಮ ಆಚಾರಗಳನ್ನು ನಾವು ಕಳೆದುಕೊಂಡಿದ್ದೇವೆ. ೨೫ ವರ್ಷಗಳ ಹಿಂದೆ ಭಾರತಕ್ಕೆ ಬಂದಿರುವ ಪಾಶ್ಚಾತ್ಯರು ನಮಗೆ ಕೈಜೋಡಿಸಿ ನಮಸ್ಕಾರ ಮಾಡುತ್ತಿದ್ದರು. ಇಂದು ನಾಯಿಗಳ ಹಾಗೆ ನಾವು ಹಸ್ತಲಾಘವಕ್ಕಾಗಿ ಕೈ ಮುಂದೆ ಮಾಡುತ್ತೇವೆ. ಹೊರಡುವಾಗ ಅವರು ‘ನಮಸ್ತೆ’ ಎನ್ನುತ್ತಾರೆ. ನಾವು ಹಿಂದೂಗಳು ಮಾತ್ರ ‘ಬಾಯ್ ಬಾಯ್’ ಎನ್ನುತ್ತೇವೆ ಅಥವಾ ‘ಟಾಟಾ’ ಮಾಡುತ್ತೇವೆ. ಪರಕೀಯರೊಂದಿಗೆ ಮಾತ್ರವಲ್ಲ, ನಾವು ಪರಸ್ಪರ ಕೂಡ ಹಾಗೆಯೇ ವರ್ತಿಸುತ್ತೇವೆ. ‘ಗುಡ್ ಮಾರ್ನಿಂಗ್’, ‘ಬ್ರೇಕ್‌ಫಾಸ್ಟ್’ (ಬೆಳಗ್ಗಿನ ತಿಂಡಿ), ‘ಲಂಚ್’ (ಮಧ್ಯಾಹ್ನದ ಊಟ), ‘ಡಿನ್ನರ್’ (ರಾತ್ರಿಯ ಊಟ)’ ಈ ಶಬ್ದಗಳು ಎಲ್ಲ ಸ್ತರದಲ್ಲಿ ರೂಢಿಯಾಗಿವೆ. ಕುಶಲೋಪರಿಯನ್ನು ಆಂಗ್ಲದಲ್ಲಿಯೇ ಕೇಳಲಾಗುತ್ತದೆ. ಪರಿಚಯವು ಆಂಗ್ಲದಿಂದ ಅಥವಾ ಪಾಶ್ಚಾತ್ಯ ಪದ್ಧತಿಯಲ್ಲಿ ಆಗುತ್ತದೆ. ವಿವಾಹದಂತಹ ಸಮಾರಂಭ ಆಧುನಿಕ ಪದ್ಧತಿಯ ಉಪಹಾರಗೃಹಗಳಲ್ಲಿ (ಹೋಟೇಲ್‌ಗಳಲ್ಲಿ) ನಡೆಯುತ್ತದೆ. ‘ಬಫೆ ಡಿನರ್’ನಂತಹ (ತಾವೇ ಊಟ ಬಡಿಸಿಕೊಳ್ಳುವ) ಪಾಶ್ಚಾತ್ಯ ಪದ್ಧತಿಯನ್ನು ಅನುಸರಿಸಲಾಗುತ್ತದೆ.
೮. ಯುವಪೀಳಿಗೆ ಕಾಮಪಿಪಾಸುಗಳಾಗಲು ಆಂಗ್ಲವೇ ಕಾರಣ !
ಇಂದು ಆಂಗ್ಲ ಶಾಲೆಗಳ ಯುವ ಪೀಳಿಗೆ, ವಿಶೇಷವಾಗಿ ಹುಡುಗಿಯರು ಲೈಂಗಿಕ ಸಂಬಂಧದ ವಿಷಯದಲ್ಲಿನ ಅಗ್ಗದಲ್ಲಿ ಸಿಗುವ ಅಮೇರಿಕನ್ ಕಾದಂಬರಿಗಳನ್ನು ಓದುತ್ತಾರೆ. ಆಂಗ್ಲದಿಂದ ‘ಖುಲ್ಲಮ್ ಖುಲ್ಲಾ’ ಎಲ್ಲ ಹೊಲಸನ್ನು ಉಗುಳಬಹುದು. ಆ ವಿಷಯವನ್ನು ಮಾತೃಭಾಷೆಯಲ್ಲಿ ಬರೆಯುವಾಗ ಸಂಕೋಚವಾಗುತ್ತದೆ. ನಮ್ಮ ಯುವಪೀಳಿಗೆಯನ್ನು ಅಮೇರಿಕಾದ ಪದ್ಧತಿಯಲ್ಲಿ ಕಾಮಪಿಪಾಸುಗಳನ್ನಾಗಿಸುವ ಕೆಲಸವನ್ನು ಆಂಗ್ಲ ಮಾಡಿದೆ.
೯. ಪಾಶ್ಚಾತ್ಯರ ಆಚಾರಗಳ ಭ್ರಷ್ಟ ಅನುಕರಣೆ
ಆಂಗ್ಲ ಭಾಷೆ ಬರುವುದರಿಂದ ನಮ್ಮ ಕೇಶಾಲಂಕಾರ ಹಾಗೂ ಉಡುಗೆ-ತೊಡುಗೆ ಆಂಗ್ಲವಾಯಿತು. ರೀತಿ-ನೀತಿಯೂ ಆಂಗ್ಲವಾಯಿತು. ಪಾಶ್ಚಾತ್ಯರ ಆಚಾರಗಳ ಭ್ರಷ್ಟ ನೀತಿಯನ್ನು ನಮ್ಮ ಹೊಸ ಪೀಳಿಗೆ ಅನುಸರಿಸುತ್ತಿದೆ.’
– ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿ (ಆಧಾರ : ಮಾಸಿಕ ‘ಘನಗರ್ಜಿತ’, ಏಪ್ರಿಲ್ ೨೦೨೧)