ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ಅಳಿಸಿ !

ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ನವ ದೆಹಲಿ – ಮಾಜಿ ರಾಜ್ಯಸಭಾ ಸಂಸದ ಡಾ. ಸುಬ್ರಹ್ಮಣ್ಯಂ ಸ್ವಾಮಿ ಮತ್ತು ವಕೀಲ ವಿಷ್ಣು ಶಂಕರ್ ಜೈನ್ ಅವರು ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ.

1. ಡಾ. ಸ್ವಾಮಿ ಇವರು ಅರ್ಜಿಯಲ್ಲಿ, ಪೀಠಿಕೆಯನ್ನು ತಿದ್ದುಪಡಿ ಮಾಡಲು ಅಥವಾ ಅಳಿಸಲು ಸಾಧ್ಯವಿಲ್ಲ. ಆದ್ದರಿಂದ ಅದರಲ್ಲಿ ಮಾಡಿರುವ ಒಂದೇ ತಿದ್ದುಪಡಿಯನ್ನು ಹಿಂಪಡೆಯಬೇಕು. ಪೀಠಿಕೆಯು ಸಂವಿಧಾನದ ಅಗತ್ಯ ಲಕ್ಷಣಗಳನ್ನು ಮಾತ್ರ ನೀಡುವುದಿಲ್ಲ, ಆದರೆ ಒಗ್ಗಟ್ಟಿನ ಸಮುದಾಯವನ್ನು ಸಿದ್ಧಪಡಿಸಲು ಅಳವಡಿಸಿಕೊಂಡ ಮೂಲಭೂತ ಷರತ್ತುಗಳನ್ನು ಸಹ ಹಾಕುತ್ತದೆ.

2. ಭಾರತೀಯ ಸಂವಿಧಾನದ ಪೀಠಿಕೆಯು ನಿಗದಿತ ದಿನಾಂಕದೊಂದಿಗೆ ಬರುತ್ತದೆ. ಹಾಗಾಗಿ ಚರ್ಚೆಯಿಲ್ಲದೆ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. 42ನೇ ಸಾಂವಿಧಾನಿಕ ತಿದ್ದುಪಡಿ ಕಾಯಿದೆಯನ್ನು ತುರ್ತು ಪರಿಸ್ಥಿತಿಯ (1975-77) ಅವಧಿಯಲ್ಲಿ ಅಂಗೀಕರಿಸಲಾಯಿತು ಎಂದು ವಕೀಲ ವಿಷ್ಣು ಶಂಕರ್ ಜೈನ್ ಹೇಳಿದರು.

ಶೈಕ್ಷಣಿಕ ಉದ್ದೇಶಗಳಿಗಾಗಿ ಬದಲಾಯಿಸಬಹುದು ! – ನ್ಯಾಯಾಲಯ

ವಿಚಾರಣೆ ವೇಳೆ ನ್ಯಾಯಮೂರ್ತಿ ದತ್ತಾ ಇವರು ಮಾತನಾಡುತ್ತಾ, ದಿನಾಂಕದ ಉಲ್ಲೇಖವನ್ನು ಬದಲಾಯಿಸದೆ ಶೈಕ್ಷಣಿಕ ಉದ್ದೇಶಗಳಿಗಾಗಿ ಸಂವಿಧಾನದ ಪೀಠಿಕೆಯನ್ನು ತಿದ್ದುಪಡಿ ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದರು.
ಇದು ಬಹುಶಃ ದಿನಾಂಕದೊಂದಿಗೆ ಬಂದಿರುವ ಮುನ್ನುಡಿಯನ್ನು ನಾನು ನೋಡಿದ್ದೇನೆ. ಸಂವಿಧಾನವನ್ನು ಅಂಗೀಕರಿಸಿದಾಗ, ಮೂಲತಃ ಈ ಎರಡು ಪದಗಳು (ಸಮಾಜವಾದಿ ಮತ್ತು ಜಾತ್ಯತೀತ) ಅದರಲ್ಲಿ ಇರಲಿಲ್ಲ.

ಎರಡೂ ಪದಗಳನ್ನು ತುರ್ತು ಪರಿಸ್ಥಿತಿಯ ಸಮಯದಲ್ಲಿ ಅಳವಡಿಸಲಾಯಿತು !

1976 ರಲ್ಲಿ ಇಂದಿರಾ ಗಾಂಧಿ ಸರಕಾರವು 42 ನೇ ತಿದ್ದುಪಡಿಯ ಅಡಿಯಲ್ಲಿ ಸಂವಿಧಾನದ ಪೀಠಿಕೆಯಲ್ಲಿ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ಸೇರಿಸಿತು. ಈ ತಿದ್ದುಪಡಿಯು ಮುನ್ನುಡಿಯಲ್ಲಿನ ಭಾರತದ ವಿವರಣೆಯನ್ನು ‘ಸಾರ್ವಭೌಮ, ಪ್ರಜಾಪ್ರಭುತ್ವ ಗಣರಾಜ್ಯ’ದಿಂದ ‘ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ’ ಎಂದು ಬದಲಾಯಿಸಿತು.