|
ಬರೇಲಿ (ಉತ್ತರ ಪ್ರದೇಶ) – ಇಲ್ಲಿ ನಮಾಜ ಪಠಣದ ಬಳಿಕ ಮುಸಲ್ಮಾನರ ಸಮೂಹವು ಹಿಂಸಾಚಾರ ನಡೆಸಿತು. ಉತ್ತರ ಪ್ರದೇಶದಲ್ಲಿ ಅಕ್ರಮ ಮಸೀದಿಗಳು, ಮದರಸಾಗಳು ಮತ್ತು ಮುಸ್ಲಿಮರ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಅದಕ್ಕೆ `ಇಂಡಿಯನ್ ಮುಸ್ಲಿಂ ಕೌನ್ಸಿಲ್‘ನ (ಐ.ಎಂ.ಸಿ.ಯ) ಮುಖ್ಯಸ್ಥ ಮೌಲಾನಾ (ಇಸ್ಲಾಂ ಧರ್ಮದ ಅಭ್ಯಾಸಕ) ತೌಕೀರ್ ರಝಾ ಕಳೆದ ಕೆಲವು ದಿನಗಳಿಂದ ವಿರೋಧಿಸುತ್ತಿದ್ದಾನೆ. ನಮಾಜ ಪಠಣದ ಸಮಯದಲ್ಲಿ ಅವನು ನೀಡಿದ ಕರೆಯ ಬಳಿಕ ಸಮೂಹವು ಹಿಂಸಾಚಾರ ನಡೆಸಿತು. ಈ ಸಮಯದಲ್ಲಿ ಇಬ್ಬರು ಹಿಂದೂ ಯುವಕರನ್ನು ಹಿಡಿದು ಅವರಿಗೆ ಹಿಗ್ಗಾ ಮುಗ್ಗಾ ಥಳಿಸಿದರು. ಅವರ ದ್ವಿಚಕ್ರವಾಹನವನ್ನು ಹಾನಿಗೊಳಿಸಿದರು. ಈ ಹಿಂಸಾಚಾರದ ಬಳಿಕ ಮೌಲಾನಾ ತೌಕೀರ ರಝಾನನ್ನು ಬಿಹಾರಿಪೂರ ಪೊಲೀಸ ಚೌಕಿಯ ಹತ್ತಿರ ಬಂಧಿಸಲಾಯಿತು. ಮತ್ತು ಬಿಡುಗಡೆ ಮಾಡಲಾಯಿತು. (ರಝಾ ಮೇಲಿಂದ ಮೇಲೆ ಪ್ರಚೋದನಾಕಾರಿ ಭಾಷಣಗಳನ್ನು ಮಾಡುತ್ತಿದ್ದಾರೆ; ಆದರೆ ಅವರ ಮೇಲೆ ಕಠಿಣ ಕ್ರಮ ನಡೆಯದೇ ಇರುವುದರಿಂದ ಅವನು ಉದ್ಧಟನಾಗಿದ್ದಾನೆ – ಸಂಪಾದಕರು)
(ಸೌಜನ್ಯ – News India)
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಮೌಲಾನಾ ತೌಕಿರ್ ರಝಾ ಮತ್ತಷ್ಟು ಆಕ್ರೋಶಗೊಂಡಿದ್ದಾನೆ. ಈ ಪರಿಸ್ಥಿತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಪುಷ್ಕರ್ ಸಿಂಹ ಧಾಮಿಯೇ ಹೊಣೆ ಎಂದು ಆರೋಪಿಸಿದನು. ಉತ್ತರಾಖಂಡದಲ್ಲಿಯೂ ಮುಸ್ಲಿಮರ ಅನಧಿಕೃತ ಕಟ್ಟಡಗಳ ಮೇಲೆ ಬುಲ್ಡೋಜರ್‌ಗಳನ್ನು ನಡೆಸಲಾಗುತ್ತಿದೆ. ಈ ಕಾರ್ಯಾಚರಣೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿದನು. ರಝಾ ಮಾತನಾಡಿ, `ಈಗ ಯಾವುದೇ ಬುಲ್ಡೋಝರ ಸಹಿಸಲಾಗುವುದಿಲ್ಲ, ನ್ಯಾಯಾಲಯವು ಹಸ್ತಕ್ಷೇಪ ಮಾಡದಿದ್ದರೇ ನಾವು ನಮ್ಮನ್ನು ಸಂರಕ್ಷಿಸಿಕೊಳ್ಳುತ್ತೇವೆ. ನಮ್ಮ ಮೇಲೆ ದಾಳಿ ಮಾಡುವವರನ್ನು ಕೊಲ್ಲುವ ಕಾನೂನುಬದ್ಧ ಹಕ್ಕು ನಮಗಿದೆ.’ ಎಂದು ಹೇಳಿದನು.
ಸಂಪಾದಕೀಯ ನಿಲುವುಪ್ರಚೋದನಾತ್ಮಕ ಭಾಷಣಗಳನ್ನು ಮಾಡಿ ಹಿಂಸಾಚಾರವನ್ನು ಪ್ರಚೋದಿಸುವ ರಝಾನಂತಹ ಮತಾಂಧನನ್ನು ಜೈಲಿಗೆ ಕಳುಹಿಸಲು ಸರಕಾರ ಹೆಜ್ಜೆಯನ್ನಿಡಬೇಕು ಎಂದೇ ಜನತೆಗೆ ಅನಿಸುತ್ತದೆ ! |