|
ಹಲ್ದ್ವಾನಿ (ಉತ್ತರಾಖಂಡ) – ಹಲ್ದ್ವಾನಿಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಸಮಾಜವಾದಿ ಪಕ್ಷದ ನಾಯಕ ಮತೀನ್ ಸಿದ್ದಿಕಿ ಅವರ ಸಹೋದರ ಜಾವೇದ್ ಸಿದ್ದಿಕಿ ಅವರನ್ನು ಬಂಧಿಸಲಾಗಿದೆ. ಅಬ್ದುಲ್ ಮಲಿಕ್ ಈ ಹಿಂಸಾಚಾರದ ಪ್ರಮುಖ ಸೂತ್ರಧಾರ ಎಂದು ತನಿಖೆಯಿಂದ ತಿಳಿದುಬಂದಿದೆ. ಆಡಳಿತ ಅಧಿಕಾರಿಗಳು ಕೆಡವಲು ಹೋದ ಮದರಸಾ ಅಬ್ದುಲ್ ಅವರಿಗೆ ಸೇರಿದ್ದು ಇತ್ತು. ಇದರೊಂದಿಗೆ ಸಮಾಜವಾದಿ ಪಕ್ಷದ ಇತರ ಕೆಲ ನಾಯಕರ ಹೆಸರುಗಳೂ ಕೇಳಿ ಬಂದಿವೆ. ಅವರಲ್ಲಿ ಒಬ್ಬರು ಅರ್ಷದ್ ಅಯೂಬ್. ಬಂಭುಲ್ಪುರದ ಕಾರ್ಪೊರೇಟರ್ ಜೀಶನ್ ಪರ್ವೇಜ್ ಕೂಡ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ.
1. ಹಲ್ದ್ವಾನಿಯಲ್ಲಿ ಕರ್ಫ್ಯೂ ತೆರವು; ಆದರೆ, ಹಿಂಸಾಚಾರ ನಡೆದ ಬಂಭುಲ್ಪುರದಲ್ಲಿ ಕರ್ಫ್ಯೂ ಇನ್ನೂ ಜಾರಿಯಲ್ಲಿದೆ.
2. ಸಿಸಿಟಿವಿ ಮೂಲಕ ಗಲಭೆಕೋರರನ್ನು ಗುರುತಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಡ್ರೋನ್‌ಗಳ ಮೂಲಕ ನಿಗಾ ಇರಿಸಲಾಗಿದೆ. ಪರಿಸ್ಥಿತಿ ನಿಭಾಯಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
3. ದಂಗೆಕೋರ ಮತಾಂಧ ಮುಸ್ಲಿಮರು ಅಕ್ರಮ ಶಸ್ತ್ರಾಸ್ತ್ರಗಳೊಂದಿಗೆ ಬೀದಿಗಿಳಿದು ಹಲವಾರು ಅಮಾಯಕರನ್ನು ಕೊಂದಿದ್ದಾರೆ ಎಂದು ವರದಿಯಾಗಿದೆ.
Update on the #HaldwaniViolence (Uttarakhand).
Samajwadi Party leader’s brother Javed Siddiqui arrested
A few other Samajwadi Party leaders had also participated in the violence.
👉 Samajwadi Party is another Mu$|!m League, Hindus should demand to ban it.
👉 Where are all… pic.twitter.com/E8FzblBMOv
— Sanatan Prabhat (@SanatanPrabhat) February 10, 2024
ಹತ್ಯೆಯಾದವರಲ್ಲಿ ಇಬ್ಬರು ಹಿಂದೂಗಳೂ
ಹಲ್ದ್ವಾನಿ ಹಿಂಸಾಚಾರದಲ್ಲಿ ಮೃತಪಟ್ಟವರಲ್ಲಿ ಇಬ್ಬರು ಹಿಂದೂಗಳು ಸೇರಿದ್ದಾರೆ. ಒಬ್ಬರ ಹೆಸರು ಅಜಯ್ ಮತ್ತೊಬ್ಬರ ಹೆಸರು ಪ್ರಕಾಶ್ ಕುಮಾರ್. ಇಬ್ಬರನ್ನೂ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಪ್ರಕಾಶ್ ಅವರನ್ನು ಕೊಂದು ಶವವನ್ನು ರೈಲು ಹಳಿ ಮೇಲೆ ಎಸೆದಿದ್ದಾರೆ. ಅಜಯ್ ಔಷಧಿ ಸೇವಿಸಲು ಮನೆಯಿಂದ ಹೊರಗೆ ಹೋದಾಗ ಗುಂಡು ಹಾರಿಸಿದ್ದಾರೆ. ಅವರಿಬ್ಬರಿಗೂ ಪೊಲೀಸರ ಗುಂಡು ತಾಗಿದೆ ಎಂದು ಹೇಳಲಾಗುತ್ತದೆ; ಆದರೆ ಪೊಲೀಸರು ಗುಂಡು ಹಾರಿಸಿಲ್ಲ ಎಂಬುದು ಬಹಿರಂಗವಾಗುತ್ತಿದ್ದಂತೆ ‘ಮತಾಂಧ ಮುಸ್ಲಿಮರ ಗುಂಡಿಗೆ ಇವರಿಬ್ಬರು ಸಾವನ್ನಪ್ಪಿದ್ದಾರೆ’ ಎಂದು ಹೇಳಲಾಗುತ್ತಿದೆ.
ಗಲಭೆಕೋರರು ಕಾಡಿನಲ್ಲಿ ಅಡಗಿ ಕುಳಿತಿರುವ ಮಾಹಿತಿ
ಪೊಲೀಸರು ಗಲಭೆಕೋರರಿಗಾಗಿ ಹುಡುಕಾಟ ಆರಂಭಿಸಿದ ನಂತರ ಗಲಭೆಕೋರರು ಕಾಡಿನಲ್ಲಿ ಅಡಗಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಡಾನೆಗಳ ಮೇಲೆ ಗಸ್ತು ತಿರುಗಲು ಮುಂದಾಗಿದೆ. ಅರಣ್ಯ ಪ್ರದೇಶವನ್ನು ರಕ್ಷಿಸಲು ಮತ್ತು ಶಂಕಿತರ ಒಳನುಸುಳುವಿಕೆಯನ್ನು ತಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿ ಗೌಲಾ ಚಂದನ್ ಅಧಿಕಾರಿ ಹೇಳಿದರು.
ಸಂಪಾದಕೀಯ ನಿಲುವು
|