ನವದೆಹಲಿ : ಲೋಕಸಭೆ ಚುನಾವಣೆಗೂ ಮುನ್ನ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ ಇವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದು, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದರು.
ರಾಹುಲ್ ಗಾಂಧಿಗೆ ಟಾರ್ಗೆಟ್ !
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಗೆ ಸಂಬಂಧಿಸಿದಂತೆ ಅಮಿತ್ ಶಾ ಅವರು ಮಾತನಾಡಿ, ನೆಹರೂ-ಗಾಂಧಿ ಕುಟುಂಬದ ವಂಶಸ್ಥರಿಗೆ ಇಂತಹ ಮೆರವಣಿಗೆ ನಡೆಸುವ ಹಕ್ಕು ಇಲ್ಲ; ಏಕೆಂದರೆ 1947ರಲ್ಲಿ ನಡೆದ ದೇಶ ವಿಭಜನೆಗೆ ಅವರ ಪಕ್ಷವೇ ಕಾರಣವಾಗಿತ್ತು.
ಕಾಂಗ್ರೆಸ್ ನೇತೃತ್ವದ ಸರಕಾರದ ಕುಕೃತ್ಯಗಳನ್ನು ಅರಿಯಲು ಶ್ವೇತಪತ್ರ ಅಗತ್ಯ ! – ಅಮಿತ ಶಾಹ
ಸಂಸತ್ತಿನಲ್ಲಿ ಭಾರತ ಸರಕಾರ ಸಲ್ಲಿಸಿದ ಶ್ವೇತಪತ್ರದ ಕುರಿತು ಅಮಿತ್ ಶಾ ಅವರು ಮಾತನಾಡಿ, 2014 ರಲ್ಲಿ ಅಧಿಕಾರ ಕಳೆದುಕೊಳ್ಳುವ ಮೊದಲು ಕಾಂಗ್ರೆಸ್ ನೇತೃತ್ವದ ಸಂಯುಕ್ರ ಪ್ರಗತಿಪರ ಮೌತ್ರಿಯು ಮಾಡಿದ ದುಷ್ಕೃತ್ಯಗಳನ್ನು ತಿಳಿದುಕೊಳ್ಳುವ ಎಲ್ಲ ಹಕ್ಕು ದೇಶಕ್ಕೆ ಇದೆ ಎಂದು ಹೇಳಿದ್ದಾರೆ. 10 ವರ್ಷಗಳ ನಂತರ ನಮ್ಮ ಸರಕಾರ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಿದೆ. ವಿದೇಶಿ ಬಂಡವಾಳ ಬಂದಿದ್ದು, ಭ್ರಷ್ಟಾಚಾರ ನಡೆದಿಲ್ಲ. ಹೀಗಾಗಿ ಶ್ವೇತಪತ್ರ ಬಿಡುಗಡೆಗೆ ಇದು ಸೂಕ್ತ ಸಮಯವಾಗಿದೆ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು ಎಂಬುದು 500 ವರ್ಷಗಳ ದೇಶದ ಜನರ ಆಶಯವಾಗಿತ್ತು !
ಅಯೋಧ್ಯೆಯ ಶ್ರೀರಾಮ ಮಂದಿರದ ಸೂತ್ರದ ಕುರಿತು ಮಾತನಾಡಿದ ಅಮಿತ್ ಶಾ, 500-550 ವರ್ಷಗಳಿಂದ ಭಗವಾನ್ ಶ್ರೀರಾಮ ಜನಿಸಿದ ಸ್ಥಳದಲ್ಲಿ ಮಂದಿರ ನಿರ್ಮಾಣವಾಗಬೇಕೆಂದು ದೇಶದ ಜನರು ಬಯಸಿದ್ದರು. ಇತರ ಪಕ್ಷಗಳು ಅಧಿಕಾರದಲ್ಲಿದ್ದಾಗ, ತುಷ್ಟೀಕರಣ ಮತ್ತು ಕಾನೂನು ಸುವ್ಯವಸ್ಥೆಯ ರಾಜಕೀಯವನ್ನು ಉಲ್ಲೇಖಿಸಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಲಿಲ್ಲ ಎಂದು ಹೇಳಿದರು.