ಹಲ್ದ್ವಾನಿ (ಉತ್ತರಾಖಂಡ)ದಲ್ಲಿ ಮದರಸಾದ ಮೇಲಿನ ಕ್ರಮವನ್ನು ವಿರೋಧಿಸುತ್ತಾ ಮತಾಂಧರಿಂದ ಹಿಂಸಾಚಾರ !

  • ಪೊಲೀಸ್ ಠಾಣೆಯಲ್ಲೇ ಪೊಲೀಸರನ್ನು ಜೀವಂತ ಸುಡುವ ಯತ್ನ!

  • ಹಿಂಸಾಚಾರದಲ್ಲಿ ಇದುವರೆಗೆ 5 ಮುಸ್ಲಿಮರ ಸಾವು

  • 100ಕ್ಕೂ ಹೆಚ್ಚು ಪೊಲೀಸರಿಗೆ ಗಾಯ!

  • ಹಲವು ಪೊಲೀಸ್ ವಾಹನಗಳಿಗೆ ಬೆಂಕಿ!

  • ಗಲಭೆಕೋರು ಕಂಡಲ್ಲಿ ಗುಂಡು ಆದೇಶ

  • ದಾಳಿಗೆ ಕಲ್ಲು, ಪೆಟ್ರೋಲ್ ಬಾಂಬ್ ಮತ್ತು ಬಂದೂಕುಗಳ ಬಳಕೆ

ಹಲ್ದ್ವಾನಿ (ಉತ್ತರಾಖಂಡ) – ಉಚ್ಚ ನ್ಯಾಯಾಲಯದ ಆದೇಶದ ನಂತರ ಇಲ್ಲಿನ ಮಲಿಕಾ ಬಗಿಚ್ ಪ್ರದೇಶದಲ್ಲಿ ಫೆಬ್ರವರಿ 8 ರಂದು ಅಕ್ರಮ ಮದರಸಾವನ್ನು ಕೆಡವಲು ಹೋದ ಆಡಳಿತ ಮತ್ತು ಪೊಲೀಸರ ಮೇಲೆ ಸ್ಥಳೀಯ ಮತಾಂಧ ಮುಸ್ಲಿಮರು ದಾಳಿ ನಡೆಸಿದರು. ನಂತರ ಬಂಭುಲ್‌ಪುರ ಪೊಲೀಸ್ ಠಾಣೆ ಮೇಲೂ ದಾಳಿ ನಡೆಸಲಾಗಿದೆ. ಎಲ್ಲಾ ಕಡೆಯಿಂದ ಸುತ್ತುವರಿದ ನಂತರ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ದಾಳಿ ನಡೆಸಲು ಕಲ್ಲು, ಪೆಟ್ರೋಲ್ ಬಾಂಬ್, ಬಂದೂಕುಗಳನ್ನೂ ಬಳಸಲಾಗಿದೆ. ಈ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 5 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ತಂದೆ ಮತ್ತು ಮಗ ಜಾನಿ ಮತ್ತು ಅನಸ್, ಎರಿಸ್, ಇಸ್ರಾರ್ ಮತ್ತು ಶಿವನ್ ಸೇರಿದ್ದಾರೆ. ಅಲ್ಲದೆ, 100ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಅವರಲ್ಲಿ ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿಂಸಾಚಾರ ನಡೆಸುವವರು ಕಂಡಾಗ ಗುಂಡು ಹಾರಿಸುವಂತೆ ಆದೇಶಿಸಲಾಗಿದೆ.

ಯೋಜಿತ ದಾಳಿ ! – ಜಿಲ್ಲಾಧಿಕಾರಿ ವಂದನಾ ಸಿಂಗ್

ಹಲ್ದ್ವಾನಿ ಜಿಲ್ಲಾಧಿಕಾರಿ ವಂದನಾ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮದರಸಾ ವಿರುದ್ಧ ಕ್ರಮಕ್ಕಾಗಿ ಉತ್ತರಾಖಂಡ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ ಮತ್ತು ನಾವು ಆಡಳಿತಾತ್ಮಕ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದೇವು. ಈ ಬಗ್ಗೆ ಇಲ್ಲಿನ ನಾಗರಿಕರಿಗೆ ಮಾಹಿತಿ ಇತ್ತು, ಈ ಕ್ರಮವನ್ನು ವಿರೋಧಿಸಲು ಮೊದಲೇ ಮೇಲ್ಛಾವಣಿಯ ಮೇಲೆ ಕಲ್ಲುಗಳನ್ನು ಕೂಡಿಸಿ, ಪೆಟ್ರೋಲ್ ಬಾಂಬ್ ತಯಾರಿಸಿದ್ದರು ಎಂಬುದು ಈಗ ತಿಳಿದು ಬಂದಿದೆ. ಜನವರಿ 30ರವರೆಗೆ ಅಂತಹ ಪರಿಸ್ಥಿತಿ ಇರಲಿಲ್ಲ ಎಂದು ಹೇಳಿದರು.

ಹಿಂಸಾಚಾರದ ಘಟನಾವಳಿ

1. ಉತ್ತರಾಖಂಡ ಹೈಕೋರ್ಟ್‌ನ ಆದೇಶದ ಮೇರೆಗೆ ಆಡಳಿತ ಸಿಬ್ಬಂದಿ, ಅಧಿಕಾರಿಗಳು ಮತ್ತು ಪೊಲೀಸರು ಅಕ್ರಮ ಮದರಸಾವನ್ನು ಕೆಡವಲು ತೆರಳಿದ್ದರು. ಆಗ ಸ್ಥಳೀಯ ಮುಸ್ಲಿಂ ಮಹಿಳೆಯರು ಅವರನ್ನು ವಿರೋಧಿಸಲು ಆರಂಭಿಸಿದರು. ಇದರ ನಂತರ, ಇಲ್ಲಿನ ಮುಸ್ಲಿಮರು ತಮ್ಮ ಮನೆಗಳ ಮೇಲ್ಛಾವಣಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಮತ್ತು ಆಡಳಿತ ಸಿಬ್ಬಂದಿ ಮೇಲೆ ಕಲ್ಲು ತೂರಾಟವನ್ನು ಪ್ರಾರಂಭಿಸಿದರು.

ನಮ್ಮನ್ನು ಸುಡುವ ಪ್ರಯತ್ನ ಮಾಡಲಾಯಿತು ! – ಮಹಿಳಾ ಪೊಲೀಸ್

ಮಹಿಳಾ ಪೊಲೀಸರು, ಹಿಂಸಾಚಾರದ ನಂತರ ನಾವು 15 ರಿಂದ 20 ಜನರು ಹೊರಬರಲು ಮನೆಗೆ ಪ್ರವೇಶಿಸಿದೆವು. ಜನರು ಮನೆಯ ಮೇಲೆ ಕಲ್ಲು, ಬಾಟಲಿಗಳನ್ನು ಎಸೆದರು. ಬೆಂಕಿ ಹಚ್ಚಲು ಯತ್ನಿಸಿದರು. ರಸ್ತೆಗಳು ಮತ್ತು ಮನೆಗಳ ಮೇಲ್ಛಾವಣಿಯ ಮೇಲೆ ಎಲ್ಲೆಂದರಲ್ಲಿ ಕಲ್ಲು ತೂರಲಾಯಿತು. ನಾವು ಎಲ್ಲಿದ್ದೇವೆ ಎಂದು ಕೇಂದ್ರ ಕಚೇರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ ನಂತರ ಪೊಲೀಸರು ಬಂದು ನಮ್ಮನ್ನು ಹೊರಗೆ ಕರೆದೊಯ್ದರು.

ಕಠಿಣ ಕ್ರಮ ಕೈಗೊಳ್ಳಲಾಗುವುದು ! – ಮುಖ್ಯಮಂತ್ರಿ ಧಾಮಿ

ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಇವರು, ವಿಧ್ವಂಸಕ ಕೃತ್ಯ ಮತ್ತು ಹಿಂಸಾಚಾರ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ. (ಇದನ್ನು ಮಾಡಲೇ ಬೇಕು. ಇದಕ್ಕೆ ವ್ಯತಿರಿಕ್ತವಾಗಿ ಮತಾಂಧ ಮುಸಲ್ಮಾನರು ಮತ್ತೆ ಇಂತಹ ಹಿಂಸಾಚಾರಕ್ಕೆ ಮುಂದಾಗದಂತೆ ಹದ್ದುಬಸ್ತಿನಲ್ಲಿಡಲು ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು)

ಸಮಾನ ನಾಗರಿಕ ಕಾನೂನು ವಿರೋಧಿಸಿ ಪ್ರಚೋದನೆ ನೀಡಿದ್ದರಿಂದ ಹಿಂಸಾಚಾರಕ್ಕೆ ಕಾರಣ !

ಉತ್ತರಾಖಂಡದಲ್ಲಿ ಘಟನೆ ನಡೆಯುವ ಒಂದು ದಿನ ಮೊದಲು ವಿಧಾನಸಭೆಯಲ್ಲಿ ಸಮಾನ ನಾಗರಿಕ ಕಾನೂನನ್ನು ಅಂಗೀಕರಿಸಲಾಗಿತ್ತು. ಈ ಕಾನೂನನ್ನು ಮುಸ್ಲಿಮರು ಬಲವಾಗಿ ವಿರೋಧಿಸಿದ್ದಾರೆ.

ಸಂಪಾದಕೀಯ ನಿಲುವು

ಉತ್ತರಾಖಂಡದಲ್ಲಿ ಬಿಜೆಪಿ ಸರಕಾರ ಇರುವಾಗಲೇ ಈ ಪರಿಸ್ಥಿತಿ, ಅಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಇತ್ಯಾದಿಗಳ ಸರಕಾರ ಇದ್ದರೆ ಮತಾಂಧ ಮುಸ್ಲಿಮರು ಪೊಲೀಸರನ್ನು ಮತ್ತು ಹಿಂದೂಗಳನ್ನು ಕೊಲ್ಲುವುದರಲ್ಲಿ ಅನುಮಾನವಿಲ್ಲ !

ಉತ್ತರಾಖಂಡದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸರಕಾರಿ ಭೂಮಿಯಲ್ಲಿ ಮುಸ್ಲಿಮರು ಗೋರಿಗಳು ಮತ್ತು ಇತರ ಅಕ್ರಮ ನಿರ್ಮಾಣಗಳನ್ನು ಕೆಡವಲಾಗುತ್ತಿದೆ; ಆದರೆ ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾದ ಹಲ್ದ್ವಾನಿಯಲ್ಲಿ ಕ್ರಮ ತೆಗೆದುಕೊಳ್ಳಲು ಪ್ರಯತ್ನಿಸಿದ ನಂತರ, ಮತಾಂಧರು ದಾಳಿ ಮಾಡಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !