ಬ್ರಿಟನ್‌ನ ಶಾಲೆಗಳಲ್ಲಿ ಏಪ್ರಿಲ್‌ನಿಂದ ಭಾರತದ ವಿವಿಧ ಧರ್ಮಗಳ ಶಿಕ್ಷಣ !

ಹಿಂದೂ, ಜೈನ, ಶಿಖ್ ಮತ್ತು ಬೌದ್ಧ ಧರ್ಮಗಳ ಶಿಕ್ಷಣ ನೀಡಲಾಗುವುದು !

ಲಂಡನ್ (ಬ್ರಿಟನ್) – ಏಪ್ರಿಲ್‌ನಿಂದ ಪ್ರಾರಂಭವಾಗಲಿರುವ ಶೈಕ್ಷಣಿಕ ವರ್ಷದಿಂದ ಬ್ರಿಟನ್‌ನ ಶಾಲೆಗಳಲ್ಲಿ ಮೊದಲ ಬಾರಿಗೆ ನಾಲ್ಕನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಭಾರತದ ವಿವಿಧ ಧರ್ಮಗಳ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಸೇರಿಸಲಾಗುವುದು. ಪ್ರಧಾನಿ ಋಷಿ ಸುನಕ್ ಅವರು ಈ ಸಂಬಂಧದಲ್ಲಿ ಸೂಚನೆ ನೀಡಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಹಿಂದೂ, ಜೈನ, ಶಿಖ್ ಮತ್ತು ಬೌದ್ಧ ಧರ್ಮಗಳ ಶಿಕ್ಷಣ ನೀಡಲಾಗುವುದು. ಬ್ರಿಟನ್‌ನಲ್ಲಿ ಧಾರ್ಮಿಕ ಶಿಕ್ಷಣ 10ನೇ ತರಗತಿವರೆಗೆ ಕಡ್ಡಾಯವಾಗಿದೆ. ಪ್ರಸ್ತುತ ಕ್ರಿಶ್ಚಿಯನ್ ಧರ್ಮದ ಶಿಕ್ಷಣವನ್ನು ಮಾತ್ರ ನೀಡಲಾಗುತ್ತದೆ. (ಬ್ರಿಟನ್‌ನಲ್ಲಿ ಪ್ರಜಾಪ್ರಭುತ್ವವಿದೆ ಮತ್ತು ಅದು ಜಾತ್ಯತೀತ ರಾಷ್ಟ್ರವಾಗಿದ್ದರೂ ಸಹ ಅಲ್ಲಿನ ಶಾಲೆಗಳಲ್ಲಿ ಕ್ರಿಶ್ಚಿಯನ್ ಧರ್ಮದ ಶಿಕ್ಷಣವನ್ನು ನೀಡಲಾಗುತ್ತದೆ ಎಂಬುದನ್ನು ಗಮನಿಸಿ ! ಜೊತೆಗೆ, ಜನಸಂಖ್ಯೆಯಲ್ಲಿ ಹೆಚ್ಚಿನವರು ಕ್ರೈಸ್ತರಿಲ್ಲದಿದ್ದರೂ ಸಹ. ಬ್ರಿಟನ್ ಹೀಗೆ ಮಾಡಬಹುದಾದರೆ, ‘ಭಾರತದಲ್ಲಿ ಹಿಂದೂಗಳಿಗೆ ಧರ್ಮಶಿಕ್ಷಣವನ್ನು ಈವರೆಗೆ ಏಕೆ ನೀಡಲಾಗಿಲ್ಲ ?’, ಎಂಬ ಪ್ರಶ್ನೆಯನ್ನು ಹಿಂದೂಗಳು ಈಗ ಕೇಳುವುದು ಅಗತ್ಯವಾಗಿದೆ ! – ಸಂಪಾದಕರು) ಬ್ರಿಟನ್‌ನಲ್ಲಿರುವ ಭಾರತೀಯ ಕುಟುಂಬಗಳು ಮತ್ತು ಇತರ ಸಂಘಟನೆಗಳು ಹಲವಾರು ವರ್ಷಗಳಿಂದ ಧಾರ್ಮಿಕ ಶಿಕ್ಷಣದ ಬೇಡಿಕೆ ಇತ್ತು.

1. ಸರಕಾರದ ಈ ನಿರ್ಧಾರದಿಂದಾಗಿ 88 ಲಕ್ಷ ಶ್ವೇತವರ್ಣಿಯರು ಮತ್ತು ಇತರೆ ಜನಾಂಗದವರು ಹಾಗೂ 82 ಸಾವಿರ ಭಾರತೀಯ ಮೂಲದ ವಿದ್ಯಾರ್ಥಿಗಳಿಗೆ ಭಾರತೀಯ ಧರ್ಮದ ಶಿಕ್ಷಣ ಸಿಗಲಿದೆ. ಈ ಸಂದರ್ಭದಲ್ಲಿ ಬ್ರಿಟನ್ ಸಂಸತ್ತು ಸರ್ವಾನುಮತದ ಒಪ್ಪಿಗೆ ನೀಡಿದೆ. ಈ ಮೂಲಕ ಶಿಕ್ಷಕರಿಗೆ ತರಬೇತಿ ನೀಡಲಾಗುವುದು. ಸರಕಾರವು ಭಾರತೀಯ ಧಾರ್ಮಿಕ ಶಿಕ್ಷಣಕ್ಕಾಗಿ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿದೆ.

2. ಇಲ್ಲಿಯವರೆಗೆ ಬ್ರಿಟನ್‌ನಲ್ಲಿ, ವಿಶ್ವ ಹಿಂದೂ ಪರಿಷತ್ ಯುಕೆ ಮತ್ತು ವೈದಿಕ ಶಿಕ್ಷಣ ಸಂಘಟನೆ (ವಾಯ್ಸ) ನಂತಹ ಸಂಘಟನೆಗಳು ಭಾರತೀಯ ಕುಟುಂಬಗಳ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ವೃತ್ತಿಪರ ಪಠ್ಯಕ್ರಮವನ್ನು ಕಲಿಸುತ್ತಾರೆ.

ಶಾಲೆಗಳಲ್ಲಿ ಯೋಗ, ಆಯುರ್ವೇದ, ಸಂಸ್ಕಾರ ಶಿಕ್ಷಣ, ಧ್ಯಾನ ಮತ್ತು ವೈದಿಕ ಗಣಿತವನ್ನು ಕೂಡ ಕಲಿಸಬೇಕು – ಭಾರತೀಯ ಪೋಷಕರ ಬೇಡಿಕೆ

* ಭಾರತೀಯ ಧರ್ಮಗಳಿಗೆ ಸಂಬಂಧಿಸಿದಂತೆ ತಪ್ಪು ತಿಳುವಳಿಕೆಯ ಕಾರಣದಿಂದ ಭಾರತೀಯ ವಿದ್ಯಾರ್ಥಿಗಳನ್ನು ಪೀಡಿಸಲಾಗುತ್ತದೆ !

‘ಇನ್‌ಸೈಟ್ ಯುಕೆ’ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, ಬ್ರಿಟನ್ನಿನ ಶಾಲೆಗಳಲ್ಲಿ ಪ್ರತಿ 10 ಭಾರತೀಯ ವಿದ್ಯಾರ್ಥಿಗಳಲ್ಲಿ 5 ಜನರ ಮೇಲೆ ಧರ್ಮದ ಹೆಸರಿನಲ್ಲಿ ಗೂಂಡಾಗಿರಿ ಆಗುತ್ತದೆ. ಭಾರತೀಯ ಮಕ್ಕಳೊಂದಿಗೆ ಕಲಿಯುವ ಬ್ರಿಟಿಶ ಮಕ್ಕಳಿಗೆ ಭಾರತೀಯ ಧರ್ಮದ ವಿಷಯದಲ್ಲಿ ಮಾಹಿತಿಯಿರುವುದಿಲ್ಲ, ಅವರಲ್ಲಿ ಭಾರತೀಯ ಧರ್ಮದ ವಿಷಯದಲ್ಲಿ ತಪ್ಪು ತಿಳುವಳಿಕೆ ಇದೆ ಇದರಿಂದ ಭಾರತೀಯ ಮಕ್ಕಳ ಮೇಲೆ ದೌರ್ಜನ್ಯವಾಗುತ್ತದೆ. ಈಗ ಭಾರತೀಯ ಧರ್ಮಗಳ ಶಿಕ್ಷಣಗಳನ್ನು ಸೇರಿಸಿರುವುದರಿಂದ, ಇತರ ಸಮುದಾಯದ ಮಕ್ಕಳಿಗೂ ಭಾರತೀಯ ಧರ್ಮಗಳ ಬಗ್ಗೆ ಮಾಹಿತಿ ಸಿಗುತ್ತದೆ.

ಸಂಪಾದಕರ ನಿಲುವು

ಬ್ರಿಟನ್‌ನ ಶಾಲೆಯಲ್ಲಿ ಹಿಂದೂ ಧರ್ಮದ ಶಿಕ್ಷಣ ಸಿಗಲಿದೆ; ಆದರೆ ಭಾರತದಲ್ಲಿ ಯಾವಾಗ ಸಿಗಲಿದೆ ? ‘ಭಾರತದ ಹಿಂದೂಗಳಿಗೆ ಅವರ ಧರ್ಮದ ಶಿಕ್ಷಣ ಯಾವಾಗ ಸಿಗಲಿದೆ ?’ ಎಂಬ ಪ್ರಶ್ನೆಯನ್ನು ಈಗ ಇಲ್ಲಿನ ಹಿಂದೂಗಳು ಸರಕಾರಕ್ಕೆ ಕೇಳಬೇಕು !