ಬಾಗಪತ (ಉತ್ತರ ಪ್ರದೇಶ) ದಲ್ಲಿನ ಲಾಕ್ಷಾಗೃಹ ಹಿಂದೂಗಳಿಗೆ ಸೇರಿದ್ದು !

ಮುಸಲ್ಮಾನರ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ

ಬಾಗಪತ (ಉತ್ತರ ಪ್ರದೇಶ) – ಮಹಾಭಾರತದಲ್ಲಿ ಹೇಳಲಾಗಿರುವ ಲಾಕ್ಷಾಗೃಹವು ಈಗಿನ ಉತ್ತರ ಪ್ರದೇಶದ ಬಾಗಪತನ ಬರ್ನಾವಾದಲ್ಲಿದೆ. ಮುಸಲ್ಮಾನರು 1970ರಿಂದಲೂ ಲಾಕ್ಷಾಗೃಹವನ್ನು ‘ಬದ್ರುದ್ದೀನರ ಕ`೨ಕ`ಸಮಾಧಿ’ ಎಂದು ಹೇಳುತ್ತಿದ್ದರು. ಈ ಪ್ರಕರಣದಲ್ಲಿ ಕಳೆದ 53 ವರ್ಷಗಳಿಂದ ನ್ಯಾಯಾಲಯದಲ್ಲಿ ಖಟ್ಲೆಯು ನಡೆದುಬಂದಿತ್ತು. ನ್ಯಾಯಾಲಯವು ಈಗ ಲಾಕ್ಷಾಗೃಹವನ್ನು ಹಿಂದೂಗಳಿಗೆ ಒಪ್ಪಿಸುವಂತೆ ಆದೇಶ ನೀಡಿದೆ.

1. ಬದ್ರುದ್ದೀನರ ಹೇಳಿಕೆಯ ಸಮಾಧಿಯ ಸುತ್ತಮುತ್ತಲೂ ಮುಸಲ್ಮಾನರ ಸ್ಮಶಾನವಿದೆ ಹಾಗೂ ಈ ಭೂಮಿಯು ವಕ್ಫ ಬೋರ್ಡಗೆ ಸೇರಿದೆಯೆಂದು ಮುಸಲ್ಮಾನರು ಹೇಳುತ್ತಿದ್ದಾರೆ. ಆದರೆ ನ್ಯಾಯಾಲಯವು ಇದು ಸಮಾಧಿಯಲ್ಲ ಲಾಕ್ಷಾಗೃಹವಾಗಿದೆ ಎಂಬುದನ್ನು ಒಪ್ಪಿಕೊಂಡಿದೆ. ೨೪.೯೯ ಎಕರೆ ಭೂಮಿ ಹಾಗೂ ಸಮಾಧಿಯ ಸ್ಥಳವನ್ನು ಹಿಂದೂಗಳಿಗೆ ಒಪ್ಪಿಸುವಂತೆ ನ್ಯಾಯಾಲಯವು ಆದೇಶಿಸಿದೆ.

2. ಹಿಂದೂಗಳ ಪರ ನ್ಯಾಯವಾದಿಗಳಾದ ರಣವೀರ ಸಿಂಹ ರವರು ಮಾತನಾಡುತ್ತ, ನಾವು ಈ ಭೂಮಿಯ ಸಂದರ್ಭದಲ್ಲಿನ ಎಲ್ಲ ಪುರಾವೆಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದೆವು. ಲಾಕ್ಷಾಗೃಹದ ಇತಿಹಾಸವು ಮಹಾಭಾರತದ ಕಾಲದಿಂದಲೂ ಇದೆಯೆಂದು ನ್ಯಾಯಾಲಯಕ್ಕೆ ತಿಳಿಸಿದ್ದೆವು. ಈ ಸ್ಥಳದಲ್ಲಿ ಸಂಸ್ಕೃತ ಶಾಲೆ, ಹಾಗೆಯೇ ಮಹಾಭಾರತದ ಕಾಲಖಂಡದ ಕುರುಹುಗಳೂ ಇವೆ, ಎಂದು ಹೇಳಿದರು.

3. 1953 ರಲ್ಲಿ ಉತ್ಖನನದ ಸಮಯದಲ್ಲಿ, 4 ಸಾವಿರದ 500 ವರ್ಷಗಳಷ್ಟು ಹಳೆಯದಾದ ಮಹತ್ವದ ವಸ್ತುಗಳು ಇಲ್ಲಿ ಸಿಕ್ಕಿವೆ. ಇಲ್ಲಿ ಮಹಾಭಾರತದ ಕಾಲದ ಒಂದು ಸುರಂಗ ಮಾರ್ಗ ಮತ್ತು ಪೌರಾಣಿಕ ಗೋಡೆಯೂ ಇದೆ. ಪುರಾತತ್ವ ಇಲಾಖೆಯೂ ಇಲ್ಲಿಂದ ಮಹತ್ವದ ಪುರಾತನ ವಸ್ತುಗಳನ್ನು ವಶಪಡಿಸಿಕೊಂಡಿದೆ. ಈಗ ಈ ಸ್ಥಳವು ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಯ ವಶದಲ್ಲಿದೆ; ಆದರೆ 1970 ರಲ್ಲಿ `ಉತ್ತರಪ್ರದೇಶ ವಕ್ಫ ಬೋರ್ಡ’ ಈ ಭೂಮಿಯ ಮೇಲೆ ತನ್ನ ಹಕ್ಕು ಇರುವುದಾಗಿ ಹೇಳಿತ್ತು. ವಕ್ಫ ಬೋರ್ಡಿನ ಪರವಾಗಿ ಮುಕೀಮ ಖಾನರವರು `ಲಾಕ್ಷಾಗೃಹ ಟೀಲಾ’ವು ಬದ್ರುದ್ದೀನ ಶಾಹರವರ ಸಮಾಧಿಯಾಗಿದೆಯೆಂದು ಹೇಳಿ ಈ ಸಮಾಧಿ ಮತ್ತು ಅಕ್ಕಪಕ್ಕದ ಸ್ಮಶಾನದ ಮೇಲೆಯೂ ತಮ್ಮ ಮಾಲೀಕತ್ವದ ಹಕ್ಕನ್ನು ಪ್ರತಿಪಾದಿಸಿದ್ದರು. ಈ ಪ್ರಕರಣದಲ್ಲಿ ಮುಕೀಮ ಖಾನರು ಬ್ರಹ್ಮಚಾರಿ ಕೃಷ್ಣದತ್ತ ಇವರನ್ನು ಪ್ರತಿವಾದಿಯನ್ನಾಗಿ ಮಾಡಿದ್ದರು. ಈಗ ಇಬ್ಬರೂ ಬದುಕಿಲ್ಲ.

ಲಾಕ್ಷಾಗೃಹದ ಇತಿಹಾಸವೇನು?

(ಸೌಜನ್ಯ – )Anirudh Singh)

ಲಾಕ್ಷಾಗೃಹದ ಸ್ಥಳದಲ್ಲಿಯೇ ಮಹಾಭಾರತದ ಕಾಲದಲ್ಲಿ ದುರ್ಯೋಧನನು ಪಾಂಡವರನ್ನು ಸುಟ್ಟು ಹಾಕಲು ಪ್ರಯತ್ನಿಸಿದ್ದನು. ಪಾಂಡವರನ್ನು ಕೊಲ್ಲಲು ಕೌರವನು ಈ ಲಾಕ್ಷಾಗೃಹವನ್ನು ನಿರ್ಮಿಸಿದ್ದನು. ಮೇರುಗೆಣ್ಣೆ, ತುಪ್ಪ ಮತ್ತು ಎಣ್ಣೆಯನ್ನು ಬೆರೆಸಿ ಈ ಲಾಕ್ಷಾಗೃಹವನ್ನು ನಿರ್ಮಿಸಲಾಗಿತ್ತು. ಧೃತರಾಷ್ಟ್ರನ ಆದೇಶದ ಮೇರೆಗೆ ಪಾಂಡವರು ಇಲ್ಲಿ ವಾಸಿಸಲು ಬಂದಾಗ ಅದಕ್ಕೆ ಬೆಂಕಿ ಹಚ್ಚಲಾಗಿತ್ತು. ಆದರೆ ಪಾಂಡವರು ಒಂದು ಸುರಂಗದಿಂದ ಹೊರಗೆ ಬಂದಿದ್ದರು. ಬರ್ನಾವಾದಲ್ಲಿ ಈ ಸುರಂಗವು ಇಂದಿಗೂ ಅಸ್ತಿತ್ವದಲ್ಲಿದೆ.

ಸಂಪಾದಕೀಯ ನಿಲುವು

ಈಗ ದೇಶದಲ್ಲಿನ ಮುಸಲ್ಮಾನರು ಕಬಳಿಸಿರುವ ಹಿಂದೂಗಳ ಪ್ರತಿಯೊಂದು ಸ್ಥಳವನ್ನು ಮುಕ್ತಗೊಳಿಸುವ ಸಮಯ ಬಂದಿದೆ ಮತ್ತು ಅದು ಸಮಯಕ್ಕೆ ತಕ್ಕಂತೆ ಆಗುತ್ತಿದೆ. ಮುಂಬರುವ ಕೆಲವು ವರ್ಷಗಳಲ್ಲಿ, ದೇಶದಲ್ಲಿರುವ ಇಂತಹ ಎಲ್ಲ ಸ್ಥಳಗಳನ್ನು ಮುಕ್ತಗೊಳಿಸಲು ಹಿಂದೂಗಳು ಯುದ್ಧೋಪಾದಿಯಲ್ಲಿ ಪ್ರಯತ್ನಿಸಬೇಕು !