ಝರ್ಖಂಡ್ ಉಚ್ಚನ್ಯಾಯಾಲಯದಿಂದ ‘ಹನುಮಾನ್ ಕಥಾ’ ಕಾರ್ಯಕ್ರಮಕ್ಕೆ ಅನುಮತಿ !

ಝರ್ಖಂಡ್ ಮುಕ್ತಿ ಮೋರ್ಚಾ ನಿರಾಕರಿಸಿತ್ತು

ರಾಂಚಿ – ‘ಹನುಮಾನ್ ಕಥಾ’ ಕಾರ್ಯಕ್ರಮವನ್ನು ಆಯೋಜಿಸಲು ’ಹನುಮಾನ್ ಕಥಾ ಆಯೋಜನೆ ಸಮಿತಿ’ಗೆ ಜಾರ್ಖಂಡ್ ಉಚ್ಚನ್ಯಾಯಾಲಯವು ಅನುಮತಿ ನೀಡಿದೆ. ರಾಜ್ಯ ಸರಕಾರದ ಅಧಿಕಾರಿಗಳು ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರು.

೧. ಫೆಬ್ರವರಿ ೧೦ ರಿಂದ ಫೆಬ್ರವರಿ ೧೫ ರವರೆಗೆ ಪಲಮು ಜಿಲ್ಲೆಯ ಮೇದಿನಿನಗರದಲ್ಲಿ ’ಹನುಮಾನ್ ಕಥಾ’ ಆಯೋಜಿಸಲು ಅನುಮತಿ ಕೋರಿ ’ಹನುಮಾನ್ ಕಥಾ ಸಂಘಟನಾ ಸಮಿತಿ’ ಝರ್ಖಂಡ್ ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.

೨. ಪ್ರಕರಣದ ಪ್ರತಿವಾದಿಗಳು ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸುವ ಬಗ್ಗೆ ಮಾತ್ರ ಯುಕ್ತಿವಾದ ಮಂಡಿಸಿದ್ದಾರೆ ಎಂದು ನ್ಯಾಯಮೂರ್ತಿ ಆನಂದ್ ಸೇನ್ ಹೇಳಿದ್ದಾರೆ. ಈ ಯುಕ್ತಿವಾದವನ್ನು ತಳ್ಳಿಹಾಕಿದ ನ್ಯಾಯಾಧೀಶರು ‘ಹನುಮಾನ್ ಕಥಾ ಸಂಘಟನಾ ಸಮಿತಿ’ಗೆ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಲು ಆದೇಶ ನೀಡಿದರು.

೩. ಈ ಕಾರ್ಯಕ್ರಮದಲ್ಲಿ ಬಾಗೇಶ್ವರ ಧಾಮದ ಧರ್ಮಗುರು ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರು ಮುಖ್ಯ ವಕ್ತಾರರಾಗಿದ್ದಾರೆ.

ಸಂಪಾದಕರ ನಿಲುವು

* ಹಿಂದೂಗಳ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವ ಪೌರಶ ತೋರಿಸುವ ಜಾರ್ಖಂಡ್ ಮುಕ್ತಿ ಮೋರ್ಚಾ ಸರಕಾರವು ಮುಸಲ್ಮಾನರ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವ ಧೈರ್ಯ ತೋರಿಸುವುದೇ ?