ಭಾರತದಿಂದ ಮಾಲ್ಡೀವ್ಸ್‌ಗೆ ನೀಡುತ್ತಿದ್ದ ಆರ್ಥಿಕ ನೆರವಿನಲ್ಲಿ ಕಡಿತ !
ಇಸ್ಲಾಮಾಬಾದ (ಪಾಕಿಸ್ತಾನ) – ಭಾರತವು ಮಾಲ್ಡೀವ್ಸ್‌ಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ಶೇಕಡಾ ೨೨ ರಷ್ಟು ಕಡಿತಗೊಳಿಸಿದೆ. ೨೦೨೪-೨೦೨೫ ರ ಆರ್ಥಿಕ ವರ್ಷದಲ್ಲಿ ಮಾಲ್ಡೀವ್ಸ್‌ನ ಅಭಿವೃದ್ಧಿಗೆ ಕೇವಲ ೬೦೦ ಕೋಟಿ ರೂಪಾಯಿ ಅಂಗೀಕರಿಸಿದೆ. ಕಳೆದ ವರ್ಷ ಈ ಮೊತ್ತ ೭೭೦ ಕೋಟಿ ೯೦ ಲಕ್ಷ ಆಗಿತ್ತು. ವಿವಿಧ ಯೋಜನೆಗಳ ಅಡಿಯಲ್ಲಿ ಈ ನೆರವು ನೀಡಲಾಗುತ್ತಿತ್ತು. ಭಾರತವು ಹಣಕಾಸಿನ ನೆರವು ಕಡಿಮೆ ಮಾಡಿದ ನಂತರ ಪಾಕಿಸ್ತಾನವು ಮಾಲ್ಡೀವ್ಸ್‌ನ ಅಭಿವೃದ್ಧಿ ಕಾರ್ಯಗಳಲ್ಲಿ ನೆರವು ನೀಡುವುದಾಗಿ ಭರವಸೆ ನೀಡಿದೆ. ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ ಅವರು ಮಾಲ್ಡೀವ್ಸ್‌ನ ಅಧ್ಯಕ್ಷ ಮಹಮ್ಮದ್ ಮುಯಿಜ್ಜು ಅವರೊಡನೆ ದೂರವಾಣಿ ಮೂಲಕ ಚರ್ಚೆಮಾಡುವಾಗ ಈ ಭರವಸೆ ನೀಡಿದರು.
ಸಂಪಾದಕೀಯ ನಿಲುವುಸ್ವಂತಕ್ಕಾಗಿ ಬೇರೆಯವರಿಂದ ಭಿಕ್ಷೆ ಬೇಡಿ ದಿನ ಕಳೆಯುತ್ತಿರುವ ಪಾಕಿಸ್ತಾನ ಮಾಲ್ಡೀವ್ಸ್‌ಗೆ ಆರ್ಥಿಕ ಸಹಾಯನೀಡಲಿದೆಯಂತೆ, ಇದಕ್ಕಿಂತ ತಮಾಷೆ ಬೇರೊಂದಿಲ್ಲ! ‘ಪಾಕಿಸ್ತಾನವು ಮಾಲ್ಡೀವ್ಸ್‌ಗೆ ಸಹಾಯ ಮಾಡಬೇಕು‘, ಇದು ಪಾಕಿಸ್ತಾನದ ನಾಗರಿಕರಿಗೆ ಸ್ವೀಕಾರವಿದೆಯೇ ? |